ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ವಿವಿ ವಿದ್ಯಾರ್ಥಿ ಅಧ್ಯಕ್ಷನ ಸಂಘಟನೆಯಿಂದ ವಜಾ ಮಾಡಿದ ಎಬಿವಿಪಿ

|
Google Oneindia Kannada News

ನವದೆಹಲಿ, ನವೆಂಬರ್ 15: ನಕಲಿ ಪದವಿ ಅಂಕಪಟ್ಟಿ ಕೊಟ್ಟಿರುವ ಆರೋಪಕ್ಕೆ ಗುರಿ ಆಗಿರುವ ದೆಹಲಿ ವಿವಿಯ ವಿದ್ಯಾರ್ಥಿ ಪರಿಷತ್‌ನ ಅಧ್ಯಕ್ಷ ಅಂಕಿವ್ ಬೈಸೋಯಾ ಅವರನ್ನು ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಎಬಿವಿಯು ಹೇಳಿದೆ.

ದೆಹಲಿ ವಿವಿ ಚುನಾವಣೆಯಲ್ಲಿ ಎಬಿವಿಪಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ?ದೆಹಲಿ ವಿವಿ ಚುನಾವಣೆಯಲ್ಲಿ ಎಬಿವಿಪಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ?

ಎಬಿವಿಪಿಯಿಂದ ದೆಹಲಿಯ ವಿದ್ಯಾರ್ಥಿ ಪರಿಷತ್‌ ಚುನಾವಣೆಗೆ ಸ್ಪರ್ಧಿಸಿದ್ದ ಅಂಕಿವ್ ಬೈಸೋಯಾ ಅವರು ವಿವಿಯ ವಿದ್ಯಾರ್ಥಿ ಪರಿಷತ್ ನಾಯಕಾರಿ ಆಯ್ಕೆ ಆಗಿದ್ದರು. ಚುನಾವಣೆ ನಡೆದ ಕೆಲವೇ ದಿನಗಳಲ್ಲಿ ಅವರು ನಕಲಿ ಅಂಕಪಟ್ಟಿ ಕೊಟ್ಟಿರುವ ಆರೋಪ ಕೇಳಿಬಂದಿತ್ತು.

ಜೆಎನ್ ಯುನಲ್ಲಿ ನಾಲ್ಕೂ ಪ್ರಮುಖ ಹುದ್ದೆಗಳು ಎಡಪಂಥೀಯ ವಿದ್ಯಾರ್ಥಿ ಒಕ್ಕೂಟಕ್ಕೆ ಜೆಎನ್ ಯುನಲ್ಲಿ ನಾಲ್ಕೂ ಪ್ರಮುಖ ಹುದ್ದೆಗಳು ಎಡಪಂಥೀಯ ವಿದ್ಯಾರ್ಥಿ ಒಕ್ಕೂಟಕ್ಕೆ

ಇದೀಗ ಅವರನ್ನು ಹುದ್ದೆ ತೆರವು ಮಾಡುವಂತೆ ಸೂಚಿಸಿರುವ ಎಬಿವಿಪಿ, ತನಿಖೆ ಮುಗಿಯುವವರೆಗೆ ಎಬಿವಿಪಿಯ ಎಲ್ಲ ರೀತಿಯ ಜವಾಬ್ದಾರಿಗಳಿಂದ ಹಾಗೂ ಸದಸ್ಯತ್ವದಿಂದಲೂ ವಜಾ ಮಾಡಲಾಗಿದೆ ಎಂದು ಎಬಿವಿಪಿ ತಿಳಿಸಿದೆ.

Delhi university student president expelled from ABVP

ಅಂಕಿವ್ ಭೈಸೋಯಾ ನಕಲಿ ಅಂಕಪಟ್ಟಿ ನೀಡಿ ವಿವಿ ಸೇರಿರುವುದ್ದಾಗಿ ಕೆಲವು ವಿದ್ಯಾರ್ಥಿಗಳು ವಿವಿಯ ಗಮನಕ್ಕೆ ತಂದಿದ್ದರು. ಆ ನಂತರ ಈ ವಿಷಯವು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿತು.

ಹೈದರಾಬಾದ್ ವಿವಿಯಲ್ಲಿ ಎಲ್ಲ ಆರು ಸ್ಥಾನ ಬಾಚಿಕೊಂಡ ಎಬಿವಿಪಿ ಹೈದರಾಬಾದ್ ವಿವಿಯಲ್ಲಿ ಎಲ್ಲ ಆರು ಸ್ಥಾನ ಬಾಚಿಕೊಂಡ ಎಬಿವಿಪಿ

ಅಂಕಿವ್ ಭೂಸೋಯಾ ಅವರು ತಮಿಳುನಾಡಿನ ವಿವಿಯೊಂದರ ಪದವಿ ಅಂಕಪಟ್ಟಿಯನ್ನು ದೆಹಲಿ ವಿವಿಗೆ ನೀಡಿ ದಾಖಲಾತಿ ಪಡೆದಿದ್ದರು ಆದರೆ ಅವು ನಕಲಿ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣ ವಿಚಾರಣೆ ನಡೆಸಿರುವ ಹೈಕೋರ್ಟ್‌ ತಮಿಳುನಾಡಿನ ವಿವಿಯಿಂದ ಅಂಕಪಟ್ಟಿಯ ಪರಿಶೀಲನೆ ನಡೆಸಿ ನವೆಂಬರ್ 20 ರಂದು ಕೋರ್ಟ್‌ಗೆ ಮಾಹಿತಿ ನೀಡುವಂತೆ ದೆಹಲಿ ವಿವಿಗೆ ಸೂಚಿಸಿದೆ.

English summary
Delhi university student union president Ankiv Baisoya expelled from ABVP. Organization asks him to step down from Delhi university president post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X