• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ಒಂದೇ ತಿಂಗಳಲ್ಲಿ 2300 ಮಂದಿ ಕೊರೊನಾ ಸೋಂಕಿಗೆ ಬಲಿ

|

ನವದೆಹಲಿ, ನವೆಂಬರ್ 26: ದೆಹಲಿಯಲ್ಲಿ ಒಂದೇ ತಿಂಗಳಲ್ಲಿ 2300 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕೊರೊನಾ ಸೋಂಕಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಮೃತಪಡುತ್ತಿರುವವರ ಸಂಖ್ಯೆ ಪ್ರತಿನಿತ್ಯ ಏರಿಕೆಯಾಗುತ್ತಿದೆ.

ಅಕ್ಟೋಬರ್ 28ರವರೆಗೆ 2364 ಮಂದಿ ದೆಹಲಿಯಲ್ಲಿ ಮೃತಪಟ್ಟಿದ್ದರು. ಇದೀಗ ನಿತ್ಯ 5 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದು, ಇದುವರೆಗೆ 8720 ಮಂದಿ ಮೃತಪಟ್ಟಿದ್ದಾರೆ.

ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಾವಿಗೆ ಮತ್ತೊಂದು ಕಾರಣ ಬಹಿರಂಗ

ನಿನ್ನೆ 99 ಮಂದಿ ಮೃತಪಟ್ಟಿದ್ದರು. ನವೆಂಬರ್ 19 ರಂದು 98, ನವೆಂಬರ್ 20 ರಂದು 118,ನವೆಂಬರ್ 22, 23 ರಂದು 121, ನವೆಂಬರ್ 24ರಂದು 109 ಮಂದಿ ಮೃತಪಟ್ಟಿದ್ದಾರೆ.

ನವೆಂಬರ್ 11 ರಂದು ಒಂದೇ ದಿನ 8593 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು.100 ಜನರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸದರೆ ಈ ಪೈಕಿ ಶೇ.10.14ರಷ್ಟು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 61381 ಜನರನ್ನು ತಪಾಸಣೆಗೆ ಒಳಪಡಿಸಿದ ಸಂದರ್ಭದಲ್ಲಿ 6224 ಜನರಲ್ಲಿ ಸೋಂಕು ಪತ್ತೆಯಾಗಿದೆ.

ದಹಲಿಯಲ್ಲಿ ಕೊರೊನಾ ಸೋಂಕಿತರ ಸಾವಿಗಿರುವ ಮತ್ತೊಂದು ಕಾರಣದ ಬಗ್ಗೆ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮಾಹಿತಿ ನೀಡಿದ್ದಾರೆ. ಈಗಾಗಲೇ ಕೊರೊನಾ ಸೋಂಕಿನ ಮೂರನೇ ಅಲೆಯಿಂದ ದೆಹಲಿ ತತ್ತರಿಸಿದೆ ಹೀಗಿರುವಾಗ ಕೊರೊನಾ ಸೋಂಕಿತರ ಸಾವಿಗೆ ತ್ಯಾಜ್ಯ ಸುಡುವಿಕೆಯೂ ಕಾರಣ ಎಂಬುದು ತಿಳಿದುಬಂದಿದೆ.

ದೆಹಲಿಯಲ್ಲಿ ಕೊವಿಡ್-19 ಸಾವಿನ ಪ್ರಮಾಣ ಹೆಚ್ಚಾಗಲು ಕೃಷಿ ತ್ಯಾಜ್ಯ ಸುಡುವುದು ಪ್ರಮುಖ ಕಾರಣವಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ.

ಕೊವಿಡ್ -19 ಸಾಂಕ್ರಾಮಿಕದ ಮಧ್ಯೆ ಕೃಷಿ ತ್ಯಾಜ್ಯ ಸುಡುವಿಕೆಯಿಂದ ಭಾರೀ ಪ್ರಮಾಣದಲ್ಲಿ ಮಾಲಿನ್ಯ ಉಂಟಾಗುತ್ತಿದೆ. ದೆಹಲಿಗೆ ಇದು ಡಬಲ್ ಹೊಡೆತ. ಕೃಷಿ ತ್ಯಾಜ್ಯ ಸುಡುವುದು ಈಗ ಸ್ವಲ್ಪ ಕಡಿಮೆಯಾಗಿರುವುದರಿಂದ ಮಾಲಿನ್ಯವೂ ಕಡಿಮೆಯಾಗಿದ್ದು, ಕೊರೊನಾ ಸಾವಿನ ಪ್ರಮಾಣವೂ ಕೆಲವೇ ವಾರಗಳಲ್ಲಿ ಇಳಿಕೆಯಾಗಲಿದೆ ಎಂದು ಜೈನ್ ವಿಶ್ವಾಸ ವ್ಯಕ್ತಪಡಿಸಿದರು.

English summary
The intensity of the fresh Covid-19 outbreak in Delhi can be summed up by the fact that 2,300 people died in the city due to the deadly virus in less than a month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X