ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕಿಯರ ಮೇಲೆ ಅತ್ಯಾಚಾರ ಕುರಿತ ವಿದ್ಯಾರ್ಥಿಗಳ ಚಾಟಿಂಗ್ ಹಿಸ್ಟರಿ ಬಯಲು

|
Google Oneindia Kannada News

ನವದೆಹಲಿ, ಮೇ 5: ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೆಣ್ಣುಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುವಂತಹ ಪರಿಸ್ಥಿತಿ ಇದೆ.

ಇಂತಹ ಸಂದರ್ಭದಲ್ಲಿ ಇನ್‌ಸ್ಟಾಗ್ರಾಂ ಗ್ರೂಪ್‌ನಲ್ಲಿ ಶಾಲಾ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುವುದು ಹೇಗೆ ಎನ್ನುವ ಕುರಿತು ಚಾಟ್ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

ದೆಹಲಿಯ 'ಬಾಯ್ಸ್‌ ಲಾಕರ್ ರೂಂ' ಅಶ್ಲೀಲ ಚಾಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌ದೆಹಲಿಯ 'ಬಾಯ್ಸ್‌ ಲಾಕರ್ ರೂಂ' ಅಶ್ಲೀಲ ಚಾಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌

'ಬಾಯ್ಸ್ ಲಾಕರ್ ರೂಮ್' ಎನ್ನುವ ಇನ್‌ಸ್ಟಾ ಗ್ರಾಂ ಗ್ರೂಪ್‌ನಲ್ಲಿ ಒಟ್ಟು 20 ಮಂದಿ ಕಾಲೇಜು ವಿದ್ಯಾರ್ಥಿಗಳಿದ್ದಾರೆ. ಅವರು ಬಾಲಕಿಯರ ಅತ್ಯಾಚಾರದ ಕುರಿತು ಚಾಟಿಂಗ್ ನಡೆಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗ್ರೂಪ್ ಡಿ ಆಕ್ಟಿವೇಟ್

ಗ್ರೂಪ್ ಡಿ ಆಕ್ಟಿವೇಟ್

ಭಾನುವಾರ ಅವರ ಚಾಟಿಂಗ್ ಸ್ಕ್ರೀನ್‌ ಶಾಟ್‌ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದಾದ ಬಳಿಕ ಅವರು ಗ್ರೂಪ್‌ ಅನ್ನು ಡಿ ಆಕ್ಟಿವೇಟ್ ಮಾಡಿದ್ದಾರೆ. ಒಟ್ಟು ಐದಾರು ಕಾಲೇಜುಗಳ ವಿದ್ಯಾರ್ಥಿಗಳು ಸೇರಿ ಈ ಗ್ರೂಪ್ ಮಾಡಿದ್ದರು.

ಮೊಬೈಲ್ ಫೋನ್ ಪೊಲೀಸರ ವಶಕ್ಕೆ

ಮೊಬೈಲ್ ಫೋನ್ ಪೊಲೀಸರ ವಶಕ್ಕೆ

ಪೊಲೀಸರು ಮೊಬೈಲ್‌ನ್ನು ವಶಕ್ಕೆ ಪಡೆದಿದ್ದಾರೆ. ಗ್ರೂಪಿನಲ್ಲಿ ಒಟ್ಟು 20 ಮಂದಿ ವಿದ್ಯಾರ್ಥಿಗಳಿದ್ದರು. ಎಲ್ಲರೂ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದಾರೆ.

ಸೈಬರ್ ಕ್ರೈಂ ಪೊಲೀಸರಿಂದ ಪತ್ರ

ಸೈಬರ್ ಕ್ರೈಂ ಪೊಲೀಸರಿಂದ ಪತ್ರ

ಫೇಸ್‌ಬುಕ್ ಒಡೆತನದ ಕಂಪನಿಯಾಗಿರುವ ಇನ್‌ಸ್ಟಾಗ್ರಾಂಗೆ ಸೈಬರ್ ಕ್ರೈಂ ಪೊಲೀಸರು ಪತ್ರ ಬರೆದಿದ್ದು, ಆ ಗ್ರೂಪ್ ಬಗ್ಗೆ ಮತ್ತಷ್ಟು ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

ವಿದ್ಯಾರ್ಥಿನಿಯರ ಫೋಟೊಗಳನ್ನು ಹಾಕುತ್ತಿದ್ದರು

ವಿದ್ಯಾರ್ಥಿನಿಯರ ಫೋಟೊಗಳನ್ನು ಹಾಕುತ್ತಿದ್ದರು

ಯಾರದ್ದೂ ಒಪ್ಪಿಗೆ ಇಲ್ಲದೆ ಗ್ರೂಪ್‌ಗಳಲ್ಲಿ ವಿದ್ಯಾರ್ಥಿನಿಯರ ಫೋಟೊಗಳನ್ನು ಶೇರ್ ಮಾಡುತ್ತಿದ್ದರು. ಈ ಕುರಿತು ಗ್ರೂಪ್‌ನ ಸ್ಕ್ರೀನ್‌ಶಾಟ್ ತೆಗೆದು ಒಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಪೋಸ್ಟ್‌ ಮಾಡಿದ್ದರು. ತಮ್ಮದೇ ತರಗತಿಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವುದು ಹೇಗೆ ಎಂಬುದರ ಕುರಿತು ಕೂಡ ಚರ್ಚೆ ನಡೆದಿತ್ತು.

English summary
Leaked screenshots from an Instagram group allegedly run by teenage boys have gone viral on Indian social media. Why? Because of their graphic sexualisation as well as sharing of private photos of underage women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X