ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ 635 ಹೊಸ ಕೇಸ್, ಸೋಂಕಿತರ ಸಂಖ್ಯೆ 14,000ಕ್ಕೆ ಏರಿಕೆ

|
Google Oneindia Kannada News

ದೆಹಲಿ, ಮೇ 25: ರಾಷ್ಟ್ರ ರಾಜಧಾನಿಯಲ್ಲಿಂದು 635 ಕೊರೊನಾ ಕೇಸ್‌ಗಳು ಪತ್ತೆಯಾಗಿದೆ. ಈ ಮೂಲಕ ದೆಹಲಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,053ಕ್ಕೆ ಏರಿಕೆಯಾಗಿದೆ.

Recommended Video

ಆನ್ ಲೈನ್ ಟೀಚಿಂಗ್ ಮಕ್ಕಳಿಗೆ ಅರ್ಥವಾಗ್ತಿಲ್ಲ ಅಂದ್ರೆ ಪೋಷಕರು ಏನ್ ಮಾಡ್ಬೇಕು | Online Teaching

ಇದುವರೆಗೂ 276 ಜನರು ಕೊರೊನಾ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸ್ತುತ 7006 ಪ್ರಕರಣಗಳು ಸಕ್ರಿಯವಾಗಿದೆ. 6771 ಜನರು ಕೊವಿಡ್ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕೊರೊನಾ ವೈರಸ್ ಕೊಲ್ಲುವಂತಾ ಬಿಸಿಲು ಬರುತ್ತೆ ಎಚ್ಚರ ಎಚ್ಚರ!ಕೊರೊನಾ ವೈರಸ್ ಕೊಲ್ಲುವಂತಾ ಬಿಸಿಲು ಬರುತ್ತೆ ಎಚ್ಚರ ಎಚ್ಚರ!

ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಬಿಟ್ಟರೆ ದೆಹಲಿಯಲ್ಲಿ ಅತಿ ಹೆಚ್ಚು ಕೊರೊನಾ ಕೇಸ್ ದಾಖಲಾಗಿದೆ. ಅದರಲ್ಲೂ ಲಾಕ್‌ಡೌನ್‌ನಿಂದ ಸಡಿಲಿಕೆ ನೀಡಿದ ಬಳಿಕ ಕೇಸ್‌ಗಳ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದೆ.

Delhi Reports 635 New COVID19 Cases Today

ಆದರೂ, ದೆಹಲಿಯಲ್ಲಿ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಣದಲ್ಲಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಹೊಸ ಕೊವಿಡ್ ಸೋಂಕಿತರು ಹೆಚ್ಚುತ್ತಿದ್ದಾರೆ. ಅದೇ ರೀತಿ ಚೇತರಿಕೆ ಕಾಣುವವರ ಸಂಖ್ಯೆಯೂ ಅಧಿಕವಾಗಿದೆ. ಹಾಗಾಗಿ, ಚಿಂತೆ ಮಾಡಬೇಕಾದ ಅನಿವಾರ್ಯತೆ ಇಲ್ಲ ಎಂದು ಸಿಎಂ ಹೇಳಿದ್ದಾರೆ.

ಕಳೆದ ಒಂದು ವಾರದಿಂದ ದೆಹಲಿಯಲ್ಲಿ ಪ್ರತಿದಿನವೂ 500 ಹೊಸ ಪ್ರಕರಣಗಳು ದಾಖಲಾಗುತ್ತಿದೆ. ಶುಕ್ರವಾರ 660 ಜನರಿಗೆ ಸೋಂಕು ದೃಢವಾಗಿತ್ತು. ಇಲ್ಲಿಯವರೆಗೂ ಒಟ್ಟು 1,74,469 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ದೆಹಲಿಯಲ್ಲಿ 3,421 ಜನರು ಕ್ವಾರಂಟೈನ್‌ನಲ್ಲಿದ್ದಾರೆ.

ಇನ್ನು ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1.40ಕ್ಕೆ ಏರಿಕೆಯಾಗಿದೆ. 77,103 ಕೇಸ್‌ಗಳ ಸಕ್ರಿಯವಾಗಿದ್ದು, 57,721 ಜನರು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

English summary
Delhi reports 635 new coronavirus cases today, tally crosses 14,000 in the state. total number of active cases in India stands at 77,103 till Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X