ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ, ಸಾಮಾಜಿಕ ನ್ಯಾಯಕ್ಕೆ ಜಯ: ಮೋದಿ

|
Google Oneindia Kannada News

Recommended Video

Lok Sabha Election 2019: ಮೇಲ್ಜಾತಿ ಬಡವರಿಗೆ ಶೇ.10 ಮೀಸಲಾತಿ ವಿಧೇಯಕಕ್ಕೆ ಅನುಮೋದನೆ | Oneindia Kannada

ನವದೆಹಲಿ, ಜನವರಿ 10: ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ಸಮುದಾಯಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ 10% ಮೀಸಲಾತಿ ಒದಗಿಸುವ ಮಸೂದೆ ಲೋಕಸಭೆಯ ಎರಡೂ ಮನೆಗಳಲ್ಲಿ ಅಂಗೀಕಾರಗೊಂಡಿದ್ದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ಮೇಲ್ವರ್ಗದವರಿಗೂ ಉದ್ಯೋಗದಲ್ಲಿ ಮೀಸಲಾತಿ, ಯಾರು ಇದಕ್ಕೆ ಅರ್ಹರು?ಮೇಲ್ವರ್ಗದವರಿಗೂ ಉದ್ಯೋಗದಲ್ಲಿ ಮೀಸಲಾತಿ, ಯಾರು ಇದಕ್ಕೆ ಅರ್ಹರು?

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಮೋದಿ, ಸಂವಿಧಾನದ 124ನೇ ತಿದ್ದುಪಡಿಗೆ ರಾಜ್ಯಸಭೆಯು ಒಪ್ಪಿಗೆ ಸೂಚಿಸಿರುವುದು ಸಾಮಾಜಿಕ ನ್ಯಾಯಕ್ಕೆ ಸಿಕ್ಕ ವಿಜಯ ಎಂದು ಅವರು ಹೇಳಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಕ್ಕೆ ಮೀಸಲಾತಿ ನೀಡುವ ಮಸೂದೆಯು ನಿನ್ನೆ ರಾಜ್ಯಸಭೆಯಲ್ಲಿ ಮಂಡನೆ ಆಗಿ, ಅಂಗೀಕಾರವನ್ನು ಪಡೆಯಿತು. ಲೋಕಸಭೆಯಲ್ಲಿ ಜನವರಿ 08ರಂದು ಮಸೂದೆ ಅಂಗೀಕಾರಗೊಂಡಿತ್ತು.

ಮೇಲ್ಜಾತಿಗೂ ಮೀಸಲಾತಿ: ಚುನಾವಣೆಗೂ ಮುನ್ನ ವಿಪಕ್ಷಗಳಿಗೆ ಭಾರೀ ಆಘಾತ!ಮೇಲ್ಜಾತಿಗೂ ಮೀಸಲಾತಿ: ಚುನಾವಣೆಗೂ ಮುನ್ನ ವಿಪಕ್ಷಗಳಿಗೆ ಭಾರೀ ಆಘಾತ!

Delighted the Rajya Sabha has passed The Constitution 124 bill: Narendra Modi

ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿರುವುದು ಸಂತಸ ತಂದಿದೆ ಎಂದಿರುವ ಮೋದಿ, ಮಸೂದೆಗೆ ಉತ್ತಮ ಪ್ರಮಾಣದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಕೆಲವು ಸಂಸದರು ಮಹತ್ವಪೂರ್ಣ ಸಲಹೆಗಳನ್ನು ಸಹ ಚರ್ಚೆ ವೇಳೆ ನೀಡಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ರಾಜ್ಯಸಭೆಯಲ್ಲಿಯೂ ಇಬಿಸಿ ಕೋಟಾ ಮಸೂದೆಗೆ ಅಂಗೀಕಾರರಾಜ್ಯಸಭೆಯಲ್ಲಿಯೂ ಇಬಿಸಿ ಕೋಟಾ ಮಸೂದೆಗೆ ಅಂಗೀಕಾರ

ಅಂಗೀಕಾರಗೊಂಡಿರುವ 124ನೇ ತಿದ್ದುಪಡಿ ಅನ್ವಯ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 10% ಮೀಸಲಾತಿ ದೊರಕಲಿದೆ.

English summary
Delighted the Rajya Sabha has passed The Constitution (One Hundred And Twenty-Fourth Amendment) Bill, 2019 says Narendra Modi. He said it is victory of social justice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X