• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿ ಗಲಭೆ: ಯೆಚೂರಿ, ಯೋಗೇಂದ್ರ ವಿರುದ್ಧ ಚಾರ್ಜ್ ಶೀಟ್

|

ನವದೆಹಲಿ, ಸೆ. 13: ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚುವರಿ ದೋಷರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಚಾರ್ಜ್ ಶೀಟ್ ನಲ್ಲಿ ಸೀತಾರಾಮ್ ಯೆಚೂರಿ, ಯೋಗೇಂದ್ರ ಯಾದವ್, ಜಯಂತಿ ಘೋಶ್, ಅಪೂರ್ವನಂದ, ರಾಹುಲ್ ರಾಯ್ ಮುಂತಾದವರ ಹೆಸರು ಉಲ್ಲೇಖಿಸಲಾಗಿದೆ.

ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಯೆಚೂರಿ, ಸ್ವರಾಜ್ ಅಭಿಯಾನದ ಮುಖಂಡ ಯೋಗೇಂದ್ರ ಯಾದವ್, ಅರ್ಥಶಾಸ್ತ್ರಜ್ಞೆ ಜಯಂತಿ ಘೋಶ್, ದೆಹಲಿ ವಿವಿ ಪ್ರಾಧ್ಯಾಪಕ ಅಪೂರ್ವನಂದ, ನಿರ್ಮಾಪಕ ರಾಹುಲ್ ರಾಯ್ ಅವರನ್ನು ಸಹ ಸಂಚುಕೋರರು ಎಂದು ದೋಷರೋಪಣ ಪಟ್ಟಿಯಲ್ಲಿ ತಿಳಿಸಲಾಗಿದೆ..

ಬಿಜೆಪಿಗೆ ಸಿಕ್ಕಿದ ಬಲ: ಪಕ್ಷಕ್ಕೆ ನೂರಾರು ಸಿಎಎ ವಿರೋಧಿ ಮುಸ್ಲಿಂ ಪ್ರತಿಭಟನಾಕಾರರ ಸೇರ್ಪಡೆಬಿಜೆಪಿಗೆ ಸಿಕ್ಕಿದ ಬಲ: ಪಕ್ಷಕ್ಕೆ ನೂರಾರು ಸಿಎಎ ವಿರೋಧಿ ಮುಸ್ಲಿಂ ಪ್ರತಿಭಟನಾಕಾರರ ಸೇರ್ಪಡೆ

ರಾಷ್ಟ್ರ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದು, ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಇವರ ಮೇಲೆ ಹೊರೆಸಲಾಗಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ವಿದ್ಯಾರ್ಥಿಗಳಾ ಹೇಳಿಕೆ ಆಧಾರಿಸಿ ಈ ನಡೆ ಇಡಲಾಗಿದೆ. ಸಿಎಎ/ ಎನ್ ಆರ್ ಸಿ ವಿರುದ್ಧದ ಪ್ರತಿಭಟನೆಯಲ್ಲಿ ಯಾವುದೇ ಹಂತಕ್ಕೆ ಬೇಕಾದರೂ ತೆಗೆದುಕೊಂಡು ಹೋಗಿ, ಈ ಮೂಲಕದ ಸರ್ಕಾರದ ಇಮೇಜ್ ಹಾಳಾಗಬೇಕು ಎಂಬ ಕರೆ ಬಂದಿತ್ತು ಎಂದು ಬಂಧಿತರು ಸಾಕ್ಷ್ಯ ನುಡಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈಶಾನ್ಯ ದೆಹಲಿಯಲ್ಲಿ ಫೆಬ್ರವರಿ 23 ಹಾಗೂ 26 ರಂದು ಹಿಂಸಾಚಾರ, ಗಲಭೆ ನಡೆದು 53 ಮಂದಿ ಮೃತಪಟ್ಟು, 581 ಮಂದಿ ಗಾಯಗೊಂಡಿದ್ದರು. 97 ಮಂದಿಗೆ ಗುಂಡೇಟು ತಗುಲಿತ್ತು.

English summary
The Delhi Police have named CPI (M) general secretary Sitaram Yechury, Swaraj Abhiyan leader Yogendra Yadav, economist Jayati Ghosh, Delhi University professor and activist Apoorvanand, and documentary filmmaker Rahul Roy as co-conspirators in the February Delhi riots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X