ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಾಸಾ' ಚಿತ್ರಗಳಲ್ಲಿ ದೆಹಲಿ ಮಾಲಿನ್ಯದ ರಹಸ್ಯ ಬಯಲು

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

ವಾಯು ಮಾಲಿನ್ಯದಿಂದ ತತ್ತರಿಸಿದ ನವ ದೆಹಲಿ | ನಾಸಾ ಚಿತ್ರದಲ್ಲಿ ರಹಸ್ಯ ಬಯಲು

ದೆಹಲಿ, ನವೆಂಬರ್ 9: ಹಿಂದೆಂದೂ ಕಂಡು ಕೇಳರಿಯದ ವಾಯು ಮಾಲಿನ್ಯಕ್ಕೆ ದೆಹಲಿ ತತ್ತರಿಸಿದೆ. ಶಾಲೆಗಳಿಗೆ ಭಾನುವಾರವರೆಗೆ ರಜೆ ಘೋಷಿಸಲಾಗಿದೆ. ಜತೆಗೆ ನವೆಂಬರ್ 13ರಿಂದ ಸಮ-ಬೆಸ ನಿಯಮ ಜಾರಿಗೆ ತರಲಾಗಿದೆ.

ದೆಹಲಿಯಲ್ಲಿ ಇಷ್ಟೊಂದು ಮಾಲಿನ್ಯ ಉಂಟಾಗಲು ನೆರೆಯ ರಾಜ್ಯಗಳಲ್ಲಿ ಬೆಳೆಗಳ ತ್ಯಾಜ್ಯಕ್ಕೆ ಇಡುತ್ತಿರುವ ಬೆಂಕಿ ಪ್ರಮುಖ ಕಾರಣವಾಗಿದೆ.

ವಾಯು ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ, ಭಾನುವಾರದವರೆಗೆ ಶಾಲೆಗಳು ಬಂದ್ವಾಯು ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ, ಭಾನುವಾರದವರೆಗೆ ಶಾಲೆಗಳು ಬಂದ್

ಹೀಗಾಗಿ ಬೆಳೆಗಳಿಗೆ ಬೆಂಕಿ ಹಚ್ಚುವುದಕ್ಕೆ ಅಂತ್ಯ ಹಾಡುವಂತೆ ಪಂಜಾಬ್ ಮತ್ತು ಹರ್ಯಾಣ ಮುಖ್ಯಮಂತ್ರಿಗಳಿಗೆ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಬೆಳೆಗಳನ್ನು ರೈತರು ಉರಿಸದೇ ಇದ್ದು ನಾಶ ಮಾಡುವ ಪರ್ಯಾಯ ವಿಧಾನ ಕಂಡುಕೊಳ್ಳಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಆದರೆ ಕೇಜ್ರಿವಾಲ್ ಹೇಳಿಕೆಗೆ ಗರಂ ಆಗಿರುವ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್, "ಅವರಿಗೆ ನೈಜ ಸಮಸ್ಯೆ ಅರ್ಥವಾಗಿತ್ತಿಲ್ಲ. 2 ಕೋಟಿ ಭತ್ತದ ಹುಲ್ಲು ಇದೆ. ಇದನ್ನು ಎಲ್ಲಿ ಸಂಗ್ರಹಿಸಿ ಎಂದು ರೈತರಿಗೆ ನಾನು ಕೇಳಿಕೊಳ್ಳಲಿ?" ಎಂದು ಪ್ರಶ್ನಿಸಿದ್ದಾರೆ.

ದೆಹಲಿ ಮಾಲಿನ್ಯ: ನಿರ್ಮಾಣ ಕಾರ್ಯ, ಟ್ರಕ್ ಪ್ರವೇಶಗಳಿಗೆ ನಿರ್ಬಂಧದೆಹಲಿ ಮಾಲಿನ್ಯ: ನಿರ್ಮಾಣ ಕಾರ್ಯ, ಟ್ರಕ್ ಪ್ರವೇಶಗಳಿಗೆ ನಿರ್ಬಂಧ

ಹೀಗೆ ಪರ ವಿರೋಧ ಚರ್ಚೆಗಳು, ರಾಜಕೀಯ ಕೆಸರೆರೆಚಾಟಗಳು ನಡೆಯುತ್ತಿರುವ ಬೆನ್ನಿಗೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ 'ನಾಸಾ' ದೆಹಲಿ ಸುತ್ತಮುತ್ತಲಿನ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬೆಳೆಗೆ ಬೆಂಕಿ ಹಚ್ಚುತ್ತಿರುವುದರ ತೀವ್ರತೆ ಸೆರೆಯಾಗಿದೆ.

ನವೆಂಬರ್ 1 ಚಿತ್ರ

ನವೆಂಬರ್ 1 ಚಿತ್ರ

ಪ್ರತಿ ಅಕ್ಟೋಬರ್ ನಲ್ಲಿ ಉತ್ತರ ಭಾರತದ ರೈತರು ಮಿಲಯನ್ ಟನ್ ಗಳಷ್ಟು ಕೃಷಿ ತ್ಯಾಜ್ಯವನ್ನು ಬೆಂಕಿ ಹಾಕಿ ನಾಶಪಡಿಸುತ್ತಾರೆ.

ನವೆಂಬರ್ 2ರ ಚಿತ್ರ

ನವೆಂಬರ್ 2ರ ಚಿತ್ರ

ಅಂದಾಜು 3.5 ಕೋಟಿ ಟನ್ ಕೃಷಿ ತ್ಯಾಜ್ಯವನ್ನು ರೈತರು ಉರಿಸುತ್ತಾರೆ. ಉರಿಸಿ ಚಳಿಗಾಲದ ಬೆಳೆ ಬೆಳೆಯಲು ಸ್ಥಳಾವಕಾಶ ಸೃಷ್ಟಿಸುತ್ತಾರೆ.

ನವೆಂಬರ್ 3ರ ಚಿತ್ರ

ನವೆಂಬರ್ 3ರ ಚಿತ್ರ

ನಾಸಾದ ಚಿತ್ರಗಳಲ್ಲಿ ಬೆಳೆಗಳ ತ್ಯಾಜ್ಯಕ್ಕೆ ಬೆಂಕಿ ಇಡುತ್ತಿರುವುದು ಸೆರೆಯಾಗಿದೆ. ಈ ಚಿತ್ರಗಳು ಬೆಂಕಿಯ ಕೆನ್ನಾಲಿಗೆಯ ಗಂಭೀರತೆಯನ್ನು ಸಾರಿ ಹೇಳುತ್ತಿದೆ.

ನವೆಂಬರ್ 4ರ ಚಿತ್ರ

ನವೆಂಬರ್ 4ರ ಚಿತ್ರ

ಬೆಳೆಗಳಿಗೆ ಬೆಂಕಿ ಇಡುವ ಪ್ರಕ್ರಿಯೆ ಅಕ್ಟೋಬರ್ 27 ಮತ್ತು 31ರಂದು ಅತೀ ಹೆಚ್ಚಾಗಿತ್ತು. ಈ ಬೆಳೆಗಳ ಧೂಮದಿಂದಲೇ ದೆಹಲಿಯಲ್ಲಿ ಮಾಲಿನ್ಯ ಉಂಟಾಗಿದೆ.

ನವೆಂಬರ್ 5ರ ಚಿತ್ರ

ನವೆಂಬರ್ 5ರ ಚಿತ್ರ

ಕೃಷಿ ತ್ಯಾಜ್ಯಗಳನ್ನು ಉರಿಸದಂತೆ ರಾಷ್ಟ್ರೀಯ ಹಸಿರು ಮಂಡಳಿ ನಿಷೇಧ ಹೇರಿದೆ. ಆದರೆ ನಿಷೇಧದ ಮಧ್ಯೆಯೂ ರೈತರು ತ್ಯಾಜ್ಯಕ್ಕೆ ಬೆಂಕಿ ಇಡುತ್ತಿರುವುದು ಮಾಲಿನ್ಯ ಪ್ರಮಾಣವನ್ನು ಹೆಚ್ಚಿಸಿದೆ.

ನವೆಂಬರ್ 6ರ ಚಿತ್ರ

ನವೆಂಬರ್ 6ರ ಚಿತ್ರ

ಬೆಳೆಗಳಿಗೆ ಬೆಂಕಿ ಇಡುತ್ತಿರುವುದರಿಂದ ವಾಯು ಮಾಲಿನ್ಯ ವಿಪರೀತವಾಗಿದ್ದು ದೆಹಲಿಯ ಜನರು ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ನವೆಂಬರ್ 7ರ ಚಿತ್ರ

ನವೆಂಬರ್ 7ರ ಚಿತ್ರ

ದೆಹಲಿಯ ಮಾಲಿನ್ಯಕ್ಕೆ ಕಡಿವಾಣ ಹಾಕಲು ಸಮ-ಬೆಸ ಸಂಖ್ಯೆ ನಿಯಮ ಜಾರಿಗೆ ತರಲಾಗಿದೆ. ಜತೆಗೆ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸುವಂತೆ ಜನರಲ್ಲಿ ಕೇಳಿಕೊಳ್ಳಲಾಗಿದೆ.

ನವೆಂಬರ್ 8ರ ಚಿತ್ರ

ನವೆಂಬರ್ 8ರ ಚಿತ್ರ

ಈ ಬಾರಿ ದೀಪಾವಳಿ ಸಂದರ್ಭ ದೆಹಲಿಯಲ್ಲಿ ಪಟಾಕಿ ಮಾರಾಟವನ್ನು ಸುಪ್ರಿಂ ಕೋರ್ಟ್ ನಿಷೇಧಿಸಿತ್ತು. ಮಾಲಿನ್ಯಕ್ಕೆ ತಡೆಯೊಡಡಲು ಈ ಕ್ರಮ ಹೇರಲಾಗಿತ್ತು. ಆದರೆ ಈಗ ಬೆಳೆಗಳಿಗೆ ರೈತರು ಇಡುತ್ತಿರುವ ಬೆಂಕಿ ಪಟಾಕಿಯನ್ನು ಮೀರಿಸಿ ಮಾಲಿನ್ಯ ಸೃಷ್ಟಿಸಿದೆ.

English summary
Crop burning in the neighbouring states is said to be the main culprit of Delhi pollution reveals NASA images. Delhi Chief Minister Arvind Kejriwal has requested the Chief Ministers of Punjab and Haryana to put an end to crop burning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X