ಮೋದಿ ಶಿವಲಿಂಗದ ಮೇಲಿನ ಚೇಳು ಎಂದಿದ್ದ ತರೂರ್ ವಿರುದ್ಧ ವಾರಂಟ್
ನವದೆಹಲಿ, ನವೆಂಬರ್ 12: ತಮ್ಮ ವಿರುದ್ಧ ಇದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಹಾಜರಾಗದ ಕಾರಣ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ದೆಹಲಿ ನ್ಯಾಯಾಲಯವೊಂದು ಜಾಮೀನುಸಹಿತ ವಾರಂಟ್ ನೀಡಿದೆ.
ಮೋದಿಯನ್ನು ಚೇಳು ಎಂದಿದ್ದ ತರೂರ್ ವಿರುದ್ಧ ಮಾನನಷ್ಟ ಮೊಕದ್ದಮೆ
2018 ರ ಅಕ್ಟೋಬರ್ ನಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ತಿರುವನಂತಪುರಂ ಸಂಸದ ತರೂರ್, 'ಪ್ರಧಾನಿ ನರೇಂದ್ರ ಮೋದಿ ಅವರು ಶಿವಲಿಂಗದ ಮೇಲಿರುವ ಚೇಳಿನ ಹಾಗೆ. ಬರಿ ಕೈಯಿಂದ ಅದನ್ನು ಸರಿಸುವುದಕ್ಕೂ ಆಗುವುದಿಲ್ಲ. ಚಪ್ಪಲಿಯಿಂದ ಹೊಡೆಯಲೂ ಸಾಧ್ಯವಿಲ್ಲ' ಎಂಬ ಹೇಳಿಕೆ ನೀಡಿದ್ದರು.
ಮೋದಿ ಅವರನ್ನು ನಿಯಂತ್ರಿಸಲಾಗದ ಆರೆಸ್ಸೆಸ್ ನಾಯಕರೇ ಒಬ್ಬರು ಇಂಥ ಹೇಳಿಕೆ ನೀಡಿದ್ದರು ಎಂದು ತರೂರ್ ಹೇಳಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗದ ಕಾರಣ ಇದೀಗ ವಾರಂಟ್ ಹೊರಡಿಸಲಾಗಿದೆ.