ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಹಿಂಸಾಚಾರ: ಪರಿಸ್ಥಿತಿ ಹತೋಟಿಗೆ ಬಂದರೂ ಸಾವಿನ ಸಂಖ್ಯೆ ಏರಿಕೆ

|
Google Oneindia Kannada News

ನವದೆಹಲಿ, ಫೆಬ್ರವರಿ.27: ಕಳೆದ ನಾಲ್ಕು ದಿನಗಳಿಂದ ಹಿಂಸಾಚಾರಕ್ಕೆ ನಲುಗಿದ್ದ ರಾಷ್ಟ್ರ ರಾಜಧಾನಿಯಲ್ಲಿ ಪರಿಸ್ಥಿತಿ ಗುರುವಾರ ಕೊಂಚ ಹತೋಟಿಗೆ ಬಂದಿದೆ. ಇದುವರೆಗೂ ನಡೆದ ಹಿಂಸಾಚಾರದಲ್ಲಿ 27 ಮಂದಿ ಪ್ರಾಣ ಬಿಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ದೆಹಲಿಯಲ್ಲಿ ಬುಧವಾರವೇ ಪರಿಸ್ಥಿತಿ ತಿಳಿಯಾಗಿದ್ದು, ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಯಾವುದೇ ಘರ್ಷಣೆಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ. ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದರು.

ದೆಹಲಿ ಹಿಂಸಾಚಾರ ತಡೆಗೆ 'ಜೇಮ್ಸ್ ಬಾಂಡ್' ಅಜಿತ್ ದೋವಲ್
ಈಶಾನ್ಯ ದೆಹಲಿಯಲ್ಲಿ ಆತಂಕದಲ್ಲಿದ್ದ ಜನರಿಗೆ ಧೈರ್ಯ ತುಂಬಿದ ಅಜಿತ್ ದೋವಲ್, ನಿಮ್ಮ ರಕ್ಷಣೆಗೆ ಕೇಂದ್ರ ಸರ್ಕಾರ ಮತ್ತು ರಕ್ಷಣಾ ಸಿಬ್ಬಂದಿ ಬದ್ಧರಾಗಿದ್ದಾರೆ. ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಮನೆಗಳಲ್ಲಿ ಸುರಕ್ಷಿತರಾಗಿರಿ ಎಂದು ಸಲಹೆ ನೀಡಿದರು.

Delhi Violence: Death Toll Rises In North-east Area, 200 Peoples Injured

ದೇಶವನ್ನು ಪ್ರೀತಿಸುವವರು, ನೆರೆಹೊರೆಯವರನ್ನೂ ಗೌರವಿಸಬೇಕು:
ಭಾರತ ದೇಶವನ್ನು ಪ್ರೀತಿಸುವ ಪ್ರತಿಯೊಬ್ಬರು, ತಮ್ಮ ಸಮಾಜವನ್ನು ಪ್ರೀತಿಸಬೇಕು, ನೆರೆಹೊರೆಯವರ ಜೊತೆ ಸಹಬಾಳ್ವೆಯಿಂದ ಬದುಕಬೇಕು ಎಂದು ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಮನವಿ ಮಾಡಿಕೊಂಡರು. ಜನರು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕೇ ವಿನಃ, ಹೆಚ್ಚುಸುವ ನಿಟ್ಟಿನಲ್ಲಿ ಪ್ರಯತ್ನಿಸಬಾರದು ಎಂದು ಹೇಳಿದರು.

Delhi Violence: Death Toll Rises In North-east Area, 200 Peoples Injured
ಇನ್ನು, ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಮುನ್ನ ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ಸಭೆಯಲ್ಲಿ ನೂತನವಾಗಿ ನೇಮಕಗೊಂಡ ಪೊಲೀಸ್ ಕಮಿಷನರ್ ಶ್ರೀವಾಸ್ತವ್, ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಮಂದೀಪ್ ಸಿಂಗ್ ರಂಧ್ವಾ, ಕಾನೂನು ವಿಭಾಗದ ಪೊಲೀಸ್ ಕಮಿಷನರ್ ಸತೀಶ್ ಗೋಲ್ಚಾ ಮತ್ತು ಈಶಾನ್ಯ ವಿಭಾಗದ ಡಿಸಿಪಿ ವೇದ ಪ್ರಕಾಶ್ ಆರ್ಯ ಹಾಜರ್ ಇದ್ದರು.
English summary
Delhi Violence: Death Toll Rises In North-east Area, 200 Peoples Injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X