ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಡೆಂಗ್ಯೂ: 2,000 ದಾಟಿದ ಪ್ರಕರಣಗಳ ಸಂಖ್ಯೆ

|
Google Oneindia Kannada News

ನವದೆಹಲಿ ನವೆಂಬರ್ 10: ಕೊರೊನಾದಿಂದ ಕೊಂಚ ನಿರಾಳವಾಗುತ್ತಿದ್ದಂತೆ ದೆಹಲಿಯಲ್ಲಿ ಮತ್ತೊಂದು ಸೋಂಕಿನ ಹಾವಳಿ ಹೆಚ್ಚಾಗುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ ಏಕಾಏಕಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಒಂದು ವಾರದಲ್ಲಿ ದೆಹಲಿಯಲ್ಲಿ ಡೆಂಗ್ಯೂ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಉಲ್ಬಣಗೊಂಡಿದ್ದು 2,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

2020 ಕ್ಕೆ ಹೋಲಿಸಿದರೆ ಈ ವರ್ಷ ದೆಹಲಿಯಲ್ಲಿ ಡೆಂಗ್ಯೂ ಪರಿಸ್ಥಿತಿಯು ಹದಗೆಟ್ಟಿದೆ. ಸೋಮವಾರದವರೆಗೆ ದೆಹಲಿಯಲ್ಲಿ ವರದಿಯಾದ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 2,000 ವನ್ನು ದಾಟಿದೆ. ರೋಗಿಗಳ ನೂಕುನುಗ್ಗಲು ಎದುರಿಸಲು ಆಸ್ಪತ್ರೆಗಳು ಹರಸಾಹಸ ಪಡುತ್ತಿವೆ. ದೆಹಲಿಯಲ್ಲಿ ಡೆಂಗ್ಯೂ ಹರಡುವುದನ್ನು ನಿಯಂತ್ರಿಸುವ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಮತ್ತು ಉತ್ತರ ದೆಹಲಿ ಮಹಾನಗರ ಪಾಲಿಕೆಗೆ ದೆಹಲಿ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ.

ಈ ವರ್ಷ ದೆಹಲಿಯಲ್ಲಿ 2,000 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ ಎಂದು ನಾಗರಿಕ ಅಧಿಕಾರಿಗಳ ಅಂಕಿಅಂಶಗಳು ತೋರಿಸಿವೆ. ಅದರಲ್ಲಿ ಸುಮಾರು 1,200 ಪ್ರಕರಣಗಳು ಅಕ್ಟೋಬರ್ ತಿಂಗಳಿನಲ್ಲಿ ದಾಖಲಾಗಿವೆ. ಕಳೆದ ಮೂರು ವರ್ಷಗಳಲ್ಲಿ, ಜನವರಿ 1 ರಿಂದ ಅಕ್ಟೋಬರ್ 30 ರವರೆಗೆ ದೆಹಲಿಯಲ್ಲಿ ದಾಖಲಾದ ಡೆಂಗ್ಯೂ ಪ್ರಕರಣಗಳ ಸಂಖ್ಯೆ 2020 ರಲ್ಲಿ 612; 2019 ರಲ್ಲಿ 1,069 ಮತ್ತು 2018 ರಲ್ಲಿ 1,595 ಪ್ರಕರಣಗಳು ದಾಖಲಾಗಿವೆ. ನಾಗರಿಕ ಮಂಡಳಿಯ ವರದಿಯ ಪ್ರಕಾರ, ಇಲ್ಲಿಯವರೆಗೆ ಡೆಂಗ್ಯೂನಿಂದ ದೆಹಲಿಯಲ್ಲಿ ಒಟ್ಟು ಆರು ಸಾವುಗಳು ಸಂಭವಿಸಿವೆ. ಅದರಲ್ಲಿ ಐದು ಸಾವುಗಳು ಅಕ್ಟೋಬರ್ ತಿಂಗಳಲ್ಲಿ ವರದಿಯಾಗಿವೆ.

Dengue in Delhi: Over 2,000 cases registered

ದೆಹಲಿಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಏಕಾಏಕಿ ನಿರ್ವಹಣೆಗೆ ತಾಂತ್ರಿಕ ಮಾರ್ಗದರ್ಶನ ನೀಡಲು ಕೇಂದ್ರವು ನಗರ ಮತ್ತು ಇತರ ಎಂಟು ರಾಜ್ಯಗಳಿಗೆ ತಜ್ಞರ ತಂಡವನ್ನು ನಿಯೋಜಿಸಿ ಕಳುಹಿಸಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಈ ನಿಟ್ಟಿನಲ್ಲಿ ರಾಜ್ಯಗಳೊಂದಿಗೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು.ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪ್ರಕರಣಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ, ದೆಹಲಿ ಸರ್ಕಾರ ಎಲ್ಲಾ ಆಸ್ಪತ್ರೆಗಳಿಗೆ COVID-19 ಹಾಸಿಗೆಗಳ ಮೂರನೇ ಒಂದು ಭಾಗವನ್ನು ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾ ರೋಗಿಗಳಿಗೆ ನಿಯೋಜಿಸಲು ಕೇಳಿದೆ. ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (SDMC) ಬಿಡುಗಡೆ ಮಾಡಿದ ನಾಗರಿಕ ವರದಿಯ ಪ್ರಕಾರ, ದೆಹಲಿಯಲ್ಲಿ ಒಟ್ಟು 1,530 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಈ ವರ್ಷ 160 ಮಲೇರಿಯಾ ಮತ್ತು 81 ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ.

"ಎಲ್ಲಾ ಆರು ಸಾವುಗಳು [ನವದೆಹಲಿಯಲ್ಲಿ] ಈ ವರ್ಷದ ಜುಲೈ ಮತ್ತು ಅಕ್ಟೋಬರ್ ನಡುವೆ ಸಂಭವಿಸಿವೆ ಮತ್ತು ಸಾವಿನ ಆಡಿಟ್ ಸಮಿತಿಯ ತನಿಖೆಯ ನಂತರ ವರದಿಗೆ ಸೇರಿಸಲಾಗಿದೆ. ಇದು ಡೆಂಗ್ಯೂ ಪೀಕ್ ಸೀಸನ್ ಮತ್ತು ನಾವು ಇನ್ನೂ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ವರದಿ ಮಾಡುತ್ತಿದ್ದೇವೆ. ಜನರು ಜಾಗರೂಕರಾಗಿರಬೇಕು ಮತ್ತು ಸೊಳ್ಳೆ ಕಡಿತವನ್ನು ತಡೆಯುವುದು ಮುಖ್ಯ" ಎಂದು ಪುರಸಭೆಯ ಅಧಿಕಾರಿಯೊಬ್ಬರು ತಿಳಿಸಿದರು. ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (SDMC), ನಗರದ ನೋಡಲ್ ಏಜೆನ್ಸಿ ಡೆಂಗ್ಯೂ ಬಗ್ಗೆ ದತ್ತಾಂಶವನ್ನು ಸಂಗ್ರಹಿಸುವ ಉಸ್ತುವಾರಿ ವಹಿಸಿದೆ.

ಮುನ್ಸಿಪಲ್ ಕಾರ್ಪೊರೇಷನ್ ಈಗ ಡೆಂಗ್ಯೂ ಜೊತೆಗೆ ಮಲೇರಿಯಾ ಮತ್ತು ಚಿಕೂನ್‌ಗುನ್ಯಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ನಿರೀಕ್ಷಿಸುತ್ತದೆ. ಏಕೆಂದರೆ ಮೂರನ್ನೂ ಅಧಿಸೂಚಿತ ಕಾಯಿಲೆಗಳಾಗಿ ಮಾಡಲಾಗಿದೆ. ಎಲ್ಲಾ ಆಸ್ಪತ್ರೆಗಳು, ಕ್ಲಿನಿಕ್‌ಗಳು ಮತ್ತು ರೋಗನಿರ್ಣಯ ಕೇಂದ್ರಗಳು ಅಂತಹ ಎಲ್ಲಾ ಪ್ರಕರಣಗಳನ್ನು ಸರ್ಕಾರಕ್ಕೆ ವರದಿ ಮಾಡುವುದನ್ನು ಕಡ್ಡಾಯಗೊಳಿಸಿದೆ. ಅಕ್ಟೋಬರ್ ತಿಂಗಳಿನಲ್ಲಿ ಪ್ರತಿ ವರ್ಷ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡುಬರುತ್ತವೆ. ಕೋವಿಡ್ -19 ರೋಗಿಗಳಿಗೆ ಮೀಸಲಾದ ಹಾಸಿಗೆಗಳಲ್ಲಿ ಮೂರನೇ ಒಂದು ಭಾಗವನ್ನು ಡೆಂಗ್ಯೂ ರೋಗಿಗಳಿಗೆ ಬಳಸಲು ದೆಹಲಿ ಸರ್ಕಾರ ಕೇಳಿದೆ. ಲಭ್ಯವಿರುವ ಹಾಸಿಗೆಗಳ ಸಂಖ್ಯೆ ಮತ್ತು ಜ್ವರದ ಪ್ರಕರಣಗಳ ಬಗ್ಗೆ ಆಸ್ಪತ್ರೆಗಳು ಸರ್ಕಾರಕ್ಕೆ ತಿಳಿಸಬೇಕಾಗುತ್ತದೆ.

Recommended Video

Team India ಹೊಸ ರೂಪ ಪಡೆದುಕೊಂಡಿದೆ | Oneindia Kannada

English summary
The dengue situation in Delhi this year has worsened this year as compared to 2020. The total number of dengue cases reported in Delhi till Monday crossed the 2,000-mark.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X