ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಪನಗದೀಕರಣದಿಂದ ಅತೀ ಹೆಚ್ಚು ನಷ್ಟವಾಗಿದ್ದು ಗಾಂಧಿ ಕುಟುಂಬಕ್ಕೆ!'

|
Google Oneindia Kannada News

Recommended Video

ರಾಹುಲ್ ಗಾಂಧಿಗೆ ಅಪನಗದೀಕರಣದಿಂದ ನಷ್ಟವಾಗಿದೆಯಂತೆ | Oneindia Kannada

ನವದೆಹಲಿ, ಆಗಸ್ಟ್ 31: 'ಅಪನಗದೀಕರಣದಿಂದ ಅತೀ ಹೆಚ್ಚು ನಷ್ಟವಾಗಿದ್ದು ಗಾಂಧಿ ಕುಟುಂಬಕ್ಕೆ. ಆದ್ದರಿಂದಲೇ ಕಾಂಗ್ರೆಸ್ ಅಧ್ಯಕ್ಷಸ ರಾಹುಲ್ ಗಾಂಧಿ ಅವರು ಪದೇ ಪದೇ ಅಪನಗದೀಕರಣದ ಬಗ್ಗೆ ಮಾತನಾಡುತ್ತಾರೆ' ಎಂದು ಬಿಜೆಪಿ ದೂರಿದೆ.

ದೆಹಲಿಯಲ್ಲಿ ನಡದ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಬಿಜೆಪಿ ವಕ್ತಾರ್ ಸಂಬಿತ್ ಪಾತ್ರಾ, 'ಗಾಂಧಿ ಕುಟುಂಬ ಸಾರ್ವಜನಿಕ ಹಣವನ್ನು ಲೂಟಿ ಹೊಡೆದಿದೆ. ಕಾಂಗ್ರೆಸ್ ಇದೀಗ ಅಪನಗದೀಕರಣವನ್ನು ದೂರುತ್ತಿದೆ. ಏಕೆಂದರೆ ಅವರು ಲೂಟಿ ಹೊಡೆದ ಹಣವೆಲ್ಲವೂ ಅಪನಗದೀಕರಣದಿಂದ ಬಳಕೆಗೆ ಆರದಂತಾಗಿದೆ' ಎಂದು ಅವರು ಲೇವಡಿ ಮಾಡಿದ್ದಾರೆ.

ಅಮಾನ್ಯಗೊಂಡಿದ್ದ ಶೇಕಡಾ 99.3ರಷ್ಟು ನೋಟುಗಳು ಬ್ಯಾಂಕ್ ಗಳಿಗೆ ವಾಪಸ್ಅಮಾನ್ಯಗೊಂಡಿದ್ದ ಶೇಕಡಾ 99.3ರಷ್ಟು ನೋಟುಗಳು ಬ್ಯಾಂಕ್ ಗಳಿಗೆ ವಾಪಸ್

"ರಾಹುಲ್ ಗಾಂಧಿ ಅವರು ಗಂಭೀರತೆ ಇಲ್ಲದ ಒಬ್ಬ ರಾಜಕಾರಣಿ. ಅವರ ಬಳಿ ಹೊಸತೇನೂ ಇಲ್ಲ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅವರು ಏನು ಮಾತನಾಡಿದ್ದರೋ ಅದನ್ನೇ ಈಗಲೂ ಮಾತನಾಡುತ್ತಿದ್ದಾರೆ. ಆದರೆ ಜನರು ಮೋದಿಯವರನ್ನೇ ಆರಿಸಿದ್ದು ಎಲ್ಲರಿಗೂ ಗೊತ್ತು" ಎಂದು ಅವರು ಹೇಳಿದ್ದಾರೆ.

ನೋಟು ರದ್ಧತಿ ದೇಶದ ಬಹುದೊಡ್ಡ ಹಗರಣ: ರಾಹುಲ್ ಗಾಂಧಿ ಆರೋಪನೋಟು ರದ್ಧತಿ ದೇಶದ ಬಹುದೊಡ್ಡ ಹಗರಣ: ರಾಹುಲ್ ಗಾಂಧಿ ಆರೋಪ

Demonetisation affected Gandhi family the most: BJP

"ಪ್ರಧಾನಿ ನರೇಂದ್ರ ಓದಿ ನೇತೃತ್ವದ ಎನ್ ಡಿಎ ಸರ್ಕಾರ ತನ್ನ ಉದ್ಯಮಿ ಗೆಳೆಯರಿಗೆ ಸಹಾಯವಾಗಲಿ ಎಂದು ಅಪನಗದೀಕರಣ ಮಾಡಿತು" ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಅವರು ಪ್ರತಿಕ್ರಿಯೆ ನೀಡಿದರು.

English summary
The Bharatiya Janata Party (BJP) on Thursday said that the Congress president Rahul Gandhi is criticizing demonetisation because it was adversely affected by the currency swap.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X