ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಸೋಮವಾರದಿಂದ ಎಲ್ಲಾ ತರಗತಿಗಳ ಶಾಲೆಗಳು ಆರಂಭ

|
Google Oneindia Kannada News

ನವದೆಹಲಿ, ಅಕ್ಟೋಬರ್ 27: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದು ಕ್ರಮೇಣ ಜನಜೀವನ ಸಹಜ ಸ್ಥಿತಿಗೆ ಮರುಕಳಿಸುತ್ತಿದೆ. ರಾಷ್ಟ್ರ ರಾಜಧಾನಿಯಲ್ಲೂ ಕೆಲ ಕ್ಷೇತ್ರಗಳು ಷರತ್ತು ಬದ್ಧವಾಗಿ ಸಡಿಲಗೊಳ್ಳುತ್ತಿವೆ. ಇದರೊಂದಿಗೆ ದೆಹಲಿಯಲ್ಲಿ ಸೋಮವಾರದಿಂದ (ನವೆಂಬರ್ 1) ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರದಿಂದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬುಧವಾರದಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಸಭೆಯ ನಂತರ ತಿಳಿಸಿದ್ದಾರೆ. ದೈಹಿಕ ಹಾಜರಾತಿಯು ಸ್ವಯಂಪ್ರೇರಿತವಾಗಿರುತ್ತದೆ ಮತ್ತು ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಒತ್ತಾಯಿಸುವುದಿಲ್ಲ. ಏಕೆಂದರೆ ಮಕ್ಕಳಿಗೆ ತರಗತಿಗಳು ದೈಹಿಕ ಮತ್ತು ಆನ್‌ಲೈನ್ ತರಗತಿಗಳು ಏಕಕಾಲದಲ್ಲಿ ನಡೆಯುತ್ತವೆ ಎಂದು ಅವರು ಹೇಳಿದರು.

50% ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಒಂದೇ ಸಮಯದಲ್ಲಿ ದೈಹಿಕ ತರಗತಿಗಳಿಗೆ ಹಾಜರಾಗಲು ಕರೆಯಲಾಗುವುದಿಲ್ಲ ಎಂದು ಸಿಸೋಡಿಯಾ ಅವರು ಹೇಳಿದ್ದಾರೆ. ಶಾಲೆಗಳು ತಮ್ಮ ಸಿಬ್ಬಂದಿಗೆ 100 ಪ್ರತಿಶತದಷ್ಟು ಲಸಿಕೆ ಹಾಕಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ. ಇಲ್ಲಿಯವರೆಗೆ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆಗಳಲ್ಲಿ ಅವಕಾಶವಿತ್ತು. ಸದ್ಯ ಎಲ್ಲಾ ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.

Delhi Schools To Reopen From Monday For All Classes

ಈ ಹಿಂದೆ ದೆಹಲಿಯ COVID-19 ಪರಿಸ್ಥಿತಿಯನ್ನು ಪರಿಶೀಲಿಸಿ ನಗರ ಆರೋಗ್ಯ ಕಾರ್ಯದರ್ಶಿಗಳು ಮಾಲ್‌ಗಳು ಮತ್ತು ಮೆಟ್ರೋ ರೈಲುಗಳಿಗೆ ಪ್ರವೇಶಿಸಲು ವ್ಯಾಕ್ಸಿನೇಷನ್ ಕಡ್ಡಾಯಗೊಳಿಸುವಂತೆ ಸೂಚಿಸಿದ್ದರು. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಬುಧವಾರ ತೆಗೆದುಕೊಂಡ ನಿರ್ಧಾರದಲ್ಲಿ ಸಾರ್ವಜನಿಕವಾಗಿ ಛತ್ ಆಚರಣೆಗೆ ಅವಕಾಶ ನೀಡಿದೆ. ಈ ಹಿಂದೆ ಹಬ್ಬದ ಸಾರ್ವಜನಿಕ ಆಚರಣೆಗಳನ್ನು ನಿಷೇಧಿಸಲಾಗಿತ್ತು. ಮಾತ್ರವಲ್ಲದೇ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಆರೋಗ್ಯ ಸೌಲಭ್ಯಗಳಿಲ್ಲದ ವಾರ್ಡ್‌ಗಳಲ್ಲಿ ಆರು ಔಷಧಾಲಯಗಳು ಮತ್ತು ಎರಡು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಿದೆ. ಬಾದರ್‌ಪುರ, ಸಾಗರ್‌ಪುರ, ಮೋಹನ್‌ ಗಾರ್ಡನ್‌, ಆರ್‌ಕೆ ಪುರಂ, ತುಘಲಕಾಬಾದ್‌ ಮತ್ತು ಕೇಶವಪುರ ಸೇರಿದಂತೆ ಪ್ರದೇಶಗಳಲ್ಲಿ ಔಷಧಾಲಯಗಳ ಸ್ಥಾಪನೆಗೆ ಎಸ್‌ಡಿಎಂಸಿ ಮಂಗಳವಾರ ಅನುಮೋದನೆ ನೀಡಲಾಗಿದೆ.

ದೆಹಲಿಯಲ್ಲಿ ಮಂಗಳವಾರ 41 ಹೊಸ ಕೋವಿಡ್ -19 ಪ್ರಕರಣಗಳು ಮತ್ತು ಸೋಂಕಿನಿಂದ ಶೂನ್ಯ ಸಾವುಗಳು ದಾಖಲಾಗಿವೆ, ಆದರೆ ಧನಾತ್ಮಕ ಪ್ರಮಾಣವು ಶೇಕಡಾ 0.08 ರಷ್ಟಿದೆ. ಅಕ್ಟೋಬರ್‌ನಲ್ಲಿ ಇದುವರೆಗೆ ದೆಹಲಿಯಲ್ಲಿ ಸೋಂಕಿನಿಂದ ಕೇವಲ ನಾಲ್ಕು ಸಾವುಗಳು ದಾಖಲಾಗಿವೆ. ಕಳೆದ ತಿಂಗಳು ಐವರು ಕಾಯಿಲೆಗೆ ಬಲಿಯಾಗಿದ್ದರು. ಏತನ್ಮಧ್ಯೆ, ಜಲಸಚಿವ ಸತ್ಯೇಂದ್ರ ಜೈನ್ ನಡೆಸಿದ ಡಿಜೆಬಿಯ ಮಂಡಳಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಪ್ರಕಾರ ದೆಹಲಿ ಜಲ ಮಂಡಳಿ (ಡಿಜೆಬಿ) ಈಗ ಯಾವುದೇ ಮಧ್ಯವರ್ತಿಗಳಿಲ್ಲದೆ ಎಲ್ಲಾ ಮನೆಗಳ ನೀರಿನ ಸಂಪರ್ಕಗಳನ್ನು ಒದಗಿಸಲಿದೆ.

ದೆಹಲಿಯಲ್ಲಿ ಮಂಗಳವಾರದಂದು 41 ಕೊರೊನಾ ಪ್ರಕರಣಗಳು ವರದಿಯಾಗಿವೆ. ಸೋಮವಾರ ದೆಹಲಿಯಲ್ಲಿ 27 ಪ್ರಕರಣಗಳು ದಾಖಲಾಗಿದ್ದು, ಭಾನುವಾರ 37 ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 14.39 ಲಕ್ಷಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 25,091 ಕ್ಕೆ ಏರಿಕೆಯಾಗಿದೆ. ದೆಹಲಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಇತ್ತೀಚಿನ ಬುಲೆಟಿನ್ ಪ್ರಕಾರ ಕಳೆದ 24 ಗಂಟೆಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ರಾಷ್ಟ್ರ ರಾಜಧಾನಿ ಅಕ್ಟೋಬರ್‌ನಲ್ಲಿ ಇದುವರೆಗೆ ಸೋಂಕಿನಿಂದ ಕೇವಲ ನಾಲ್ಕು ಸಾವುಗಳನ್ನು ದಾಖಲಿಸಿದೆ. ಕಳೆದ ತಿಂಗಳು, ಐದು ಜನರು ವೈರಲ್ ಕಾಯಿಲೆಗೆ ಬಲಿಯಾಗಿದ್ದರು.

ದೆಹಲಿ ಸರ್ಕಾರ ಹೊರಡಿಸಿದ ಆರೋಗ್ಯ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ 50,202 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ. ಕಳೆದ 24 ಗಂಟೆಗಳಲ್ಲಿ 25 ರೋಗಿಗಳು ಚೇತರಿಸಿಕೊಂಡಿದ್ದಾರೆ. ಈವರೆಗೆ ಡಿಸ್ಚಾರ್ಜ್ ಆಗಿರುವ ಅಥವಾ ಚೇತರಿಸಿಕೊಂಡಿರುವ ಸಂಖ್ಯೆ 14,14,257 ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 323 ಆಗಿದ್ದು, ಅದರಲ್ಲಿ 98 ಪ್ರಕರಣಗಳು ಮನೆಗಳಲ್ಲಿ ಪ್ರತ್ಯೇಕವಾಗಿವೆ.

English summary
All schools in the national capital can be reopened from Monday for students of all classes, Delhi's Deputy Chief Minister Manish Sisodia said on Wednesday after a meeting of the Delhi Disaster Management Authority (DDMA).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X