ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರ ರಾಜಧಾನಿಯಲ್ಲಿ ಸಾಮಾನ್ಯಕ್ಕಿಂತ ಐದು ಪಟ್ಟು ಹೆಚ್ಚಾದ ತಾಪಮಾನ

|
Google Oneindia Kannada News

ನವದೆಹಲಿ, ಮಾರ್ಚ್ 18: ದಿನದಿಂದ ದಿನಕ್ಕೆ ದೇಶದೆಲ್ಲೆಡೆ ತಾಪಮಾನ ಹೆಚ್ಚಾಗುತ್ತಿದೆ. ಹೀಗಾಗಿ ಬಿಸಿಲಿನ ಬೇಗೆ ತಾಳಲಾರದೆ ಜನ ಹೈರಾಣಾಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಸಾಮಾನ್ಯಕ್ಕಿಂತ ಐದು ಪಟ್ಟು ಹೆಚ್ಚಾಗಿದೆ. ಗುರುವಾರ 36.1 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದೆಹಲಿಯಲ್ಲಿ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ಇದು ಅತ್ಯಂತ ತಾಪಮಾನದ ದಿನವಾಗಿದೆ. ದಿನವಿಡೀ ಆಕಾಶ ಮೋಡವಿಲ್ಲದೆ ಸ್ಪಷ್ಟವಾದ ತಾಪಮಾನವನ್ನು ಹೊರ ಸೂಸಿದೆ ಎಂದು ಪಿಟಿಐ ವರದಿ ಮಾಡಿದೆ.

ಮುಂಬರುವ ದಿನಗಳಲ್ಲಿ ಪಾದರಸವು ಒಂದು ಅಥವಾ ಎರಡು ಹಂತಗಳಷ್ಟು ಏರಿಕೆಯಾಗುವ ನಿರೀಕ್ಷೆಯಿದೆಯಾದರೂ, ಇದು 40 ಡಿಗ್ರಿ ಸೆಲ್ಸಿಯಸ್ ಅನ್ನು ಮುಟ್ಟುವ ಸಾಧ್ಯತೆಯಿಲ್ಲ ಎಂದು ಐಎಂಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ದಿಲ್ಲಿಯು ಈ ಋತುವಿನ ಅತ್ಯಂತ ಉಷ್ಣತೆಯ ದಿನವನ್ನು ದಾಖಲಿಸಿದೆ. ಗುರುವಾರ ಗರಿಷ್ಠ (36.1 ಡಿಗ್ರಿ ಸೆಲ್ಸಿಯಸ್) ತಾಪಮಾನವನ್ನು ದಾಖಲಿಸಿದೆ. ಮುಂಬರುವ ದಿನಗಳಲ್ಲಿ ತಾಪಮಾನವು ಹೆಚ್ಚಾಗುವ ನಿರೀಕ್ಷೆಯಿದೆ ಆದರೆ ಗಾಳಿ ಬೀಸುವ ಕಾರಣ ಅದು 40 ಡಿಗ್ರಿ ಸೆಲ್ಸಿಯಸ್ ಅನ್ನು ಮುಟ್ಟುವುದಿಲ್ಲ" ಎಂದು ಹಿರಿಯ ವಿಜ್ಞಾನಿ ಆರ್.ಕೆ. ಜೆನಮಣಿ ಹೇಳಿದರು. ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನ 19.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆದರೆ ಗುರುವಾರ ಇದು ಸಾಮಾನ್ಯಕ್ಕಿಂತ ಮೂರು ಪಟ್ಟು ಹೆಚ್ಚು ದಾಖಲಾಗಿದೆ.

Inforgraphics: ರಾಜ್ಯದೆಲ್ಲೆಡೆ ಒಣಹವೆ, ವಾರಾಂತ್ಯದಲ್ಲಿ ತಾಪಮಾನ ಇಳಿಕೆInforgraphics: ರಾಜ್ಯದೆಲ್ಲೆಡೆ ಒಣಹವೆ, ವಾರಾಂತ್ಯದಲ್ಲಿ ತಾಪಮಾನ ಇಳಿಕೆ

IMD ಶುಕ್ರವಾರದಂದು ಸ್ಪಷ್ಟವಾದ ಆಕಾಶವನ್ನು ಮುನ್ಸೂಚಿಸಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 36 ಡಿಗ್ರಿ ಸೆಲ್ಸಿಯಸ್ ಮತ್ತು 21 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ. ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (SAFAR) ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟ ಬೆಳಿಗ್ಗೆ "ಮಧ್ಯಮ" ವಿಭಾಗದಲ್ಲಿ 190 ಸೂಚ್ಯಂಕದೊಂದಿಗೆ (AQI) ದಾಖಲಾಗಿದೆ.

Delhi witnesses its warmest day of the season

ನಗರ 2.5 ಮೈಕ್ರಾನ್ ಅಥವಾ ಅದಕ್ಕಿಂತ ಕಡಿಮೆ ವ್ಯಾಸವುಳ್ಳ ಕಣಗಳ ಪ್ರಮಾಣವನ್ನು ಹೊಂದಿದೆ. PM10 "ತೃಪ್ತಿದಾಯಕ" ವಿಭಾಗದಲ್ಲಿದ್ದರೆ, PM2.5 "ಮಧ್ಯಮ" ವಿಭಾಗದಲ್ಲಿತ್ತು. ಗಾಳಿಯ ವೇಗವು ಕಡಿಮೆಯಿರುವ ಕಾರಣ, ಮಾಲಿನ್ಯಕಾರಕಗಳ ಸಮರ್ಥ ಪ್ರಸರಣವನ್ನು ತಡೆಯುವುದರಿಂದ ಮುಂದಿನ ಎರಡು ದಿನಗಳಲ್ಲಿ ಗಾಳಿಯ ಗುಣಮಟ್ಟವು "ಕಳಪೆ" ವರ್ಗಕ್ಕೆ ಕುಸಿಯುವ ಸಾಧ್ಯತೆಯಿದೆ. ಮಾರ್ಚ್ 20 ರಿಂದ AQI ಸುಧಾರಿಸುವ ನಿರೀಕ್ಷೆಯಿದೆ. ಮಧ್ಯಮ ಗಾಳಿಯ ವೇಗದಿಂದಾಗಿ ಕಳಪೆ ವಿಭಾಗದಲ್ಲಿ ಗಾಳಿಯ ಗುಣಮಟ್ಟ ಉಳಿಯುತ್ತದೆ ಎಂದು SAFAR ಗಮನಿಸಿದೆ. ನೋಯ್ಡಾದ ಆನಂದ್ ವಿಹಾರ್ ನಿಲ್ದಾಣದಲ್ಲಿ AQI 139 ರಷ್ಟು ದಾಖಲಾಗಿದೆ. ಗುರುಗ್ರಾಮ್ ಮತ್ತು ಫರಿದಾಬಾದ್‌ನಲ್ಲಿನ AQI "ಮಧ್ಯಮ" ವಿಭಾಗದಲ್ಲಿತ್ತು.

Asani Cyclone 2022ರ ಮೊದಲ ಚಂಡಮಾರುತ: ಹೆಸರು, ದಿನಾಂಕ ಮತ್ತು ಹವಾಮಾನ ಇಲಾಖೆ ಎಚ್ಚರಿಕೆAsani Cyclone 2022ರ ಮೊದಲ ಚಂಡಮಾರುತ: ಹೆಸರು, ದಿನಾಂಕ ಮತ್ತು ಹವಾಮಾನ ಇಲಾಖೆ ಎಚ್ಚರಿಕೆ

ಗಾಳಿಯ ಗುಣಮಟ್ಟವನ್ನು ಈ ರೀತಿ ಪರಿಗಣಿಸಲಾಗುತ್ತದೆ- ಸೊನ್ನೆ ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ, 51 ಮತ್ತು 100 ನಡುವಿನ (AQI) ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ (AQI) ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ (AQI) ಸೂಚ್ಯಂಕವನ್ನು 'ಅತ್ಯಂತ ಕಳಪೆ' ಮತ್ತು 401- 500 ನಡುವಿನ (AQI) ಸೂಚ್ಯಂಕವನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ.

ಕಳೆದ ಕೆಲ ತಿಂಗಳುಗಳಿಂದ ದೆಹಲಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಪಟಾಕಿ ಸಿಡಿಸುವಿಕೆ ಮತ್ತು ನೆರೆಯ ರಾಜ್ಯಗಳಲ್ಲಿ ಕಳೆ ಸುಡುವಿಕೆಯಿಂದ ಹೆಚ್ಚಾಗುತ್ತಿದೆ. ವಾಯುವ್ಯ ಮಾರುತಗಳು ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ಬೆಂಕಿಯಿಂದ ಹೊಗೆಯನ್ನು ರಾಷ್ಟ್ರ ರಾಜಧಾನಿಯ ಕಡೆಗೆ ಸಾಗಿಸುತ್ತವೆ. ಕಳೆದ ವರ್ಷ, ನವೆಂಬರ್ 5 ರಂದು ದೆಹಲಿಯ ಮಾಲಿನ್ಯದಲ್ಲಿ ಕಳೆ ಸುಡುವಿಕೆಯ ಪಾಲು 42 ಪ್ರತಿಶತದಷ್ಟಿತ್ತು. 2019 ರಲ್ಲಿ, ನವೆಂಬರ್ 1 ರಂದು ದೆಹಲಿಯ PM2.5 ಮಾಲಿನ್ಯದ 44 ಪ್ರತಿಶತದಷ್ಟು ಬೆಳೆ ಅವಶೇಷಗಳನ್ನು ಸುಡುವುದಾಗಿತ್ತು. ದೆಹಲಿಯ PM2.5 ಸಾಂದ್ರತೆಯಲ್ಲಿನ ಕಳೆ ಸುಡುವಿಕೆಯ ಕೊಡುಗೆಯು 2019 ರಲ್ಲಿ 19 ಪ್ರತಿಶತಕ್ಕೆ ಹೋಲಿಸಿದರೆ ಕಳೆದ ವರ್ಷ ದೀಪಾವಳಿ ದಿನದಂದು 32 ಪ್ರತಿಶತದಷ್ಟಿತ್ತು. ಅಕ್ಟೋಬರ್‌ನಲ್ಲಿ ದಾಖಲೆಯ ಮಳೆ ಮತ್ತು ಕಳೆ ಸುಡುವಿಕೆ, ಗಾಳಿಯ ದಿಕ್ಕಿನಿಂದಾಗಿ ದೆಹಲಿಯ ವಾಯುಮಾಲಿನ್ಯದಲ್ಲಿ ಕೃಷಿ ಬೆಂಕಿಯಿಂದಾಗುವ ಹೊಗೆಯ ಕೊಡುಗೆ ಕಡಿಮೆಯಾಗಿದೆ.

English summary
Delhi recorded the warmest day of the season on Thursday as the maximum temperature settled five notches above normal at 36.1 degrees Celsius, according to the India Meteorological Department (IMD). The sky was largely clear throughout the day, PTI reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X