ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19: ಅಕ್ಟೋಬರ್‌ 5ರವರೆಗೆ ದೆಹಲಿ ಶಾಲೆಗಳು ತೆರೆಯುವುದಿಲ್ಲ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 18: ದೆಹಲಿಯಲ್ಲಿ ಅಕ್ಟೋಬರ್ 5ರವರೆಗೆ ಶಾಲೆಗಳು ಮುಚ್ಚಿರಲಿವೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಅನ್‌ಲಾಕ್‌ 4 ಮಾರ್ಗಸೂಚಿ ಪ್ರಕಾರ 9-12ನೇ ತರಗತಿಯವರೆಗೆ ಸೆಪ್ಟೆಂಬರ್ 21ರಿಂದ ಶಾಲೆಗಳು ತೆರೆಯಲಿವೆ ಎಂದು ಹೇಳಲಾಗಿತ್ತು, ಇದೀಗ ಅರವಿಂದ್ ಕೇಜ್ರಿವಾಲ್ ಸ್ಪಷ್ಟನೆ ನೀಡಿದ್ದು, ಅಕ್ಟೋಬರ್ 5ರವರೆಗೆ ಶಾಲೆಗಳು ತೆರೆಯುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳು ಶಾಲೆಗೆ ಹೋಗಬಹುದು: ಸರ್ಕಾರ ಅನುಮತಿವಿದ್ಯಾರ್ಥಿಗಳು ಶಾಲೆಗೆ ಹೋಗಬಹುದು: ಸರ್ಕಾರ ಅನುಮತಿ

ಕೇಂದ್ರ ಸರ್ಕಾರವು ಆಗಸ್ಟ್ 30ರಂದು ಅನ್‌ಲಾನ್ 4 ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಸೆಪ್ಟೆಂಬರ್ 30ರವರೆಗೆ ಶಾಲೆಗಳು ಬಂ್ ಇರಲಿವೆ. 9-12 ತರಗತಿವಿದ್ಯಾರ್ಥಿಗಳು ಮಾತ್ರ ಶಾಲೆಗಳಿಗೆ ಭೇಟಿ ನೀಡಬಹುದು ಎಂದು ಹೇಳಿತ್ತು. ಆದರೆ ಕಂಟೈನ್ಮೆಂಟ್ ಜೋನ್‌ ಅಲ್ಲಿರುವವರಿಗೆ ಮಾತ್ರ ಈ ಅವಕಾಶವಿಲ್ಲ ಎಂಬುದನ್ನೂ ತಿಳಿಸಿತ್ತು.

Delhi Schools To Remain Closed For All Students Till October 5

ಆನ್‌ಲೈನ್ ತರಗತಿಗಳು ಮುಂದುವರೆಯಲಿವೆ. ದೇಶದಾದ್ಯಂತ ಮಾರ್ಚ್‌ನಿಂದ ಶಾಲೆಗಳನ್ನು ಮುಚ್ಚಲಾಗಿತ್ತು. ಆನ್‌ಲೈನ್ ಮೂಲಕ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಸ್ಟಡಿ ಮೆಟೀರಿಯಲ್ ಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿಕೊಡಲಾಗುತ್ತಿದೆ.ಸೆ. 21ರಿಂದ 9 ರಿಂದ 12ನೆಯ ತರಗತಿವರೆಗಿನ ಮಕ್ಕಳು ಸ್ವ ಇಚ್ಛೆಯ ಆಧಾರದಲ್ಲಿ ಶಿಕ್ಷಕರಿಂದ ಮಾರ್ಗದರ್ಶನ ಪಡೆದುಕೊಳ್ಳಲು ಶಾಲೆಗಳಿಗೆ ತೆರಳಲು ಅವಕಾಶ ನೀಡಲಾಗುತ್ತಿದೆ. ಈ ಮೂಲಕ ಶಾಲೆಗಳ ಭಾಗಶಃ ಚಟುವಟಿಕೆಗಳು ಪುನಃ ಆರಂಭವಾಗಲಿವೆ.

ವರದಿ ವಿದ್ಯಾರ್ಥಿಗಳು ಶಿಕ್ಷಕರ ಭೇಟಿಗೆ ಬರಲು ಅವಕಾಶ ನೀಡುವ ಶಾಲೆಗಳು ನಿರ್ದಿಷ್ಟ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಶಿಕ್ಷಕರು, ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.

ಶಾಲೆಗಳಲ್ಲಿ ಕನಿಷ್ಠ ಆರು ಅಡಿ ದೈಹಿಕ ಅಂತರ ಕಾಪಾಡಬೇಕು. ಮಾಸ್ಕ್ ಕಡ್ಡಾಯ. ಶಾಲೆಗಳಲ್ಲಿ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಬಳಸಬೇಕು.

Recommended Video

ಕೇಂದ್ರ ಸರ್ಕಾರದ ಆದೇಶಕ್ಕೆ waiting | Oneindia Kannada

ಸೋಪ್ ಬಳಸಿ ಕೈಗಳನ್ನು ತೊಳೆದುಕೊಳ್ಳಬೇಕು. ಶಾಲೆಯ ಆವರಣದಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆರೋಗ್ಯ ಸೇತು ಆಪ್‌ಅನ್ನು ಅಳವಡಿಸಿಕೊಳ್ಳಬೇಕು. ಆರೋಗ್ಯದ ಕುರಿತು ಸ್ವಯಂ ನಿಗಾ ವಹಿಸುತ್ತಿರಬೇಕು ಸೇರಿದಂತೆ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ.

English summary
All schools in the national capital will continue to remain closed till October 5 in view of the rising number of the cases, the Delhi government announced on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X