ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಟಾದಿಂದಾಗಿ ಶೇ.60 ರಷ್ಟು ಕೋವಿಡ್‌ ಪ್ರತಿಕಾಯ ನಾಶ: ದೆಹಲಿ ಅಧ್ಯಯನ ವರದಿ

|
Google Oneindia Kannada News

ನವದೆಹಲಿ, ಜು.08: SARS-CoV-2 ನ ಡೆಲ್ಟಾ ರೂಪಾಂತರವು ಹೆಚ್ಚು ಹರಡಬಲ್ಲದು ಹಾಗೂ ಕೊರೊನಾ ಸೋಂಕು ಬಂದ ಬಳಿಕ ದೇಹದಲ್ಲಿ ಸೃಷ್ಟಿಯಾಗಿರುವ ಪ್ರತಿಕಾಯವನ್ನು ಶೇ. 60 ರಷ್ಟು ಕಡಿಮೆ ಮಾಡಬಹುದು ಎಂದು ಇಂಪೀರಿಯಲ್ ಕಾಲೇಜು ಲಂಡನ್ ಮತ್ತು ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯದ INSACOG ನ ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಕೊರೊನಾವೈರಸ್‌ ಸೋಂಕಿನ ಜೀನೋಮಿಕ್ ವ್ಯತ್ಯಾಸಗಳನ್ನು ಮೇಲ್ವಿಚಾರಣೆ ಮಾಡಲು ಇಂಡಿಯನ್ SARS-CoV-2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ ಅಥವಾ INSACOG ಪ್ಯಾನ್-ಇಂಡಿಯಾ ಪ್ರಯೋಗಾಲಯಗಳ ಜಾಲವಾಗಿದೆ.

ಅಮೆರಿಕದಲ್ಲೂ ಡೆಲ್ಟಾ ಈಗ ನಂ.1 ವೈರಸ್ಅಮೆರಿಕದಲ್ಲೂ ಡೆಲ್ಟಾ ಈಗ ನಂ.1 ವೈರಸ್

ತಂಡವು ದೆಹಲಿಯಲ್ಲಿ ನಾಲ್ಕನೇ ಕೋವಿಡ್ ಅಲೆಯ (ಒಟ್ಟಾರೆ ಭಾರತ ತನ್ನ ಎರಡನೇ ಅಲೆ ಎದುರಿಸಿದ ಸಂದರ್ಭದಲ್ಲಿ) ದತ್ತಾಂಶವನ್ನು ಲೆಕ್ಕಹಾಕಿದೆ. ಹಾಗೆಯೇ ಮಾಡೆಲಿಂಗ್ ಅಧ್ಯಯನಗಳು, ಸಿರೊ-ಸಮೀಕ್ಷೆಗಳು ಮತ್ತು ರೂಪಾಂತರಿತ ವೈರಸ್‌ನ ಸ್ಪೈಕ್ ಪ್ರೋಟೀನ್‌ನ ರಚನಾತ್ಮಕ ಒಳನೋಟಗಳ ಡೇಟಾವನ್ನು ಒಳಗೊಂಡಿದೆ.

 ಕೋವಿಡ್‌ನ ಡೆಲ್ಟಾ ರೂಪಾಂತರದ ಹುಟ್ಟು

ಕೋವಿಡ್‌ನ ಡೆಲ್ಟಾ ರೂಪಾಂತರದ ಹುಟ್ಟು

ಯುಕೆ ನಲ್ಲಿ ಮೊದಲು ಗುರುತಿಸಲ್ಪಟ್ಟ ಆಲ್ಫಾ (ಬಿ .1.1.7) ರೂಪಾಂತರ ಈ ವರ್ಷದ ಫೆಬ್ರವರಿಯಲ್ಲಿ ಉತ್ತರ ಭಾರತಕ್ಕೆ ಹರಡಿದೆ. ಆದರೆ ಈ ಪ್ರಕರಣಗಳು ಆರೋಗ್ಯ ವ್ಯವಸ್ಥೆಗಳ ಸಾಮರ್ಥ್ಯದೊಳಗೆ ಇದ್ದವು. ಮಾರ್ಚ್‌ನಿಂದ ಕಪ್ಪಾ (ಬಿ .1.617.1) ಮತ್ತು ಡೆಲ್ಟಾ (ಬಿ .1.617.2) ರೂಪಾಂತರಗಳ ಹುಟ್ಟು ಹೊಸ ಪ್ರಕರಣ ಮತ್ತಷ್ಟು ವೇಗವಾಗಿ ಏರಲು ಕಾರಣವಾಯಿತು. ಶೀಘ್ರದಲ್ಲೇ, ಆಲ್ಫಾ ಮತ್ತು ಕಪ್ಪಾ ಸೋಂಕು ಹರಡುವಿಕೆಯನ್ನು ಡೆಲ್ಟಾ ಹಿಂದಿಕ್ಕಿದೆ. ದೆಹಲಿಯಲ್ಲಿ ಏಪ್ರಿಲ್‌ನಲ್ಲಿ ಹೊಸ ಪ್ರಕರಣಗಳಲ್ಲಿ 10 ಪಟ್ಟು ಹೆಚ್ಚಳಕ್ಕೆ ಡೆಲ್ಟಾ ಕಾರಣವಾಯಿತು. ಎರಡು ವಾರಗಳ ಅವಧಿಯಲ್ಲಿ ಸುಮಾರು 2,500 ರಿಂದ 25,000 ಪ್ರಕರಣಗಳು ದಾಖಲಾದವು. ಇದು ಆರೋಗ್ಯ ವ್ಯವಸ್ಥೆಯನ್ನು ತೀವ್ರವಾಗಿ ಹದಗೆಡಿಸಿತು. ದೈನಂದಿನ ಸಾವುಗಳು ಹಿಂದಿನ ಅಲೆಗಳಿಗಿಂತ ಮೂರು ಪಟ್ಟು ಹೆಚ್ಚಾದವು ಎಂದು ತಂಡ ತಿಳಿಸಿದೆ.

 ಪ್ರತಿಕಾಯ ನಾಶ ಮಾಡುವ ಡೆಲ್ಟಾ

ಪ್ರತಿಕಾಯ ನಾಶ ಮಾಡುವ ಡೆಲ್ಟಾ

ತಂಡವು ನಡೆಸಿದ ಮಾಡೆಲಿಂಗ್ ಅಧ್ಯಯನಗಳು ಡೆಲ್ಟಾ ರೂಪಾಂತರವು ಮೊದಲಿನ ಸೋಂಕಿನಿಂದ ನೀಡಲ್ಪಟ್ಟ ರಕ್ಷಣಾತ್ಮಕ ಪ್ರತಿರಕ್ಷೆಯನ್ನು ಭಾಗಶಃ ನಾಶ ಮಾಡುತ್ತದೆ ಎಂದು ತೋರಿಸಿದೆ. ತಂಡವು ನಡೆಸಿದ ಮಾಡೆಲಿಂಗ್ ಅಧ್ಯಯನಗಳು ಡೆಲ್ಟಾ ರೂಪಾಂತರವು ಮೊದಲ ಬಾರಿಗೆ ಸೋಂಕು ಬಂದಾಗ ದೇಹದಲ್ಲಿ ಉತ್ಪತ್ತಿಯಾಗುವ ರಕ್ಷಣಾತ್ಮಕ ಪ್ರತಿರಕ್ಷೆಯನ್ನು ಭಾಗಶಃ ಕಡಿಮೆ ಮಾಡುತ್ತದೆ ಎಂದು ತೋರಿಸಿದೆ. ಕೆಲವು ಸಂದರ್ಭಗಳಲ್ಲಿ ಮೊದಲಿನ ಸೋಂಕಿನ ರಕ್ಷಣಾತ್ಮಕ ಪ್ರತಿಕಾಯವು ಡೆಲ್ಟಾ ರೂಪಾಂತರದ ಸೋಂಕಿನ ವಿರುದ್ಧ ಕೇವಲ 50 ಪ್ರತಿಶತದಷ್ಟು ರಕ್ಷಣೆಯನ್ನು ಒದಗಿಸಿದೆ.

ಇದಕ್ಕೆ ನಿಜವಾದ ಪುರಾವೆಗಳಿವೆಯೇ ಎಂದು ನಿರ್ಧರಿಸಲು, ತಂಡವು ಸಿಎಸ್‌ಐಆರ್‌ನಲ್ಲಿ ಒಂದು ಪ್ರಯೋಗಾಲಯದ ಸಿಬ್ಬಂದಿಗೆ ಜೂನ್‌ನಲ್ಲಿ ಸೆರೋಲಾಜಿಕಲ್ ಸಮೀಕ್ಷೆಯನ್ನು ನಡೆಸಿದೆ. ರೋಗದ ವಿರುದ್ಧ ಪ್ರತಿಕಾಯಗಳನ್ನು ಹೊಂದಿರುವ ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು ಸೆರೋಲಾಜಿಕಲ್ ಸಮೀಕ್ಷೆ ವಿಶ್ಲೇಷಿಸುತ್ತದೆ. ಫೆಬ್ರವರಿಯಲ್ಲಿ, ಸಮೀಕ್ಷೆಯಲ್ಲಿ ಭಾಗವಹಿಸಿದ 379 ಜನರಲ್ಲಿ 172 (45 ಪ್ರತಿಶತ) ಸೆರೊಪೊಸಿಟಿವ್ ಆಗಿದ್ದರು. ಜೂನ್‌ನಲ್ಲಿ, ಸಮೀಕ್ಷೆ ನಡೆಸಿದ ಒಟ್ಟು 231 ರಲ್ಲಿ 196 ಭಾಗವಹಿಸುವವರು (85%) ಸಿರೊಪೊಸಿಟಿವ್ ಎಂದು ಕಂಡುಬಂದಿದೆ. ಮೂರನೇ ಹಂತದಲ್ಲಿ, ಸಂಶೋಧಕರು ಈ ಹಿಂದೆ ಸಮೀಕ್ಷೆಗಳಲ್ಲಿ ಭಾಗವಹಿಸಿದವರನ್ನು ಮಾತ್ರ ಸೇರಿಸಿಕೊಂಡರು. ಈ ಸಂದರ್ಭದಲ್ಲಿ 76 ಜನರ ಸಮೀಕ್ಷೆ ನಡೆಸಲಾಗಿದ್ದು, ಆ ಪೈಕಿ 65 (86%) ಜನರು ಸೆರೊಪೊಸಿಟಿವ್ ಆಗಿದ್ದಾರೆ. ಈ 65 ರಲ್ಲಿ, ಒಂಬತ್ತು ಪ್ರಕರಣಗಳಲ್ಲಿ ಸೆರೊಲಾಜಿಕ್ ಪುರಾವೆಗಳು ಕಂಡು ಬಂದಿದೆ.

'ಲ್ಯಾಂಬ್ಡಾ' ಡೆಲ್ಟಾ ರೂಪಾಂತರಿಗಿಂತಲೂ ಹೆಚ್ಚು ಅಪಾಯಕಾರಿ'ಲ್ಯಾಂಬ್ಡಾ' ಡೆಲ್ಟಾ ರೂಪಾಂತರಿಗಿಂತಲೂ ಹೆಚ್ಚು ಅಪಾಯಕಾರಿ

 ಪ್ರಸಕರಣ ಹೆಚ್ಚಳಕ್ಕೆ ಕಾರಣ

ಪ್ರಸಕರಣ ಹೆಚ್ಚಳಕ್ಕೆ ಕಾರಣ

ರೂಪಾಂತರಿತ ವೈರಸ್‌ನ ಸ್ಪೈಕ್ ಪ್ರೋಟೀನ್‌ನಲ್ಲಿನ ರಚನಾತ್ಮಕ ಬದಲಾವಣೆಗಳ ಬಗ್ಗೆಯೂ ತಂಡವು ಗಮನಹರಿಸಿದೆ. ಬಿ .1.617.2 ಬಂದವರಿಗೆ ಟಿ 478 ಕೆ ರೂಪಾಂತರವು ಬಂದಲ್ಲಿ ಅದು ಹೆಚ್ಚು ಪ್ರಸರಣವಾಗಿರುತ್ತದೆ ಎಂದು ತಂಡ ಪತ್ತೆಹಚ್ಚಿದೆ. ಅಧ್ಯಯನದಲ್ಲಿನ ಜೀನೋಮಿಕ್ ಮತ್ತು ಸಿರೊಲಾಜಿಕ್ ಪುರಾವೆಗಳು ಡೆಲ್ಟಾ ರೂಪಾಂತರವು ಹೆಚ್ಚಿನ ಪ್ರಸರಣಕ್ಕೆ ಕಾರಣವಾಗುತ್ತದೆ ಎಂದು ಕಂಡು ಹಿಡಿಯಲಾಗಿದೆ. ಲಭ್ಯವಿರುವ ದತ್ತಾಂಶದ ಪ್ರಕಾರ ಈ ಹಿಂದಿನ SARS-CoV-2 ತಳಿಗಳಿಗಿಂತ ಡೆಲ್ಟಾ ಪ್ರಸರಣವು ಶೇಕಡಾ 30-60 ರಷ್ಟು ಹೆಚ್ಚಿರಬಹುದು ಎಂದು ಸಂಶೋಧಕರು ಊಹಿಸಿದ್ದಾರೆ.

 ಬಲವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅಗತ್ಯ

ಬಲವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅಗತ್ಯ

ಅಧ್ಯಯನದ ಪ್ರಕಾರ ಬಿ .1.617 ಅನ್ನು ಹೊರತುಪಡಿಸಿ ಉಳಿದ ರೂಪಾಂತರಗಳು ಮೊದಲು ಸೋಂಕು ಬಂದವರಲ್ಲಿ ಇರುವ ಪ್ರತಿಕಾಯವನ್ನು 12 ರಿಂದ 60 ರಷ್ಟು ಕಡಿಮೆ ಮಾಡುತ್ತದೆ. "ಒಟ್ಟಾರೆಯಾಗಿ, ಡೆಲ್ಟಾ ರೂಪಾಂತರವನ್ನು ಕೋವಿಡ್‌ ಲಸಿಕೆ ವೇಗ ಹೆಚ್ಚಿಸುವ ಮೂಲಕ ಕಡಿಮೆ ಮಾಡಬಹುದು" ಎಂದು ಸಂಶೋದನೆ ತಿಳಿಸಿದೆ. ಹಾಗೆಯೇ ಈ ವೈರಸ್‌ ಹರಡುವಿಕೆ ತಡೆಯಲು ಬಲವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅಗತ್ಯ ಎಂದು ಕೂಡಾ ಹೇಳಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Delta variant could cut immunity gained from prior infection by 60%, finds study of Delhi data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X