ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಮೃತಪಟ್ಟ ಹುಲಿಗೆ ಕೊರೊನಾ ನೆಗೆಟಿವ್ ವರದಿ

|
Google Oneindia Kannada News

ದೆಹಲಿ: ಇತ್ತೀಚೆಗೆ ದೆಹಲಿಯ ಬರೇಲಿ ಮೃಗಾಲಯದಲ್ಲಿ ಬಿಳಿ ಹೆಣ್ಣು ಹುಲಿ ಮೃತಪಟ್ಟಿತ್ತು. ಈ ಹುಲಿಗೆ ಕೊರೊನಾ ಸೋಂಕು ಹರಡಿತ್ತೇ..? ಎನ್ನುವ ಅನುಮಾನ ಇತ್ತು. ಆದರೆ, ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿದೆ.

ಪರೀಕ್ಷೆಯ ಬಳಿಕ ಹುಲಿಗೆ ಕೋವಿಡ್ ನೆಗೆಟಿವ್ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಕಲ್ಪನಾ ಎಂಬ ಹುಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಅಸುನೀಗಿತ್ತು. ಆದರೆ, ನಂತರ ಆ ಹುಲಿಯ ಸಾವಿಗೆ ಕೋವಿಡ್ ಕಾರಣವಿರಬಹುದೇ ಅನ್ನೋ ಅನುಮಾನ ಕೂಡ ವ್ಯಕ್ತವಾಗಿತ್ತು.

ದೇಶದ ಅತಿ ಚಿಕ್ಕ ರಾಜ್ಯ ಗೋವಾದಲ್ಲಿ ಎಷ್ಟಿದೆ ಕೊರೊನಾ ಕೇಸ್?ದೇಶದ ಅತಿ ಚಿಕ್ಕ ರಾಜ್ಯ ಗೋವಾದಲ್ಲಿ ಎಷ್ಟಿದೆ ಕೊರೊನಾ ಕೇಸ್?

ಹೀಗಾಗಿ, ಕಲ್ಪನಾಳ ಸ್ಯಾಂಪಲ್ ಸಂಗ್ರಹಿಸಿ, ಇಂಡಿಯನ್ ವೆಟರಿನರಿ ರೀಸರ್ಚ್ ಇನ್ಸ್ ಟಿಟ್ಯೂಟ್ ಗೆ ಕಳುಹಿಸಲಾಗಿತ್ತು. ಅಲ್ಲಿ ಸ್ಯಾಂಪಲ್ ಟೆಸ್ಟ್ ನ ನಂತರ ಕೋವಿಡ್ ನೆಗೆಟಿವ್ ಇರುವುದು ಬೆಳಕಿಗೆ ಬಂದಿದೆ. ಗುರುವಾರ ಸಂಜೆ 6.30ಕ್ಕೆ ಕಲ್ಪನಾಳ ಅಂತ್ಯಸಂಸ್ಕಾರವನ್ನ ಮೃಗಾಲಯದ ಸಿಬ್ಬಂದಿ ಮಾಡಿದ್ದರು.

Delhi Zoo Tiger Tested Negative For Covid19

ಈ ಹಿಂದೆ ನ್ಯೂಯಾರ್ಕ್‌ ನಗರದಲ್ಲಿರುವ ಬ್ರಾಂಕ್ಸ್ ಮೃಗಾಲಯದಲ್ಲಿರುವ ನಾಲ್ಕು ವರ್ಷದ ನಾಡಿಯಾ ಎಂಬ ಹೆಸರಿನ ಮಲಯನ್ ಹುಲಿಯಲ್ಲಿ ಸೋಂಕು ಪತ್ತೆಯಾಗಿತ್ತು. ಆವರೆಗೆ ಪ್ರಾಣಿಗಳಿಗೆ ಕೊರೊನಾ ಬರುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ. ಪರೀಕ್ಷೆಯಲ್ಲಿ ಹುಲಿಗೆ ಪಾಸಿಟಿವ್ ವರದಿ ಬಂದಿದ್ದು, ದೊಡ್ಡ ಪ್ರಶ್ನೆ ಮೂಡಿಸಿತ್ತು.

English summary
Delhi Bareli zoo tiger tested negative for Covid19. the tiger was dead on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X