ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಡಿಕೆ, ಧರಂಗೆ ಚುನಾವಣೆ ವೇಳೆ ಗಣಿಕಂಟಕ

|
Google Oneindia Kannada News

ನವದೆಹಲಿ, ಮಾ.5 : ಲೋಕಸಭೆ ಚುನಾವಣೆ ವೇಳೆಯೇ ಮಾಜಿ ಮುಖ್ಯಮಂತ್ರಿಗಳಾದ ಧರಂಸಿಂಗ್ ಮತ್ತು ಎಚ್‌ಡಿ ಕುಮಾರಸ್ವಾಮಿ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ತಮ್ಮ ಅಧಿಕಾರಾವಧಿಯಲ್ಲಿ ಎಸಗಿದ್ದಾರೆ ಎನ್ನಲಾದ ಗಣಿ ಅಕ್ರಮಗಳ ಕುರಿತು ಲೋಕಾಯುಕ್ತ ತನಿಖೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಗೆ ಸೂಚಿಸಿದೆ.

ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ ಎಸ್.ಎಂ.ಕೃಷ್ಣ, ಧರಂಸಿಂಗ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಎಸಗಿರುವ ಗಣಿಗಾರಿಕೆ ಅಕ್ರಮಗಳ ತನಿಖೆ ನಡೆಸಬೇಕೆಂದು ಸಲ್ಲಿಸಿದ್ದ ಖಾಸಗಿ ದೂರಿನ ಕುರಿತು ತನಿಖೆ ನಡೆಸುವಂತೆ ರಾಜ್ಯ ಲೋಕಾಯುಕ್ತ ವಿಶೇಷ ನ್ಯಾಯಾಲಯವು, ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿತ್ತು.

Dharam Singh, Kumaraswamy

ತಮ್ಮ ಮೇಲೆ ಮಾಡಿರುವ ಆರೋಪಗಳ ಕುರಿತು ಲೋಕಾಯುಕ್ತ ತನಿಖೆಗೆ ತಡೆ ನೀಡಬೇಕು ಎಂದು ಎಸ್‌. ಎಂ. ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಎಸ್‌. ಎಂ. ಕೃಷ್ಣ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ 2012ರ ಜನವರಿ 27ರಂದು ಲೋಕಾಯುಕ್ತ ಪೊಲೀಸರ ವಿಚಾರಣೆಗೆ ತಡೆ ನೀಡಿ ಆದೇಶ ಪ್ರಕಟಿಸಿತ್ತು. [ಮೂವರು ಮಾಜಿ ಸಿಎಂಗಳಿಗೆ ಗಣಿ ಸಂಕಷ್ಟ]

ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕುಮಾರಸ್ವಾಮಿ ಮತ್ತು ಧರಂಸಿಂಗ್ ವಿರುದ್ಧದ ತನಿಖೆಗೆ ಒಪ್ಪಿಗೆ ನೀಡಿದೆ. ಇವರು ಮಾತ್ರವಲ್ಲೇ ಗಣಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ 11 ಅಧಿಕಾರಿಗಳ ವಿರುದ್ಧವೂ ತನಿಖೆ ಮುಂದುವರೆಸ ಬಹುದು ಎಂದು ಸ್ಪಷ್ಟ ಪಡಿಸಿದೆ. [ಮಾಜಿ ಸಿಎಂಗಳ ವಿರುದ್ಧ ತನಿಖೆ ನಡೆಸಲು ಅಸ್ತು ಎಂದ ಕೋರ್ಟ್]

ತನ್ನ ಅದೇಶದಲ್ಲಿ ಕೋರ್ಟ್ ಲೋಕಾಯುಕ್ತ ತನಿಖೆ ಕುರಿತಂತೆ ಹಿಂದೆ ನೀಡಿರುವ ತಡೆಯಾಜ್ಞೆಯು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಮೇಲಿನ ಅಪಾದನೆಗಳಿಗೆ ಮಾತ್ರ ಸೀಮಿತವಾಗಿದ್ದು, ಧರಂಸಿಂಗ್, ಕುಮಾರಸ್ವಾಮಿ ಇತರ ಅಧಿಕಾರಿಗಳ ವಿರುದ್ಧದ ತನಿಖೆಗೆ ಇದು ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.

ಅಧಿಕಾರಿಗಳ ವಿರುದ್ಧವೂ ತನಿಖೆ : ಇಬ್ಬರು ಮಾಜಿ ಸಿಎಂಗಳ ಜೊತೆಗೆ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿರುವ 11 ಮಂದಿ ಅಧಿಕಾರಿಗಳು ತನಿಖೆ ಎದುರಿಸಬೇಕು ಅಧಿಕಾರಿಗಳಾದ ಡಾ.ಎಂ.ಬಸಪ್ಪರೆಡ್ಡಿ, ಗಂಗಾರಾಮ್ ಬಡೇರಿಯ, ಡಾ.ವಿ.ಉಮೇಶ್ ಐ.ಆರ್.ಪೆರುಮಾಳ್, ಕೆ.ಎಸ್.ಮಂಜುನಾಥ್, ಡಿ.ಎಸ್.ಅಶ್ವಥ್, ಜೀಜಾ ಹರಿಸಿಂಗ್, ಮಹೇಂದ್ರ ಜೈನ್, ಶಂಕರಲಿಂಗಯ್ಯ, ಕೆ.ಶ್ರೀನಿವಾಸ್ ಹಾಗೂ ಎಂ.ರಾಮಪ್ಪ ಅವರಿಗೆ ತನಿಖೆಯ ಬಿಸಿ ತಟ್ಟಲಿದೆ.

English summary
The Supreme Court ordered an inquiry into a private complaint against former chief ministers Dharam Singh and HD Kumaraswamy over alleged illegal mining case. The private complaint, accusing Dharam Singh and Kumaraswamy of corruption was filed by social activist TJ Abraham.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X