ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉನ್ನತ ಚಿಕಿತ್ಸೆ: ನಿರ್ಭಯಾ ಆರೋಪಿ ವಿನಯ್ ಶರ್ಮಾ ಅರ್ಜಿ ವಜಾ

|
Google Oneindia Kannada News

ನವದೆಹಲಿ, ಫೆಬ್ರವರಿ 22: ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆ ಕೊಡಿಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ನಿರ್ಭಯಾ ಆರೋಪಿ ವಿನಯ್ ಶರ್ಮಾ ಅರ್ಜಿಯನ್ನು ಪಟಿಯಾಲಾ ಕೋರ್ಟ್ ವಜಾಗೊಳಿಸಿದೆ.

ಮಾರ್ಚ್ 3 ರಂದು ನಿರ್ಭಯಾ ಅತ್ಯಾಚಾರ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದು ನಿಗದಿಯಾಗಿದೆ. ಹೀಗಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ವಿನಯ್ ಶರ್ಮಾ ತಲೆಯನ್ನು ಚಚ್ಚಿಕೊಂಡು ಗಾಯಮಾಡಿಕೊಂಡಿದ್ದ. ಬಳಿಕ ಆತನಿಗೆ ಚಿಕಿತ್ಸೆಯನ್ನೂ ಕೊಡಿಸಲಾಗಿತ್ತು. ಉನ್ನತ ಮಟ್ಟದ ಚಿಕಿತ್ಸೆ ಕೊಡಿಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದ , ನ್ಯಾಯಾಲಯವರು ವಿನಯ್ ಅರ್ಜಿಯನ್ನು ವಜಾಗೊಳಿಸಿದೆ.

ನೇಣು ತಪ್ಪಿಸಿಕೊಳ್ಳಲು ನಿರ್ಭಯಾ ಅಪರಾಧಿ ಹೊಸ ತಂತ್ರನೇಣು ತಪ್ಪಿಸಿಕೊಳ್ಳಲು ನಿರ್ಭಯಾ ಅಪರಾಧಿ ಹೊಸ ತಂತ್ರ

ಮಾನಸಿಕವಾಗಿ ಚಿಕಿತ್ಸೆ ಬೇಕಿದ್ದರೆ ನೀಡುವುದಾಗಿ ಕೋರ್ಟ್ ತಿಳಿಸಿದೆ.ತನ್ನ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿಗಳ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ನಿರ್ಭಯಾ ಅತ್ಯಾಚಾರಿ ವಿನಯ್ ಶರ್ಮಾ ಅರ್ಜಿಯನ್ನು ವಜಾಗೊಳಿಸಿತ್ತು.

Delhis Patiala House Court Dismisses The Petition Of Convict Vinay Sharma

ಈ ಹಿಂದೆ ಅಪರಾಧಿ ವಿನಯ್ ಶರ್ಮಾ, 'ನಿರ್ಭಯಾ ಪ್ರಕರಣದಲ್ಲಿ ರಾಷ್ಟ್ರಪತಿಗಳು ತನ್ನ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಅಪರಾಧಿ ವಿನಯ್ ಶರ್ಮಾಅರ್ಜಿ ಸಲ್ಲಿಕೆ ಮಾಡಿದ್ದ. ಅರ್ಜಿಯಲ್ಲಿ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಬೇಕು. ಜೈಲಿನಲ್ಲಿ ಹಿಂಸೆಯಿಂದಾಗಿ ಮಾನಸಿಕ ಆರೋಗ್ಯ ಹದಗೆಟ್ಟಿದೆ.

ನನ್ನನ್ನು ಗಲ್ಲಿಗೇರಿಸುವುದನ್ನು ಬೆಂಬಲಿಸಿ ಕೇಂದ್ರ ಸರ್ಕಾರದ ಸಚಿವರು ಹಾಗೂ ದೆಹಲಿ ಸರ್ಕಾರ ಸಾರ್ವಜನಿಕವಾಗಿ ನೀಡಿದ್ದ ಹೇಳಿಕೆಗಳಿಂದಾಗಿ, ನನ್ನ ಕ್ಷಮಾದಾನ ಅರ್ಜಿಯ ನಿರ್ಣಯ ಪೂರ್ವನಿರ್ಧರಿತವಾಗಿತ್ತು.

ಕ್ಷಮಾದಾನ ಅರ್ಜಿ ಸಲ್ಲಿಕೆಯಾದ 48 ತಾಸುಗಳಲ್ಲಿಯೇ ತರಾತುರಿಯಲ್ಲಿ ಅರ್ಜಿಯನ್ನು ತಿರಸ್ಕರಿಸಿರುವುದು ವಂಚನೆ. ಇದು ಸಂವಿಧಾನದ ಉಲ್ಲಂಘನೆ ಎಂದು ಆರೋಪಿಸಿದ್ದ.

English summary
Nirbhaya case: Delhi's Patiala House Court dismisses the petition of convict Vinay Sharma, seeking direction to provide high-level medical treatment to him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X