ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ದೇವೇಗೌಡರ ಬೆಂಬಲ

|
Google Oneindia Kannada News

Recommended Video

ಏಸು ಪ್ರತಿಮೆ ನಿರ್ಮಾಣಕ್ಕೆ ದೇವೇಗೌಡರ ಬೆಂಬಲ | HD DEVEGOWDA | DK SHIVA KUMAR | ONEINDIA KANNADA

ನವದೆಹಲಿ, ಜನವರಿ 13: ಕನಕಪುರದ ಕಪಾಲಿ ಬೆಟ್ಟದಲ್ಲಿ ಏಸುವಿನ ಪ್ರತಿಮೆ ನಿರ್ಮಾಣ ಮಾಡಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ಪರೋಪಕ್ಷವಾಗಿ ಬೆಂಬಲ ಸೂಚಿಸಿದ್ದಾರೆ.

ಏಸು ಪ್ರತಿಮೆ ನಿರ್ಮಾಣವನ್ನು ವಿರೋಧಿಸುತ್ತಿರುವ ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅವರು ಕನಕಪುರದಲ್ಲಿ ಏಸು ಪ್ರತಿಮೆ ನಿರ್ಮಾಣ ವಿರೋಧಿಸಲು ಬೆಂಗಳೂರು ಮತ್ತು ಮಂಗಳೂರಿನಿಂದ ಬಂದು ಪ್ರತಿಭಟನೆ ಮಾಡಿದ್ದಾದರೂ ಏಕೆ ಎಂದು ಕೇಳಿದರು.

ಎಲ್ಲಾ ಧರ್ಮದವರಿಗೂ ರಕ್ಷಣೆ ಕೊಡಬೇಕು

ಎಲ್ಲಾ ಧರ್ಮದವರಿಗೂ ರಕ್ಷಣೆ ಕೊಡಬೇಕು

ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ಅಂಬೇಡ್ಕರ್ ಅವರು ಕಾನೂನು ಬರೆದು ಎಲ್ಲಾ ಧರ್ಮಗಳಿಗೆ ರಕ್ಷಣೆ ಕೊಡಬೇಕು ಎಂದು ಹೇಳಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ 5 ಧರ್ಮೀಯರನ್ನು ಸೇರಿಸಿ ಮುಸ್ಲಿಮರನ್ನು ಮಾತ್ರ ಹೊರಗಿಟ್ಟರು. ಬಿಜೆಪಿಯವರು ಈ ಕಾಯ್ದೆಯನ್ನು ರಾಜಕೀಯ ಕಾರಣಕ್ಕೇ ಮಾಡಿರುವುದು.

ಡಿಕೆ ಶಿವಕುಮಾರ್ ರಾಜಕೀಯ ಭವಿಷ್ಯ ನಾಶ: ಕನಕಪುರ ಚಲೋದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ಡಿಕೆ ಶಿವಕುಮಾರ್ ರಾಜಕೀಯ ಭವಿಷ್ಯ ನಾಶ: ಕನಕಪುರ ಚಲೋದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್

ಏಸು ಪ್ರತಿಮೆ ನಿರ್ಮಾಣಕ್ಕೆ ಪರೋಕ್ಷ ಬೆಂಬಲ

ಏಸು ಪ್ರತಿಮೆ ನಿರ್ಮಾಣಕ್ಕೆ ಪರೋಕ್ಷ ಬೆಂಬಲ

ಕನಕಪುರದ ಕಪಾಲಿ ಬೆಟ್ಟದಲ್ಲಿ 110 ಅಡಿ ಎತ್ತರದ ಏಸುವಿನ ಏಕಶಿಲಾ ಪ್ರತಿಮೆ ನಿರ್ಮಾಣಕ್ಕೆ ಹೊರಟಿರುವ ಡಿಕೆಶಿ ನಿರ್ಧಾರಕ್ಕೆ ದೇವೇಗೌಡರು ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಟ್ಟದ ಮೇಲೆ ಡಿಕೆ ಶಿವಕುಮಾರ್ ಏಸು ಪ್ರತಿಮೆ ನಿರ್ಮಿಸಲು ತೆಗೆದುಕೊಂಡಿರುವ ನಿರ್ಣಯಕ್ಕೆ ತಮ್ಮ ಅಭ್ಯಂತರ ಇಲ್ಲ ಎಂದು ಮಾಜಿ ಪ್ರಧಾನಿಯವರು ಸ್ಪಷ್ಟಪಡಿಸಿದ್ದಾರೆ.

ಇದು ಕಂದಾಯ ಇಲಾಖೆಗೆ ಸೇರಿದ ವಿಚಾರ

ಇದು ಕಂದಾಯ ಇಲಾಖೆಗೆ ಸೇರಿದ ವಿಚಾರ

ಇದು ಕಂದಾಯ ಇಲಾಖೆ ಗೆ ಸೇರಿದ ವಿಷಯ,ಒಂದೆಡೆ ಮುನೇಶ್ವರ ಬೆಟ್ಟ ಮತ್ತೊಂದೆಡೆ ಏಸು ಬೆಟ್ಟ ಅನ್ನೋ ವಿವಾದ ಇದೆ ,ವಿವಾದ ಹುಟ್ಟುಹಾಕುವ ಕೆಲಸ ಮೊದಲಿಂದ ನಡೆಯುತ್ತಿದೆ,ಇದು ಡಿಕೆ ಶಿವಕುಮಾರ್ ಗೆ ಗೊತ್ತಿದೆ.ಈಗಾಗಲೇ ಕಂದಾಯ ಸಚಿವರು ಹೇಳಿದ್ದಾರೆ

ಅವರು ಪರಿಶೀಲನೆ ಮಾಡುತ್ತಾರೆ.ನನ್ನ ಆದ್ಯತೆ ಅಲ್ಲಿ ಕಾನೂನು ಸುವ್ಯವ್ಯಸ್ಥತೆ ಕಾಪಾಡುವುದೇ ಆಗಿದೆ ಎಂದು ಗೇಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬಿಜೆಪಿ ಬಗ್ಗೆ ಎಲ್ಲರಿಗೂ ಭ್ರಮೆ ಇದೆ

ಬಿಜೆಪಿ ಬಗ್ಗೆ ಎಲ್ಲರಿಗೂ ಭ್ರಮೆ ಇದೆ

ಬಿಜೆಪಿಯ ಬಗ್ಗೆ ಮಾಧ್ಯಮಗಳಿಗೆ ಭ್ರಮೆ ಇದೆ. ಬಿಜೆಪಿಯವರು 19 ಚರ್ಚ್​ಗಳನ್ನು ಒಡೆದರು.

ಬೈಬಲ್ ಅನ್ನು ಸುಟ್ಟುಹಾಕಿದರು. ಇಬ್ಬರು ಮಕ್ಕಳನ್ನೂ ಸುಟ್ಟರು. 10 ಮಂದಿ ದಾದಿಯರನ್ನು ರೇಪ್ ಮಾಡಿದರು. ಆಗ ಯಾರೂ ಕೂಡ ಮಾತನಾಡಲಿಲ್ಲ ಎಂದು ವಿವರಿಸಿದರು.

English summary
JDS supremo HD Devegowda Give Support To The Construction Of The Statue Of Jesus At Kapali Hill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X