ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ತೀರ್ಪಿಗೆ ಕೇಂದ್ರ ಮರು ಪರಿಶೀಲನಾ ಅರ್ಜಿ ಹಾಕಲಿ: ದೇವೇಗೌಡ ಸಲಹೆ

|
Google Oneindia Kannada News

ನವದೆಹಲಿ, ಮಾರ್ಚ್ 08: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೇಂದ್ರ ಜಲಸಂಪನ್ಮೂಲ ಸಚಿವ ನಿತೀನ್ ಗಡ್ಕರಿ ಅವರನ್ನು ಕಾವೇರಿ ನದಿ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸುವಂತೆ ಒತ್ತಾಯಿಸಿದ್ದಾರೆ.

ದೆಹಲಿಯಲ್ಲಿ ಗುರುವಾರ ಮಾತನಾಡಿದ ಅವರು, ಕಾವೇರಿ ವಿವಾದ ಬಗ್ಗೆ ಸುಪ್ರೀಂ ಕೊರ್ಟ್ ತೀರ್ಪು ನೀಡಿತ್ತು ತೀರ್ಪಿನ ಕೆಲ ವಿಷಯಗಳನ್ನು ಅಧ್ಯಯನ ಮಾಡಿದ್ದೇನೆ ಅದರ ಆಧಾರದ ಮೇಲೆ ಗಡ್ಕರಿ ಜೊತೆಗೆ ಮರು ಪರಿಶೀಲನೆ ಅರ್ಜಿ ಹಾಕುವ ಕುರಿತು ಚರ್ಚಿಸಿದ್ದೇನೆ ಎಂದರು.

ಕಾವೇರಿ ವಿವಾದದ ತೀರ್ಪು : ಸರ್ಕಾರದ ಕಿವಿ ಹಿಂಡಿದ ಗೌಡರುಕಾವೇರಿ ವಿವಾದದ ತೀರ್ಪು : ಸರ್ಕಾರದ ಕಿವಿ ಹಿಂಡಿದ ಗೌಡರು

ಕರ್ನಾಟಕ ಏಕೆ ಅರ್ಜಿ ಹಾಕಿಲ್ಲ ಎಂದು ಕೇಳಿದರು ನಾನು ಮಂಡಳಿ ರಚನೆಗೆ ಕಾಲವಕಾಶ ಕೇಳುವಂತೆ ಮನವಿ ಮಾಡಿದ್ದೇನೆ ಮಂಡಳಿ ರಚನೆ ಸಮಸ್ಯೆ ಬಗ್ಗೆ ಪರಿಗಣನೆ ಮಾಡಬೇಕು ಎಂದಿದ್ದೇನೆ ಎರಡು ರಾಜ್ಯಕ್ಕೂ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದೇನೆ ಸಂಸತ್ ಆವರಣದಲ್ಲಿ ತಮಿಳುನಾಡು ಸಂಸದರು ಮಂಡಳಿ ರಚನೆಗೆ ಒತ್ತಾಯಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.

Devegowda urges Gadkari to file review petition on Cauvery verdict

ನಮಗೆ ಕುಡಿಯುವ ನೀರು ಎಷ್ಟು ಬೇಕು ಯೋಚಿಸಬೇಕು ಕಾವೇರಿ ಕಣಿವೆಯ ಏತ ನೀರಾವರಿ ಯೋಜನೆಗಳನ್ನು ರದ್ದು ಮಾಡಿದ್ದಾರೆ ನ್ಯೂನತೆಗಳು ಸರಿ ಪಡಿಸಿ ಬೋರ್ಡ್ ರಚನೆ ಮಾಡಬೇಕು ಸರ್ವ ಪಕ್ಷ ಸಭೆ ಹೊಗಲಾಗುವುದಿಲ್ಲ ಎಂದು ತಿಳಿಸಿದ್ದೇನೆ. ಸಂತೋಷಪಡುವಂತ ಅಂಶ ಸುಪ್ರಿಂಕೊರ್ಟ್ ತೀರ್ಪಿನಲ್ಲಿಲ್ಲ ಕರ್ನಾಟಕಕ್ಕೆ ಅನ್ಯಾಯವಾಗಿರುವುದು ಗಡ್ಕರಿ ಗಮನಕ್ಕೆ ತಂದಿದ್ದೇನೆ. ಸುಪ್ರಿಂಕೊರ್ಟ್ ಹದಿನೈದು ವರ್ಷ ವಾಪಸ್ ಬರದಂತೆ ಹೇಳಿದೆ.

ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಿಎಟಿಯಿಂದ ತಡೆರೋಹಿಣಿ ಸಿಂಧೂರಿ ವರ್ಗಾವಣೆಗೆ ಸಿಎಟಿಯಿಂದ ತಡೆ

ರೋಹಿಣಿ ಸಿಂಧೂರಿ ಪ್ರಾಮಾಣಿಕ ಅಧಿಕಾರಿ: ರೋಹಿಣಿ ಸಿಂಧೂರಿ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿ ಯಾವ ರಾಜಕೀಯ ವ್ಯಕ್ತಿ ಪ್ರಭಾವಕ್ಕೆ ಈಡಾಗದ ಅಧಿಕಾರಿ, ಅರ್ಹತೆ ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ತಾರೆ ದೇವೇಗೌಡ ಸೇರಿದಂತೆ ಯಾವ ರಾಜಕಾರಣಿ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ವಿಷಯಾಧರಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಅಧಿಕಾರಿಗಳ ವರ್ಗಾವಣೆ ಪಟ್ಟಿ ಗಮನಿಸಿದರೆ ಗೊತ್ತಾಗುವುದು ಚುನಾವಣೆ ಹಿನ್ನೆಲೆ ಮಾಡಿರುವಂತ ವರ್ಗಾವಣೆ ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲ ಇಂತಹ ಸಾಕಷ್ಟು ಉದಾಹರಣೆಗಳನ್ನು ನಾನು ಹೇಳಬಲ್ಲೆ ಎಂದರು.

English summary
Former prime minister HD Deve gowda has met Union minister for water resources Nitin Gadkari on Thursday and discussed about supreme court's verdict on Cauvery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X