ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಪೋರ್ಟ್ ಸಿಸಿ ಕ್ಯಾಮರಾದಿಂದ ತಗ್ಲಾಕೊಂಡ ನಕಲಿ ಏರ್ ಕ್ಯಾಪ್ಟನ್!

|
Google Oneindia Kannada News

ನವದೆಹಲಿ, ನವೆಂಬರ್.19: ಸರ್ಕಾರಿ ಸವಲತ್ತು ಪಡೆಯಲು ಜನರು ಏನೆಲ್ಲಾ ಕೆಲಸಗಳನ್ನು ಮಾಡುತ್ತಾರೆ ಅನ್ನೋದಕ್ಕೆ ಈ ಘಟನೆಯೇ ಬೆಸ್ಟ್ ಎಕ್ಸಾಂಪಲ್. ವಿಮಾನಯಾನ ಸಂಸ್ಥೆಯಲ್ಲಿನ ರಾಜ ಮರ್ಯಾದೆ ಅನುಭವಿಸಲು ಹೋಗಿ,ಇಲ್ಲೊಬ್ಬ ಆಸಾಮಿ ಸರಿಯಾಗೇ ತಗ್ಲಾಕೊಂಡಿದ್ದಾನೆ.

ಇದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿರುವ ಘಟನೆ. ಏರ್ ಪೋರ್ಟ್ ನಲ್ಲಿ ಏರ್ ಕ್ಯಾಪ್ಟನ್ ಸಮವಸ್ತ್ರ ಧರಿಸಿಕೊಂಡು ವ್ಯಕ್ತಿಯೊಬ್ಬ ಓಡಾಡುತ್ತಿದ್ದನು. ಈ ವ್ಯಕ್ತಿಯ ನಡುವಳಿಕೆ ಮೇಲೆ ಅನುಮಾನ ಬಂದು ವಿಚಾರಣೆಗೆ ಒಳಪಡಿಸಿದಾಗ ಅಚ್ಚರಿಯ ವಿಷಯ ಹೊರ ಬಿದ್ದಿದೆ.

ಹೌದು, ಜರ್ಮನಿ ಲಫ್ತಾನಾ ವಿಮಾನಯಾನ ಸಂಸ್ಥೆಯ ಏರ್ ಕ್ಯಾಪ್ಟನ್ ವೇಷ ಧರಿಸಿಕೊಂಡು ಓಡಾಡುತ್ತಿದ್ದ ರಾಜನ್ ಮೆಹಬೂಬಾನಿ ಎಂಬಾತನನ್ನು ನವೆಂಬರ್.18ರಂದೇ ದೆಹಲಿಯ ಸಿಐಎಸ್ಎಫ್ ಪೊಲೀಸರು ಅನುಮಾನಗೊಂಡು ಬಂಧಿಸಿದರು. ನಂತರ ಈತನ ಬಗ್ಗೆ ಲುಫ್ತಾನ್ಸಾ ಮುಖ್ಯ ಭದ್ರತಾ ಅಧಿಕಾರಿ ಆದಿತ್ಯಾ ಸಿಂಗ್ ಅವರಿಗೆ ಕರೆ ಮಾಡಲಾಯಿತು. ಆಗ ಗೊತ್ತಾಗಿದ್ದು ಮತ್ತೊಂದು ಅಚ್ಚರಿಯ ವಿಷಯ.

Delhi resident arrested by CISF for impersonating Flight Captain at IGI Airport

ಅಸಲಿ ಸಮವಸ್ತ್ರ, ನಕಲಿ ಐಡಿ ಕಾರ್ಡ್!

ಸಿಐಎಸ್ಎಫ್ ಅಧಿಕಾರಿಗಳು ಬಂಧಿತ ರಾಜನ್ ಮೆಹಬೂಬಾನಿ ಬಗ್ಗೆ ವಿಚಾರಣೆ ನಡೆಸಿದರು. ಈ ವೇಳೆ ಲುಫ್ತಾನ್ಸಾದಲ್ಲಿ ಈ ಹೆಸರಿನ ಏರ್ ಕ್ಯಾಪ್ಟನ್ ಇಲ್ಲವೇ ಇಲ್ಲ ಎಂದು ತಿಳಿದು ಬಂತು. ನಂತರ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಏರ್ ಪೋರ್ಟ್ ನಲ್ಲಿನ ಸವಲತ್ತುಗಳನ್ನು ಪಡೆಯಲು ಹೀಗೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ಏರ್ ಕ್ಯಾಪ್ಟನ್ ವೇಷದಲ್ಲಿದ್ದ ರಾಜನ್ ನಕಲಿ ಐಡಿ ಕಾರ್ಡ್ ನ್ನು ಬ್ಯಾಂಕಾಕ್ ನಲ್ಲಿ ಪಡೆದಿದ್ದಾಗಿ ಒಪ್ಪಿಕೊಂಡಿದ್ದಾನೆ.

English summary
A Man impersonating Flight Captain To get Special privilege. Chief Security Officers Of Lufthansa Airlines Alerted CISF Personnel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X