ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ನವದೆಹಲಿಯಲ್ಲಿ 4ನೇ ಮಂಕಿಪಾಕ್ಸ್ ಪ್ರಕರಣ ಪತ್ತೆ

|
Google Oneindia Kannada News

ನವದೆಹಲಿ, ಆಗಸ್ಟ್ 4: ನವದೆಹಲಿಯಲ್ಲಿ ಮಂಕಿಪಾಕ್ಸ್ ಸೋಂಕಿನ ನಾಲ್ಕನೇ ಪ್ರಕರಣ ವರದಿಯಾಗಿದೆ. 31 ವರ್ಷದ ವಿದೇಶಿ ಪ್ರಜೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಈ ಮಹಿಳೆೆ ಇತ್ತೀಚಿಗೆ ವಿದೇಶಿ ಪ್ರವಾಸದ ಹಿನ್ನಲೆಯನ್ನು ಹೊಂದಿದ್ದಾರೋ ಇಲ್ಲವೋ ಎನ್ನುವುದು ಇನ್ನಷ್ಟು ತಿಳಿದು ಬರಬೇಕಿದೆ.

ಮಹಿಳೆಗೆ ಜ್ವರ ಮತ್ತು ಚರ್ಮದ ಗಾಯಗಳಿದ್ದು, ಅವರನ್ನು ದೆಹಲಿಯ ಲೋಕನಾಯಕ್ ಜಯ ಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಬುಧವಾರ ಪಾಸಿಟಿವ್ ವರದಿ ಬಂದಿದೆ.

Monkeypox Do's And Don'ts: ಮಂಕಿಪಾಕ್ಸ್ ಕುರಿತು ಸುರಕ್ಷತೆ ಹೇಗೆ ಸಾಧ್ಯ?Monkeypox Do's And Don'ts: ಮಂಕಿಪಾಕ್ಸ್ ಕುರಿತು ಸುರಕ್ಷತೆ ಹೇಗೆ ಸಾಧ್ಯ?

ನವದೆಹಲಿಯಲ್ಲಿ ಮಂಕಿಪಾಕ್ಸ್ ಸೋಂಕಿತರ ಸಂಖ್ಯೆ ಕ್ರಮೇಣ ಏರಿಕೆಯಾಗುತ್ತಿದ್ದು, ಈವರೆಗೂ ನಾಲ್ಕು ಕೇಸ್ ಪತ್ತೆಯಾಗಿವೆ. ಭಾರತದಲ್ಲಿ ಇದುವರೆಗೂ 9 ಮಂದಿಗೆ ಮಂಕಿಪಾಕ್ಸ್ ಸೋಂಕು ತಗುಲಿರುವುದು ಪಕ್ಕಾ ಆಗಿದೆ. ಈ ಎಲ್ಲ ಪ್ರಕರಣಗಳು ದೆಹಲಿ ಮತ್ತು ಕೇರಳದಲ್ಲಿ ವರದಿಯಾಗಿವೆ.

Delhi reports 4th Monkeypox Case; Total cases rises to 9 In India

35 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್: ಮಂಗಳವಾರವಷ್ಟೇ ದೆಹಲಿಯಲ್ಲಿ ಇತ್ತೀಚಿಗೆ ಯಾವುದೇ ಪ್ರಯಾಣದ ಹಿನ್ನೆಲೆಯಿಲ್ಲದ 35 ವರ್ಷದ ವಿದೇಶಿ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ವ್ಯಕ್ತಿಯನ್ನು ಸರ್ಕಾರಿ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಂಕಿತ ಪ್ರಕರಣಗಳು ಮತ್ತು ರೋಗ ದೃಢಪಟ್ಟ ರೋಗಿಗಳಿಗೆ ಪ್ರತ್ಯೇಕ ವಾರ್ಡ್‌ಗಳನ್ನು ಸ್ಥಾಪಿಸಲು ಅರವಿಂದ್ ಕೇಜ್ರಿವಾಲ್ ಸರ್ಕಾರ ನಗರದ ಮೂರು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದಾರೆ. ಈ ಮಧ್ಯೆ ಸೋಮವಾರ, ದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್ ರೋಗಿಯನ್ನು ಲೋಕನಾಯಕ್ ಜಯ ಪ್ರಕಾಶ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.

ಮಂಕಿಪಾಕ್ಸ್ ಬಗ್ಗೆ ಪ್ರಾಥಮಿಕ ಮಾಹಿತಿ: ಮಂಕಿಪಾಕ್ಸ್ ಒಂದು ಝೂನೋಟಿಕ್ ಕಾಯಿಲೆಯಾಗಿದ್ದು, ಸಿಡುಬುಗೆ ಕಾರಣವಾಗುವ ವೈರಸ್‌ಗಳ ಒಂದೇ ಕುಟುಂಬಕ್ಕೆ ಸೇರಿದೆ. ಈ ರೋಗವು ಪಶ್ಚಿಮ ಮತ್ತು ಮಧ್ಯ ಆಫ್ರಿಕಾದಂತಹ ಪ್ರದೇಶಗಳಲ್ಲಿ ಸ್ಥಳೀಯವಾಗಿದೆ. ಆದರೆ ಇತ್ತೀಚೆಗೆ, ಆಸ್ಟ್ರೇಲಿಯಾ, ಯುಕೆ ಮತ್ತು ಯುಎಸ್ ಸೇರಿದಂತೆ ಇತರೆ ರಾಷ್ಟ್ರಗಳಲ್ಲೂ ಹೆಚ್ಚಾಗುತ್ತಿದೆ.

ಮಂಕಿಪಾಕ್ಸ್ ಸಿಡುಬಿಗೆ ಸಂಬಂಧಿಸಿದ ಒಂದು ಪಾಕ್ಸ್‌ವೈರಸ್ ಆಗಿದ್ದು, ಸಾಮಾನ್ಯವಾಗಿ ಮೊಡವೆ ಅಥವಾ ಗುಳ್ಳೆಗಳಂತಹ ಗಾಯಗಳನ್ನು ಉಂಟು ಮಾಡುತ್ತದೆ. ಇದರ ಜೊತೆ ಜ್ವರ, ತಲೆನೋವು, ಸ್ನಾಯು ನೋವು, ಶೀತ ಮತ್ತು ಉಸಿರಾಟ ಸಮಸ್ಯೆ ತರಹದ ಲಕ್ಷಣಗಳು ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತವೆ. ವೈರಸ್ ನಿಕಟ ಮತ್ತು ಆಗಾಗ್ಗೆ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಹೊಂದುವುದರಿಂದ ಯಾರಿಗಾದರೂ ಸೋಂಕು ಹರಡಬಹುದು. ಸೋಂಕಿತ ಪ್ರಾಣಿಗಳಿಂದ ಜನರು ಮಂಕಿಪಾಕ್ಸ್ ಸೋಂಕಿಗೆ ತುತ್ತಾಗುವ ಅಪಾಯವಿರುತ್ತದೆ.

ಈಗಾಗಲೇ 80 ರಾಷ್ಟ್ರಗಳಲ್ಲಿ ವರದಿಯಾದ ಮಂಕಿಪಾಕ್ಸ್; ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಜಗತ್ತಿನ 80 ರಾಷ್ಟ್ರಗಳಲ್ಲಿ ಸೇರಿ 18,500ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. "ತಮಗೆ ಸೋಂಕು ತಗುಲಿರುವ ಬಗ್ಗೆ ದೇಶಗಳು, ಸಮುದಾಯಗಳು ಮತ್ತು ಜನರು ಸ್ವಯಂಪ್ರೇರಿತರಾಗಿ ಮಾಹಿತಿ ನೀಡಿದರೆ ಹಾಗೂ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ, ಮಂಕಿಪಾಕ್ಸ್ ಸೋಂಕು ಹರಡುವಿಕೆಯನ್ನು ತಕ್ಷಣಕ್ಕೆ ತಡೆಯುವುದಕ್ಕೆ ಸಾಧ್ಯವಿದೆ," ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ ಟೆಡ್ರೊಸ್ ಗೆಬ್ರೆಯೆಸಸ್ ಹೇಳಿದ್ದಾರೆ.

English summary
Delhi reports 4th Monkeypox Case; Total cases rises to 9 In India. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X