ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ. 8ರಿಂದ ದೆಹಲಿ ಗಡಿ ತೆರವು; ಹಲವು ನಿಷೇಧ ಮುಂದುವರಿಕೆ

|
Google Oneindia Kannada News

ನವದೆಹಲಿ, ಜೂನ್ 07 : "ದೆಹಲಿಯ ಗಡಿಯನ್ನು ಸೋಮವಾರದಿಂದ ತೆರವು ಮಾಡಲಾಗುತ್ತದೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ. ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 27,654ಕ್ಕೆ ಏರಿಕೆಯಾಗಿದೆ.

Recommended Video

Chiranjeevi Sarja | ಸ್ಯಾಡಲ್ ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ | Oneindia Kannada

ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಅರವಿಂದ್ ಕೇಜ್ರಿವಾಲ್, "ಸೋಮವಾರದಿಂದ ಹೋಟೆಲ್, ಬಾಕ್ವೆಂಟ್ ಹಾಲ್ ರಾಜ್ಯದಲ್ಲಿ ಬಾಗಿಲು ತೆರೆಯುವುದಿಲ್ಲ. ರಾಜ್ಯದ ಗಡಿಯನ್ನು ತೆರೆಯಲಾಗುತ್ತದೆ" ಎಂದು ಹೇಳಿದರು.

ಆಸ್ಪತ್ರೆಗಳಲ್ಲಿ ಅಕ್ರಮ: 'ನಿಮ್ಮನ್ನು ಸುಮ್ಮನೆ ಬಿಡಲ್ಲ' ಎಂದ ದೆಹಲಿ ಸಿಎಂಆಸ್ಪತ್ರೆಗಳಲ್ಲಿ ಅಕ್ರಮ: 'ನಿಮ್ಮನ್ನು ಸುಮ್ಮನೆ ಬಿಡಲ್ಲ' ಎಂದ ದೆಹಲಿ ಸಿಎಂ

"ರೆಸ್ಟೋರೆಂಟ್, ಮಾಲ್, ಪ್ರಾರ್ಥನಾ ಮಂದಿರಗಳನ್ನು ತೆರೆಯಲಾಗುತ್ತದೆ. ಬಾಕ್ವೆಂಟ್ ಹಾಲ್‌ಗಳನ್ನು ತೆರೆಯುವ ಕುರಿತು ಸರ್ಕಾರ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ" ಎಂದು ತಿಳಿಸಿದರು.

'ದೆಹಲಿ ಕೊರೊನಾ' ಅಪ್ಲಿಕೇಷನ್‌ನಲ್ಲಿ ಮಾತ್ರ ಹಾಸಿಗೆ ಲಭ್ಯ, ಆಸ್ಪತ್ರೆಯಲ್ಲಿಲ್ಲ 'ದೆಹಲಿ ಕೊರೊನಾ' ಅಪ್ಲಿಕೇಷನ್‌ನಲ್ಲಿ ಮಾತ್ರ ಹಾಸಿಗೆ ಲಭ್ಯ, ಆಸ್ಪತ್ರೆಯಲ್ಲಿಲ್ಲ

Delhi To Reopen Its Borders From June 8

ನವದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳವಾದ ಕಾರಣ ಜೂನ್ 1ರಿಂದ ರಾಜ್ಯದ ಗಡಿಯನ್ನುಮುಚ್ಚಲಾಗಿತ್ತು. ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ದೆಹಲಿ ಮೆಟ್ರೋದ 20 ಸಿಬ್ಬಂದಿಗೆ ಕೋವಿಡ್ - 19 ಸೋಂಕು ದೆಹಲಿ ಮೆಟ್ರೋದ 20 ಸಿಬ್ಬಂದಿಗೆ ಕೋವಿಡ್ - 19 ಸೋಂಕು

ನವದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 27,654. ದೇಶದಲ್ಲಿ ಮಹಾರಾಷ್ಟ್ರ, ತಮಿಳುನಾಡು ಹೊರತುಪಡಿಸಿದರೆ ಹೆಚ್ಚು ಸೋಂಕಿತರು ಇರುವ ರಾಜ್ಯ ದೆಹಲಿ. ಇದುವರೆಗೂ ರಾಜ್ಯದಲ್ಲಿ 761 ಜನರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿಯ ಚಿತ್ರಣವನ್ನು ವಿಶ್ಲೇಷಿಸಲು ಸರ್ಕಾರ 5 ತಜ್ಞರ ಸಮಿತಿಯೊಂದನ್ನು ರಚನೆ ಮಾಡಿತ್ತು. ಜೂನ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಸಮಿತಿ ಅಂದಾಜಿಸಿದೆ.

English summary
Delhi Chief minister Arvind Kejriwal announced that opening of Delhi's borders from Monday June 8, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X