ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಹಿಂಸಾಚಾರ; ನಡೆಯಿತಾ ಯುವಕನ ಲಾಕಪ್‌ ಡೆತ್?

|
Google Oneindia Kannada News

ನವದೆಹಲಿ, ಫೆಬ್ರವರಿ 29: ದೆಹಲಿ ಹಿಂಸಾಚಾರದಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿದ್ದ ಎಂದು ಆರೋಪಿಸಲಾಗಿದ್ದ ಯುವಕ ಮೃತಪಟ್ಟಿದ್ದಾನೆ. ಕಳೆದ ಫೆಬ್ರವರಿ 23 ರಂದು ಈಶಾನ್ಯ ದೆಹಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ, ನಾಲ್ಕು ಯುವಕರ ಮೇಲೆ ಐದಾರು ಪೊಲೀಸರು, "ನಿಮಗೆ ಆಜಾದಿ ಬೇಕಾ' ಎಂದು ಪ್ರಶ್ನೆ ಮಾಡುತ್ತಾ ಲಾಠಿಯಿಂದ ಹಲ್ಲೆ ಮಾಡಿದ್ದರು.

ಈ ಕುರಿತ ವಿಡಿಯೋ ಒಂದು ದೇಶ್ಯಾದ್ಯಂತ ಸಾಕಷ್ಟು ವೈರಲ್ ಆಗಿತ್ತು. ಅದರಲ್ಲಿ 23 ವರ್ಷದ ಯುವಕ ಫಯಾಜ್ ಎನ್ನುವ ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದಾನೆ. ಆದದರೆ, ಪಯಾಜ್‌ ಕುಟುಂಬದವರು ಇದೊಂದು ಲಾಕಪ್ ಡೆತ್ ಎಂದು ಆರೋಪಿಸಿದ್ದಾರೆ.

ನಾಪತ್ತೆಯಾಗಿದ್ದ ಐಬಿ ಅಧಿಕಾರಿ ಮೃತದೇಹ ಚರಂಡಿಯಲ್ಲಿ ಪತ್ತೆನಾಪತ್ತೆಯಾಗಿದ್ದ ಐಬಿ ಅಧಿಕಾರಿ ಮೃತದೇಹ ಚರಂಡಿಯಲ್ಲಿ ಪತ್ತೆ

"ಪಯಾಜ್ ಮೇಲೆ ಹಲ್ಲೆ ನಡೆದಿದ್ದಾಗ ಪಯಾಜ್‌ನನ್ನು ಆಸ್ಪತ್ರೆ ಬದಲು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು. ಇನ್ನುಳಿದ ಮೂವರನ್ನು ಅವರ ಹೆಸರಿನ ಕಾರಣಕ್ಕೆ ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ನಮ್ಮ ತಮ್ಮ ಪಯಾಜ್‌ನನ್ನು ಠಾಣೆಗೆ ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಪೊಲೀಸರ ಮಾಡಿದ ಕೊಲೆ ಇದು' ಎಂದು ಪಯಾಜ್‌ನ ಅಣ್ಣ ನಯೀಮ್ ಖಾಸಗಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

Delhi Violence Young Man Filmed Being Assaulted By Cops Dies In Lock-up

ಇನ್ನು ದೆಹಲಿ ಹಿಂಸಾಚಾರ ತಹಬದಿಗೆ ಬಂದಿದೆ ಎಂದು ದೆಹಲಿ ಪೊಲೀಸರು ಕೇಂದ್ರ ಸರ್ಕಾರದ ಗೃಹ ಇಲಾಖೆಗೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ. ಏತನ್ಮಧ್ಯೆ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 42 ಕ್ಕೆ ಏರಿದೆ.

English summary
Delhi Violence: Young Man Filmed Being Assaulted By Cops Dies In Lock-up Family Claim He Was Beaten Up in Lock-up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X