ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ವಾಯು ಗುಣಮಟ್ಟ 'ಅತ್ಯಂತ ಕಳಪೆ' ವಿಭಾಗದಲ್ಲಿದೆ

|
Google Oneindia Kannada News

ನವದೆಹಲಿ, ನವೆಂಬರ್ 14: ಕಳೆದ 24 ಗಂಟೆಗಳಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸ್ವಲ್ಪ ಕುಸಿದಿದ್ದು, ಆದಾಗ್ಯೂ, ಶುಕ್ರವಾರ "ಅತ್ಯಂತ ಕಳಪೆ' ವಿಭಾಗದಲ್ಲಿ ಉಳಿದಿದೆ.

ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ಅಂಕಿಅಂಶಗಳ ಪ್ರಕಾರ ಶನಿವಾರ ಬೆಳಿಗ್ಗೆ, ಆನಂದ್ ವಿಹಾರ್ ನಲ್ಲಿನ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 424 ತೀವ್ರವಾಗಿದ್ದು, ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 328 (ಅತ್ಯಂತ ಕಳಪೆ), ಐಟಿಒನಲ್ಲಿ 400 (ಅತ್ಯಂತ ಕಳಪೆ), ಮತ್ತು ಆರ್‌.ಕೆ ಪುರಂನಲ್ಲಿ 354 (ಅತ್ಯಂತ ಕಳಪೆ) ಸೂಚ್ಯಂಕ ಇದೆ.

 ದೆಹಲಿಯಲ್ಲಿ ಏಕಾಏಕಿ ಏರಿದ ಕೊರೊನಾ ಪ್ರಕರಣ; ಸರ್ಕಾರವನ್ನು ತರಾಟೆ ತೆಗೆದುಕೊಂಡ ಕೋರ್ಟ್ ದೆಹಲಿಯಲ್ಲಿ ಏಕಾಏಕಿ ಏರಿದ ಕೊರೊನಾ ಪ್ರಕರಣ; ಸರ್ಕಾರವನ್ನು ತರಾಟೆ ತೆಗೆದುಕೊಂಡ ಕೋರ್ಟ್

ದೆಹಲಿಯಲ್ಲಿ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟದ ಸೂಚ್ಯಂಕವನ್ನು (ಎಕ್ಯೂಐ) 339 ಎಂದು ದಾಖಲಿಸಿದೆ. ಇದು ಗುರುವಾರ 314 ಸೂಷ್ಯಂಕವಾಗಿತ್ತು.

Delhis Air Quality Is In The Very Poor Category

ದೀಪಾವಳಿ ಹಬ್ಬದ ಸಮಯದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯದ ಮಟ್ಟವು ಹೆಚ್ಚಾಗಬಹುದು ಎಂಬ ಕಾರಣಕ್ಕೆ ದೆಹಲಿ-ಎನ್‌ಸಿಆರ್ ನಲ್ಲಿ ಬಿಸಿ ಮಿಶ್ರಣ ಘಟಕಗಳು ಮತ್ತು ಕಲ್ಲು ಕ್ರಷರ್ ಗಳನ್ನು ಮುಚ್ಚುವಂತೆ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಸಿಪಿಸಿಬಿ) ಬುಧವಾರ ನಿರ್ದೇಶನ ನೀಡಿತ್ತು.

ನೊವೆಲ್ ಕೊರೊನಾವೈರಸ್ ಮತ್ತು ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿಯು ಹೋರಾಟ ಮಾಡುತ್ತಿದ್ದು. ನಗರದಲ್ಲಿ ವಾಯುಮಾಲಿನ್ಯದ ಮಟ್ಟ ಏರಿಕೆಯಿಂದಾಗಿ ನವೆಂಬರ್ 5 ರಿಂದ ನವೆಂಬರ್ 30 ರವರೆಗೆ ಎಎಪಿ ಸರ್ಕಾರ ಎಲ್ಲಾ ರೀತಿಯ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿತ್ತು.

Delhis Air Quality Is In The Very Poor Category

ಸೋಮವಾರದಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಎನ್‌ಸಿಆರ್ ನಲ್ಲಿ ಎಲ್ಲಾ ರೀತಿಯ ಪಟಾಕಿಗಳನ್ನು ಮಾರಾಟ ಮಾಡಲು ಅಥವಾ ಬಳಸಲು ಸಂಪೂರ್ಣ ನಿಷೇಧ ಹೇರಿತ್ತು.

"ಸಂತೋಷಕ್ಕಾಗಿ ಪಟಾಕಿ ಆಚರಿಸಬೇಕೇ ಹೊರತು, ಸಾವು ಮತ್ತು ರೋಗಗಳಿಗಾಗಿ ಆಚರಿಸಬಾರದು' ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

English summary
The air quality in the national capital New Delhi has declined slightly in the past 24 hours, however, and remained in the "very poor' category on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X