• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ಅಪಾಯಕಾರಿ ಮಟ್ಟ ತಲುಪಿದ ವಾಯು ಮಾಲಿನ್ಯ

|

ನವದೆಹಲಿ,ಫೆಬ್ರವರಿ 10: ದೆಹಲಿಯಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟವನ್ನು ತಲುಪಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಎಚ್ಚರಿಕೆ ನೀಡಲಾಗಿದೆ.

ಗಾಳಿಯ ಗುಣಮಟ್ಟ ಕಳಪೆ ಮಟ್ಟವನ್ನು ತಲುಪಿದೆ ಎಂದು ಗುಣಮಟ್ಟ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆಯು ವರದಿ ಮಾಡಿದೆ.ದೆಹಲಿಯ ವಾಯು ಗುಣಮಟ್ಟ ಬುಧವಾರ ಕುಸಿತಗೊಂಡಿದೆ. ಬೆಳಗ್ಗೆ 6 ಗಂಟೆಯ ವೇಳೆಗೆ ಗಾಳಿ ಗುಣಮಟ್ಟ ಸೂಚ್ಯಂಕ(ಎಕ್ಯೂಐ) 325 ದಾಖಲಾಗಿದೆ.

ವಾಯು ಮಾಲಿನ್ಯ ವರದಿ: ದೊಡ್ಡ ನಗರಗಳೇ ಎಷ್ಟೋ ಉತ್ತಮವಾಯು ಮಾಲಿನ್ಯ ವರದಿ: ದೊಡ್ಡ ನಗರಗಳೇ ಎಷ್ಟೋ ಉತ್ತಮ

ವಾಹನ ಸಂಚಾರಕ್ಕೆ ದಟ್ಟ ಮಂಜಿನಿಂದಾಗಿ ಅಡೆತಡೆ ಉಂಟಾಗಿದೆ. ದೆಹಲಿಯಲ್ಲಿ ಪಶ್ಚಿಮದಿಂದ ಬೀಸುತ್ತಿರುವ ಗಾಳಿಯ ವೇಗ ಹೆಚ್ಚಾದರೆ , ವಾಯು ಗುಣಮಟ್ಟ ಸುಧಾರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಾಕಷ್ಟು ಪ್ರದೇಶಗಳಲ್ಲಿ ದಟ್ಟವಾದ ಮಂಜು ಆವರಿಸಿದೆ. ಹಾಗೆಯೇ ವಾಯು ಗುಣಮಟ್ಟವು ಅತ್ಯಂತ ಕಳಪೆ ಮಟ್ಟದಲ್ಲಿದೆ ಎಂಬುದು ತಿಳಿದುಬಂದಿದೆ.

ದೆಹಲಿಯ ವಿಶ್ವವಿದ್ಯಾಲಯ,ಲೋಧಿ ರಸ್ತೆ,ಮಥುರಾ ರಸ್ತೆ,ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಆಯನಗರದಲ್ಲಿ ವಾಯು ಗುಣಮಟ್ಟ ಕಳಪೆಯಾಗಿದೆ ಎಕ್ಯೂಐ 336,309,349,361, ಹಾಗೂ 310 ದಾಖಲಾಗಿದೆ.

ಗುರುಗ್ರಾಮ ಹಾಗೂ ನೋಯ್ಡಾದಲ್ಲಿ ಕೂಡ ಗಾಳಿಯ ಗುಣಮಟ್ಟ ಉತ್ತಮವಾಗಿಲ್ಲ, ದೆಹಲಿಯಲ್ಲಿ ಫೆಬ್ರವರಿ 12ರವೇಳೆಗೆ ಮತ್ತಷ್ಟು ವಾಯುಮಾಲಿನ್ಯ ಹೆಚ್ಚಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
The air quality in the national capital remained in the very poor category on Wednesday morning with an AQI hovering at 325 thanks to low surface winds, according to the latest estimates updated by the System of Air Quality and Weather Forecasting And Research (SAFAR).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X