• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇವೇಗೌಡರನ್ನು ಕಡೆಗಣಿಸಿ ಅವಮಾನಿಸಿದರೇ ರಾಹುಲ್ ಗಾಂಧಿ?

|
   ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ್ರನ್ನ ಅವಮಾನ ಮಾಡಿದ್ರಾ ರಾಹುಲ್ ಗಾಂಧಿ? | oneindia Kannada

   ನವದೆಹಲಿ, ಡಿಸೆಂಬರ್ 11: ಮಹಾಘಟಬಂಧನ ರಚನೆಯ ಸಲುವಾಗಿ ನಡೆದ ಸಭೆಯ ಬಳಿಕ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಇತರೆ ನಾಯಕರು ಕಡೆಗಣಿಸುವ ಮೂಲಕ ಅವಮಾನಿಸಿದ್ದಾರೆಯೇ?

   ಇಂಥಹದ್ದೊಂದು ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ. ಅದರಲ್ಲಿಯೂ ಬಿಜೆಪಿ ಬೆಂಬಲಿಗರು ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರಿಗೆ ನೀಡಿದ ಗೌರವವನ್ನು ಹೋಲಿಕೆ ಮಾಡಿ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

   ಮಹಾಘಟಬಂಧನ್ ನ ಪ್ರಧಾನಿ ಅಭ್ಯರ್ಥಿ ಯಾರು ಎಂದು ಬಿಜೆಪಿ ಹುಳ ಬಿಡುತ್ತಿರುವುದು ಏಕೆ?

   ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷಗಳ ಮುಖಂಡರ ಸಭೆ ಕರೆದಿದ್ದರು. ಅದರಲ್ಲಿ ಭಾಗವಹಿಸಲು ತೆರಳಿದ್ದ ಎಚ್ ಡಿ ದೇವೇಗೌಡ, ಬಳಿಕ ಬಿಜೆಪಿ ವಿರುದ್ಧ ಪ್ರಮುಖ ವಿರೋಧಪಕ್ಷಗಳು ಸೇರಿಕೊಂಡು ಸ್ಥಾಪಿಸಿರುವ ಮಹಾಘಟಬಂಧನದ ಸಭೆಯಲ್ಲಿ ಭಾಗವಹಿಸಿದ್ದರು.

   ಈ ಸಭೆ ಬಳಿಕ ನಡೆಸಿದ ಸುದ್ದಿಗೋಷ್ಠಿ ವೇಳೆ ಮುಂಚೂಣಿಯಲ್ಲಿ ಇರಬೇಕಾಗಿದ್ದ ದೇವೇಗೌಡ ಅವರು, ರಾಹುಲ್ ಗಾಂಧಿ ಹಿಂದೆ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು.

   ಸಭೆಯಲ್ಲಿ ನಾಯಕರು

   ಸಭೆಯಲ್ಲಿ ನಾಯಕರು

   ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಟಿಡಿಪಿ ನಾಯಕ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎನ್‌ಸಿಪಿ ನಾಯಕ ಶರದ್ ಪವಾರ್, ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಇತರೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.

   ಪ್ರಧಾನಿ ಅಭ್ಯರ್ಥಿ ಯಾರೆಂದು ಪ್ರಕಟಿಸಿ : ಮಹಾಘಟಬಂಧನಕ್ಕೆ ಬಿಜೆಪಿ ಸವಾಲು!

   ಊರ್ಜಿತ್ ರಾಜೀನಾಮೆ ಸುದ್ದಿ

   ಸಭೆ ನಡೆಯುವ ವೇಳೆಯೇ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ ಸುದ್ದಿ ಬಹಿರಂಗವಾಗಿತ್ತು.

   ಹೀಗಾಗಿ ಸಭೆ ಮುಗಿದ ಬಳಿಕ ಹೊರಬಂದ ರಾಹುಲ್ ಗಾಂಧಿ ಊರ್ಜಿತ್ ಪಟೇಲ್ ಅವರ ರಾಜೀನಾಮೆ ಕುರಿತು ಮಾಧ್ಯಮಗಳ ಎದುರು ಮಾತನಾಡಿದ್ದರು. ಆಗ ರಾಹುಲ್ ಗಾಂಧಿ ಮುಂದೆ ಇದ್ದರೆ ಅವರ ಅಕ್ಕಪಕ್ಕ ಶರದ್ ಯಾದವ್, ಚಂದ್ರಬಾಬು ನಾಯ್ಡು ಮತ್ತು ಸ್ಟಾಲಿನ್ ಹಾಗೂ ಇತರೆ ಕೆಲವು ಮುಖಂಡರು ಕಾಣಿಸಿಕೊಂಡಿದ್ದರು.

   ರೈತರಿಗೂ ಅನುಕೂಲ ಮಾಡಿಕೊಡಿ: ಮೋದಿಗೆ ದೇವೇಗೌಡ ತಾಕೀತು

   ದೇವೇಗೌಡರು ಎಲ್ಲಿದ್ದರು?

   ದೇವೇಗೌಡರು ಎಲ್ಲಿದ್ದರು?

   ಆದರೆ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಮುಂಚೂಣಿಯಲ್ಲಿ ಇರಲಿಲ್ಲ. ಬದಲಾಗಿ ರಾಹುಲ್ ಗಾಂಧಿ ಅವರ ಹಿಂದೆ ಸಣ್ಣನೆ ನಗುತ್ತಾ ನಿಂತಿದ್ದರು. ರಾಹುಲ್ ಗಾಂಧಿ ಮಾತು ಮುಗಿಸಿದ ನಂತರವೂ ದೇವೇಗೌಡರನ್ನು ಗಮನಿಸಿ ಜೊತೆಯಲ್ಲಿ ಕರೆದೊಯ್ಯಲಿಲ್ಲ ಎನ್ನಲಾಗಿದೆ.

   ಮಾಜಿ ಪ್ರಧಾನಿಯಾಗಿರುವ ದೇವೇಗೌಡರು, ಈ ಎಲ್ಲ ನಾಯಕರಿಗಿಂತ ವಯಸ್ಸಿನಲ್ಲಿಯೂ ಹಿರಿಯರು. ಅವರಿಗೆ ಸೂಕ್ತ ಗೌರವ ದಕ್ಕಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

   ದೇವೇಗೌಡರನ್ನು ಹೀಗೆ ಅವಮಾನಿಸಲಾಗಿದೆ ಎಂದು ಬಿಜೆಪಿಯ ಬೆಂಬಲಿಗರು ಎಲ್ಲ ನಾಯಕರ ಹಿಂದೆ ಅವರು ನಿಂತಿರುವ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿ ರಾಹುಲ್ ಗಾಂಧಿ ಮಾಧ್ಯಮದ ಮುಂದೆ ಮಾತನಾಡುತ್ತಿರುವ ವಿಡಿಯೋವನ್ನು ಕೂಡ ಶೇರ್ ಮಾಡಿಕೊಂಡು ವಾಗ್ದಾಳಿ ನಡೆಸಿದ್ದಾರೆ.

   ಅವರು ಮಾಜಿ ಪ್ರಧಾನಿ, ಗೌರವ ನೀಡಿ

   ಈ ಚಿತ್ರದ ಸಂದರ್ಭದ ಬಗ್ಗೆ ನನಗೆ ತಿಳಿದಿಲ್ಲ. ಆದರೆ, ನಮ್ಮ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಹಿಂದಿನ ಸಾಲಿಗೆ ತಳ್ಳಿರುವುದನ್ನು ನೋಡುವಂತಾಗಿರುವುದು ದುರದೃಷ್ಟಕರ. ಅವರಿಗೆ ಹಾಗೆ ಆಗಬಾರದಿತ್ತು.

   ರಾಹುಲ್ ಗಾಂಧಿ ಅವರೇ ನಿಮಗೆ ಅವರಿಗೆ ಏನನ್ನೂ ಕೊಡಲು ಸಾಧ್ಯವಿಲ್ಲವಾದರೆ, ದಯವಿಟ್ಟು ಕಡೇಪಕ್ಷ ಅವರಿಗೆ ಗೌರವ ನೀಡಿ. ಅವರು ನಮ್ಮ ಮಾಜಿ ಪ್ರಧಾನಿ ಎಂದು ಆಕಾಶ್ ವರ್ಮಾ ಎಂಬುವವರು ಟ್ವೀಟ್ ಮಾಡಿದ್ದಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Some pics and videos are shared by BJP supporters in Social media describing Devegowda was insulted by Rahul Gandhi and other leaders of Mahagathbandhan.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more