ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಭಾರತವನ್ನು ಆವರಿಸಿದ ಚಳಿಕಾಟ, ಹಲವರು ಬಲಿ

By Mahesh
|
Google Oneindia Kannada News

ನವದೆಹಲಿ, ಡಿ.22: ಸತತವಾಗಿ ಕುಸಿಯುತ್ತಿರುವ ಪಾದರಸದ ಮಟ್ಟ, ಕಲ್ಲು ಕೂಡಾ ಕೊರೆಯುವಂಥ ಚಳಿ, ಬೆಂಕಿಯ ಬಿಸಿಗೂ ಬೆಚ್ಚಗಾಗದ ದೇಹ, ಹೊರ ಸಂಚಾರವೇ ಸಾಧ್ಯವಾಗದಂಥ ಪರಿಸ್ಥಿತಿಯಲ್ಲಿ ಉತ್ತರ ಭಾರತ ಸದ್ಯಕ್ಕೆ ನಲುಗುತ್ತಿದೆ. ಚಳಿಗಾಳಿ ಹೊಡೆತಕ್ಕೆ ಉತ್ತರಪ್ರದೇಶದಲ್ಲಿ ಎಂಟು ಮಂದಿ ಬಲಿಯಾಗಿರುವ ಸುದ್ದಿ ಬಂದಿದೆ.

ರಾಜಧಾನಿ ದೆಹಲಿಯಲ್ಲಿ ಪ್ರತಿಕೂಲ ಹವಾಮಾನದಿಂದಾಗಿ 36 ವಿಮಾನಗಳ ಹಾರಾಟ ವಿಳಂಬಗೊಂಡಿದ್ದರೆ 3 ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. ಸುಮಾರು 50 ರೈಲುಗಳು ವಿಳಂಬವಾಗಿ ಚಲಿಸಲಿದ್ದು, 12 ರೈಲುಗಳು ಬದಲಿ ವೇಳಾಪಟ್ಟಿಯಂತೆ ಪ್ರಯಾಣಿಸಲಿದೆ.

ದೆಹಲಿಯಲ್ಲಿ 15 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶವಿದ್ದು ಚಳಿಗಾಲದಲ್ಲಿ ಈ ಮುಂಚೆ ದಾಖಲಾದ ಉಷ್ಣಾಂಶಕ್ಕಿಂತ 7 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ದಟ್ಟವಾದ ಮಂಜು ಮುಸುಕಿದ ವಾತಾವರಣ ಮುಂದುವರೆಯಲಿದೆ. ಕನಿಷ್ಠ ಉಷ್ಣಾಂಶ 5 ಡಿಗ್ರಿಗೆ ಕುಸಿಯಲಿದೆ ಇದೇ ರೀತಿ ವಾತಾವರಣ ಉತ್ತರಭಾರತದ ಹಲವೆಡೆ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಮ್ಮು ಕಾಶ್ಮೀರದಲ್ಲಿ ಅತ್ಯಂತ ಕಷ್ಟಕರ ವಾತಾವರಣ

ಜಮ್ಮು ಕಾಶ್ಮೀರದಲ್ಲಿ ಅತ್ಯಂತ ಕಷ್ಟಕರ ವಾತಾವರಣ

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಚಿಲಾಯ್‌ಕಾಲನ್ ಋತು ಆರಂಭವಾಗಿರುವ ಬೆನ್ನಲ್ಲೇ ದೆಹಲಿಯಲ್ಲಿ ಚಳಿ ತೀವ್ರವಾಗತೊಡಗಿದೆ. ಇದರಿಂದಾಗಿ ಪ್ರಪ್ರಥಮ ಹಿಮಪಾತದ ನಿರೀಕ್ಷೆ ಹುಟ್ಟು ಹಾಕಿದೆ. ಭಾನುವಾರ ಕನಿಷ್ಠ ತಾಪಮಾನ ಮೈನಸ್ 1.8 ಡಿಗ್ರಿ ತಲುಪಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ -4.4 ಡಿಗ್ರಿಯಷ್ಟಿತ್ತು.

ಚಿತ್ರದಲ್ಲಿ: ದಾಲ್ ಸರೋವರದಲ್ಲಿ ಆಹಾರ ನಿರೀಕ್ಷೆಯಲ್ಲಿರುವ ಬಕಪಕ್ಷಿ PTI Photo
ಸಾವನ್ನಪ್ಪಿದ್ದು ಚಳಿಗಾಳಿಗೋ ಅಥವಾ ಬೇರೆ ಸಮಸ್ಯೆ

ಸಾವನ್ನಪ್ಪಿದ್ದು ಚಳಿಗಾಳಿಗೋ ಅಥವಾ ಬೇರೆ ಸಮಸ್ಯೆ

ದೆಹಲಿಯಲ್ಲಿ ಸಾವನ್ನಪ್ಪಿದವರು ಕೆಟ್ಟಗಾಳಿ ಸೇವನೆ ಪರಿಣಾಮ ಉಸಿರಾಟದ ತೊಂದರೆ (asphyxiation) ಉಂಟಾಗಿ ಸಾವನ್ನಪ್ಪಿದ್ದಾರೆ. ನೇರವಾಗಿ ಚಳಿ ಹೊಡೆತಕ್ಕೆ ಸಿಲುಕಿ ಸತ್ತಿದ್ದಾರೆ ಎನ್ನಲಾಗುವುದಿಲ್ಲ. ಉತ್ತರಪ್ರದೇಶದಲ್ಲಿ ದಿಢೀರ್ ಹವಾಮಾನ ವೈಪರೀತ್ಯದಿಂದ ಜನ ತತ್ತರಿಸಿರುವುದು ಕಂಡು ಬಂದಿದೆ ಎಂದು ವೈದ್ಯರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲೂ ಚಳಿಕಾಟ

ಮಹಾರಾಷ್ಟ್ರದಲ್ಲೂ ಚಳಿಕಾಟ

ಸತ್ಪುರ ಪರ್ವತ ಶ್ರೇಣಿಯ ದಾಬ್ ಗ್ರಾಮದ ಸುತ್ತ ಮುತ್ತ 2 ಡಿಗ್ರಿ ಸೆಲ್ಸಿಯಸ್ ನಷ್ಟು ತಲುಪಿದ್ದು, ಮಹಾರಾಷ್ಟ್ರದ ಹಲವೆಡೆ ಹವಾಮಾನದಲ್ಲಿ ಬದಲಾವಣೆ ಕಂಡು ಬಂದಿದೆ.
ಚಿತ್ರದಲ್ಲಿ: ದೆಹಲಿಯ ರಾಜಪಥದ ದೃಶ್ಯ ಪಿಟಿಐ ಚಿತ್ರ

ದೆಹಲಿ ರಸ್ತೆಯಲ್ಲಿ ಆನೆ ಬಂತೊಂದಾನೆ

ದೆಹಲಿ ರಸ್ತೆಯಲ್ಲಿ ಆನೆ ಬಂತೊಂದಾನೆ

ಮೊದಲೇ ಟ್ರಾಫಿಕ್ ಸಮಸ್ಯೆ, ಪ್ರತಿಕೂಲ ವಾತಾವರಣ ಇದರ ನಡುವೆ ದೆಹಲಿ ರಸ್ತೆಯಲ್ಲಿ ಆನೆ ಬಂತೊಂದಾನೆ ದೃಶ್ಯ PTI Photo by Kamal Kishore

ಅಲಹಾಬಾದ್ ನಲ್ಲಿ ಶಾಲೆಗಳು ಬಂದ್

ಅಲಹಾಬಾದ್ ನಲ್ಲಿ ಶಾಲೆಗಳು ಬಂದ್

ಕಳೆದ ವಾರ ಶಾಲೆಗಳಿಗೆ ತೆರಳಿದ್ದ ಮಕ್ಕಳು ಈ ವಾರ ಮುಂದಿನ ಸೂಚನೆ ಸಿಗುವ ತನಕ ಮನೆಯಲ್ಲೇ ಉಳಿಯಬಹುದಾಗಿದೆ. ಅಲಹಾಬಾದಿನಲ್ಲಿ ಮಕ್ಕಳು ಮುಂಜಾನೆಯ ಚಳಿಯಲ್ಲಿ ರೈಲ್ವೆ ಟ್ರ್ಯಾಕ್ ದಾಟುವ ದೃಶ್ಯ PTI Photo

ಶ್ರೀನಗರದಲ್ಲಿ ಚಳಿ ನಡುವೆ ದೋಣಿ ಸಂಚಾರ

ಶ್ರೀನಗರದಲ್ಲಿ ಚಳಿ ನಡುವೆ ದೋಣಿ ಸಂಚಾರ

ಶ್ರೀನಗರದ ದಾಲ್ ಸರೋವರದಲ್ಲಿ ಚಳಿ ನಡುವೆ ದೋಣಿ ಸಂಚಾರ ಮಾಡುತ್ತಿರುವ ಚಿತ್ರ PTI Photo by S Irfan

ನವದೆಹಲಿಯಲ್ಲಿ ಚಳಿಯಲ್ಲಿ ಮಹಿಳೆಯರು

ನವದೆಹಲಿಯಲ್ಲಿ ಚಳಿಯಲ್ಲಿ ಮಹಿಳೆಯರು

ನವದೆಹಲಿಯಲ್ಲಿ ಮಹಿಳೆಯರು ಬೆಚ್ಚನೆಯ ಬಟ್ಟೆ ಧರಿಸಿ ಚಳಿ ಎದುರಿಸುತ್ತಿದ್ದಾರೆ. PTI Photo by Manvender Vashist

ಪ್ರಯಾಣಿಕರ ಸಂಕಷ್ಟ ಹೇಳ ತೀರದು

ಪ್ರಯಾಣಿಕರ ಸಂಕಷ್ಟ ಹೇಳ ತೀರದು

ಚಳಿ ಹೊಡೆತಕ್ಕೆ ಸಿಲುಕಿರುವ ಪ್ರಯಾಣಿಕರ ಸಂಕಷ್ಟ ಹೇಳ ತೀರದು. ರೈಲುಗಳ ವಿಳಂಬದಿಂದ ನಿಲ್ದಾಣದಲ್ಲೇ ಚಳಿ ಗಾಳಿ ಹೊಡೆತ ಎದುರಿಸುತ್ತಾ ರಾತ್ರಿ ಕಳೆಯುತ್ತಿದ್ದಾರೆ. PTI Photo

ರಾಜಸ್ಥಾನದಲ್ಲೂ ಚಳಿ ಹೊಡೆತ ಜೋರು

ರಾಜಸ್ಥಾನದಲ್ಲೂ ಚಳಿ ಹೊಡೆತ ಜೋರು

ರಾಜಸ್ಥಾನದಲ್ಲೂ ಚಳಿ ಹೊಡೆತ ಈ ಬಾರಿ ಜೋರಾಗಿದ್ದು, ಜನರು ಬೆಚ್ಚನೆಯ ಉಡುಪುಗಳನ್ನು ಧರಿಸಿ ಕಷ್ಟಪಟ್ಟು ರಸ್ತೆಗಿಳಿಯುತ್ತಿದ್ದಾರೆ.PTI Photo

English summary
Close to 36 flights have been delayed and 3 have been cancelled as Delhi was enveloped with fog. Round about 50 trains have been delayed while 12 others have been rescheduled in the national capital. Sources say, 12 other trains have been rescheduled in the national capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X