ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್-19: ನವದೆಹಲಿಯಲ್ಲಿ 5ನೇ ದಿನ 100ರ ಗಡಿ ದಾಟಿದ ಸಾವಿನ ಸಂಖ್ಯೆ!

|
Google Oneindia Kannada News

ನವದೆಹಲಿ, ನವೆಂಬರ್.25: ಕೊರೊನಾವೈರಸ್ ಸೋಂಕಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಮೃತಪಡುತ್ತಿರುವವರ ಸಂಖ್ಯೆ ಪ್ರತಿನಿತ್ಯ ಏರಿಕೆಯಾಗುತ್ತಿದೆ. ನಿರಂತರ ಐದನೇ ದಿನವೂ ಸಾವಿನ ಸಂಖ್ಯೆ 100ರ ಗಡಿ ದಾಟಿರುವುದು ಆತಂಕ ಹುಟ್ಟಿಸಿದೆ.

ನವದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲೇ ಕೊವಿಡ್-19 ಸೋಂಕಿಗೆ 109 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆಯು 8621ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 6224 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.

ಭಾರತೀಯರು ಕೊರೊನಾ ಲಸಿಕೆಗೆ ಎಷ್ಟು ಸನಿಹದಲ್ಲಿದ್ದಾರೆ? ಇಲ್ಲಿದೆ ಮಾಹಿತಿ ಭಾರತೀಯರು ಕೊರೊನಾ ಲಸಿಕೆಗೆ ಎಷ್ಟು ಸನಿಹದಲ್ಲಿದ್ದಾರೆ? ಇಲ್ಲಿದೆ ಮಾಹಿತಿ

100 ಜನರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸದರೆ ಈ ಪೈಕಿ ಶೇ.10.14ರಷ್ಟು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 61381 ಜನರನ್ನು ತಪಾಸಣೆಗೆ ಒಳಪಡಿಸಿದ ಸಂದರ್ಭದಲ್ಲಿ 6224 ಜನರಲ್ಲಿ ಸೋಂಕು ಪತ್ತೆಯಾಗಿದೆ.

Delhi Records Over 100 Coronavirus Deaths For 5th Day In A Row

ನವದೆಹಲಿಯಲ್ಲಿ ಅತಿಹೆಚ್ಚು ಕೊವಿಡ್-19 ಪ್ರಕರಣ:

ರಾಷ್ಟ್ರ ರಾಜಧಾನಿಯಲ್ಲಿ ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಕಳೆದ ನವೆಂಬರ್.11ರಂದು 8593 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಇತ್ತೀಚಿನ ದಿನಗಳಲ್ಲಿ ಒಂದೇ ದಿನ ದಾಖಲಾದ ಅತಿಹೆಚ್ಚು ಪ್ರಕರಣ ಎನಿಸಿಕೊಂಡಿದೆ.

ಪ್ರತಿನಿತ್ಯ 100ರ ಗಡಿ ದಾಟುತ್ತಿರುವ ಸಾವಿನ ಸಂಖ್ಯೆ:

Recommended Video

CBIನಿಂದು ಡಿಕೆಶಿಯವರ ಬೆನ್ನು ಬಿದ್ದಿರುವುದು ರಾಜಕೀಯ ಪ್ರೇರಿತ | Oneindia Kannada

ನವದೆಹಲಿಯಲ್ಲಿ ಪ್ರತಿನಿತ್ಯ ಕೊರೊನಾವೈರಸ್ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ 100ರ ಗಡಿ ದಾಟುತ್ತಿದೆ. ಕಳೆದ ನವೆಂಬರ್.23ರಂದು 121 ಜನ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದರೆ, ನವೆಂಬರ್.24ರಂದು 109 ಮಂದಿ ಪ್ರಾಣ ಬಿಟ್ಟಿದ್ದಾರೆ. ಕಳೆದ 13 ದಿನಗಳಲ್ಲಿ 7 ದಿನ 100ಕ್ಕೂ ಹೆಚ್ಚು ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಕಳೆದ ಸೋಮವಾರ 121, ಭಾನುವಾರ 121, ಶನಿವಾರ 111, ಶುಕ್ರವಾರ 118, ನವೆಂಬರ್.18ರಂದು 131 ಮತ್ತು ನವೆಂಬರ್.12ರಂದು 104 ಜನರು ಕೊರೊನಾವೈರಸ್ ನಿಂದ ಸಾವಿನ ಮನೆ ಸೇರಿದ್ದರು.

English summary
Delhi Records Over 100 Coronavirus Deaths For 5th Day In A Row.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X