ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕ ಉಡುಪು ತೊಟ್ಟವರನ್ನು ರೇಪ್ ಮಾಡಿ: ಹೇಳಿಕೆಗೆ ಕ್ಷಮೆಯಾಚಿಸಿದ ಮಹಿಳೆ

|
Google Oneindia Kannada News

ನವದೆಹಲಿ, ಮೇ 2: 'ಈ ಮಹಿಳೆಯರು ತಮ್ಮನ್ನು ಎಲ್ಲರೂ ನೋಡಲಿ ಎಂದು ಸೆಳೆಯುವ ಸಲುವಾಗಿ ಚಿಕ್ಕ ಚಿಕ್ಕ ಉಡುಪುಗಳನ್ನು ಧರಿಸಿದ್ದಾರೆ. ಈ ರೀತಿ ಪ್ರಚೋದನಾಕಾರಿ ಉಡುಪು ಧರಿಸುವ ಮಹಿಳೆಯರು ಅತ್ಯಾಚಾರಕ್ಕೆ ಅರ್ಹರು' ಎಂದು ದೆಹಲಿಯ ಮಧ್ಯವಯಸ್ಕ ಮಹಿಳೆಯೊಬ್ಬರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿರುವ ಮಹಿಳೆಯ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾದ ಬಳಿಕೆ ಆಕೆ ಕ್ಷಮೆ ಯಾಚಿಸಿದ್ದಾರೆ.

ಗುರುಗಾಂವ್‌ನಲ್ಲಿನ ರೆಸ್ಟೋರೆಂಟ್ ಒಂದರಲ್ಲಿ ಆರು ಮಹಿಳೆಯರು ಚಿಕ್ಕ ಗಾತ್ರದ ಉಡುಪು ಧರಿಸಿದ್ದರು. ಇದರಲ್ಲಿ ಒಬ್ಬ ಮಹಿಳೆಯನ್ನು ಉದ್ದೇಶಿಸಿ ಅವರು ನಿಂದನೆಯ ಮಾತುಗಳನ್ನಾಡಿದ್ದರು. ಚಿಕ್ಕ ಉಡುಪುಗಳನ್ನು ತೊಡುವುದಕ್ಕೆ ನಾಚಿಕೆಯಾಗಬೇಕು ಎಂದು ಮಧ್ಯವಯಸ್ಕ ಮಹಿಳೆ ಹೇಳಿದ್ದರು. ಇದನ್ನು ಆಕೆ ಮತ್ತು ಆಕೆಯ ಸ್ನೇಹಿತೆ ಪ್ರಶ್ನಿಸಿದಾಗ 'ಇವರೆಲ್ಲಾ ಅತ್ಯಾಚಾರಕ್ಕೆ ಅರ್ಹರು' ಎಂದು ಪ್ರತಿಕ್ರಿಯೆ ನೀಡಿದ್ದರು.

ಕುಡುಕ ತಂದೆಯಿಂದ 8 ವರ್ಷದ ಮಗಳ ಮೇಲೆ ನಿರಂತರ ಅತ್ಯಾಚಾರಕುಡುಕ ತಂದೆಯಿಂದ 8 ವರ್ಷದ ಮಗಳ ಮೇಲೆ ನಿರಂತರ ಅತ್ಯಾಚಾರ

ಇದು ಆ ಮಹಿಳೆಯರನ್ನು ಕೆರಳಿಸಿದ್ದರಿಂದ ವಾಗ್ವಾದ ನಡೆಯಿತು. ಅಷ್ಟಕ್ಕೆ ಸುಮ್ಮನಾಗದ ವಯಸ್ಕ ಮಹಿಳೆ, ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದ ಪುರುಷರ ಬಳಿ ತೆರಳಿ, ಚಿಕ್ಕ ಉಡುಪು ಧರಿಸಿದ ಆ ಮಹಿಳೆಯರ ಮೇಲೆ ಅತ್ಯಾಚಾರ ಮಾಡಬೇಕು ಎಂದು ಹೇಳಿದ್ದರು. ಅವರ ಹೇಳಿಕೆಯಿಂದ ಮತ್ತಷ್ಟು ಸಿಟ್ಟಿಗೆದ್ದ ಮಹಿಳೆಯರ ಗುಂಪು ಶಾಪಿಂಗ್ ಕೇಂದ್ರವೊಂದರ ಒಳಗೂ ಅವರನ್ನು ಹಿಂಬಾಲಿಸಿ ಪ್ರಶ್ನಿಸತೊಡಗಿದರು. ಆದರೆ ತಾವು ಹೇಳಿದ್ದು ಸರಿಯಾಗಿಯೇ ಇದೆ ಎಂದು ಆಕೆ ವಾದಿಸಿದ್ದರು. ಈ ಘಟನೆಯನ್ನು ಮಹಿಳೆಯೊಬ್ಬರು 10 ನಿಮಿಷ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

Delhi woman apologises girls in short dresses deserve to be raped viral video

ಇದನ್ನು 20 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದರು. ಸಾವಿರಾರು ಮಂದಿ ಮಹಿಳೆಯ ವರ್ತನೆಯನ್ನು ಕಟುವಾಗಿ ಖಂಡಿಸಿದ್ದರು. ಆಕೆಯ ದೇಹವನ್ನು ಅಣಕಿಸಿ ಟ್ರೋಲ್‌ ಮಾಡತೊಡಗಿದ್ದರು. ಕಾಮೆಂಟ್‌ಗಳಲ್ಲಿ ಆಕೆಯ ಮೇಲೆಯೇ ಅತ್ಯಾಚಾರ ಎಸಗುವ ಹೇಳಿಕೆಗಳು ವ್ಯಕ್ತವಾಗಿದ್ದವು.

ಇಷ್ಟೆಲ್ಲ ವಿರೋಧಗಳು ಬಂದ ಬಳಿಕ ಆ ಮಹಿಳೆ ಕೊನೆಗೂ ಫೇಸ್‌ಬುಕ್‌ನಲ್ಲಿ ಕ್ಷಮೆ ಯಾಚಿಸಿದ್ದಾರೆ. 'ಎಲ್ಲ ಮಹಿಳೆಯರಿಗೂ ನನ್ನ ಬೇಷರತ್ ಕ್ಷಮೆ ಯಾಚಿಸುತ್ತೇನೆ. ನಾನು ತೀರಾ ಕಟುವಾಗಿ ಮತ್ತು ತಪ್ಪಾಗಿ ಹೇಳಿಕೆ ನೀಡಿದ್ದು ಅರಿವಾಗಿದೆ. ಏನೇ ಇದ್ದರೂ ನನ್ನ ಅಭಿಪ್ರಾಯವನ್ನು ಖಾಸಗಿಯಾಗಿ ಹೇಳಿಕೊಳ್ಳಬೇಕಿತ್ತು. ಅಲ್ಲದೆ, ನಾನು ನನ್ನ ದೃಷ್ಟಿಕೋನದಲ್ಲಿ ರಕ್ಷಣಾತ್ಮಕ ಮತ್ತು ಪ್ರಗತಿಪರತೆ ಹೊಂದಬೇಕಿದೆಯೇ ವಿನಾ ಮಡಿವಂತಿಕೆ ಮತ್ತು ಒರಟುತನವನ್ನಲ್ಲ.

ಸಿಜೆಐ ಪ್ರಕರಣದಲ್ಲಿ ನ್ಯಾಯ ಸಿಗುತ್ತದೆ ಅನಿಸುತ್ತಿಲ್ಲ: ಮಹಿಳೆ ಅಳಲು ಸಿಜೆಐ ಪ್ರಕರಣದಲ್ಲಿ ನ್ಯಾಯ ಸಿಗುತ್ತದೆ ಅನಿಸುತ್ತಿಲ್ಲ: ಮಹಿಳೆ ಅಳಲು

ಪತ್ನಿಯಾಗಿ, ತಂಗಿಯಾಗಿ ಮತ್ತು ಒಬ್ಬ ತಾಯಿಯಾಗಿ ಮುಖ್ಯವಾಗಿ ಒಬ್ಬ ಮಹಿಳೆಯಾಗಿ ನಾನು ಪ್ರತಿ ಮಹಿಳೆಯರ ಗೌರವಕ್ಕೆ ಮಹತ್ವ ನೀಡುತ್ತೇನೆ. ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಎಲ್ಲ ಮಹಿಳೆಯರಿಗೆ ಮತ್ತೊಮ್ಮೆ ಕ್ಷಮೆ ಕೋಡುತ್ತೇನೆ' ಎಂದು ಅವರು ಹೇಳಿದ್ದಾರೆ.

English summary
A Delhi woman apologises for her comments on girls who wear short dresses are deserved to be raped after the video goes viral and condemned in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X