ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಜಪೇಯಿ ಅಂತಿಮ ದರ್ಶನ ಪಡೆದ ದೇವೇಗೌಡ, ಕುಮಾರಸ್ವಾಮಿ

By Manjunatha
|
Google Oneindia Kannada News

Recommended Video

Atal Bihari Vajpayee :ವಾಜಪೇಯಿ ಅಂತಿಮ ದರ್ಶನಕ್ಕೆ ದೆಹಲಿಗೆ ಹೋದ ಎಚ್.ಡಿ.ಕೆ ಹಾಗೂ ದೇವೇಗೌಡರು..!

ನವದೆಹಲಿ, ಆಗಸ್ಟ್ 17: ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಇಬ್ಬರೂ ಸಹ ಇಂದು ದೆಹಲಿಗೆ ತೆರಳಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ದರ್ಶನ ಪಡೆದರು.

ಕೃಷ್ಣ ಮೆನನ್‌ ರಸ್ತೆಯಲ್ಲಿ ಅಟಲ್‌ ಜೀ ಅವರ ನಿವಾಸಕ್ಕೆ ತೆರಳಿದ ಇಬ್ಬರೂ ರಾಜ್ಯದ ನಾಯಕರು ಅಲ್ಲಿಯೇ ವಾಜಪೇಯಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.

LIVE Updates: ಬಿಜೆಪಿ ಕೇಂದ್ರ ಕಚೇರಿಗೆ ಬಂದ ವಾಜಪೇಯಿ ಪಾರ್ಥಿವ ಶರೀರLIVE Updates: ಬಿಜೆಪಿ ಕೇಂದ್ರ ಕಚೇರಿಗೆ ಬಂದ ವಾಜಪೇಯಿ ಪಾರ್ಥಿವ ಶರೀರ

ಮಾಜಿ ಪ್ರಧಾನಿ ಅಟಲ್ ಜೀ ಅವರ ಅಗಲಿಕೆ ಬಗ್ಗೆ ನಿನ್ನೆಯೇ ದೇವೇಗೌಡ ಅವರು ಹಾಗೂ ಕುಮಾರಸ್ವಾಮಿ ಅವರಿಬ್ಬರೂ ಸಂತಾಪ ವ್ಯಕ್ತಪಡಿಸಿದ್ದರು. ಇಂದು ಅಂತಿಮ ದರ್ಶನದ ಬಳಿಕ ದೇವೇಗೌಡ ಅವರು ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರನ್ನು ಭೇಟಿಯಾಗಿದ್ದಾರೆ.

Deve Gowda and Kumaraswamy had final look of Atal Bihari Vajpayee

ದೇವೇಗೌಡ ಅವರು ವಾಜಪೇಯಿ ಅವರೊಂದಿಗೆ ತಮ್ಮ ಹಳೆಯ ದಿನಗಳನ್ನು ನೆನೆಸಿಕೊಂಡಿದ್ದರು. ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡುವ ಸಮಯದಲ್ಲಿ ತಮಗೆ ಕರೆ ಮಾಡಿದ್ದ ವಾಜಪೇಯಿ ಅವರು ಅಧಿಕಾರ ಉಳಿಸಿಕೊಡುವುದಾಗಿ ಹೇಳಿದ್ದರು ಎಂದು ದೇವೇಗೌಡ ನೆನಪು ಮಾಡಿಕೊಂಡಿದ್ದರು.

ವಾಜಪೇಯಿ ದಾರ್ಶನಿಕ ವ್ಯಕ್ತಿತ್ವದ ರಾಜಕಾರಣಿ, ಅಜಾತಶತ್ರು: ಎಚ್ಡಿಕೆ ಸಂತಾಪವಾಜಪೇಯಿ ದಾರ್ಶನಿಕ ವ್ಯಕ್ತಿತ್ವದ ರಾಜಕಾರಣಿ, ಅಜಾತಶತ್ರು: ಎಚ್ಡಿಕೆ ಸಂತಾಪ

ದೇವೇಗೌಡ, ಕುಮಾರಸ್ವಾಮಿ ಮಾತ್ರವಲ್ಲದೆ ರಾಜ್ಯದ ಹಲವು ಬಿಜೆಪಿ ಶಾಸಕರು, ಸಂಸದರು, ಮುಖಂಡರು ನವದೆಹಲಿಗೆ ತೆರಳಿ ಅಟಲ್‌ ಜೀ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿಯೂ ಭಾಗವಹಿಸಲಿದ್ದಾರೆ.

English summary
Deve Gowda and Kumaraswamy went to Delhi and have final look of Atal Bihari Vajpayee. Deve Gowda and Kumaraswamy expressed their condolence yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X