ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ 792 ಕೊರೊನಾ ಸೋಂಕು, ಕೇರಳದಲ್ಲಿ 40 ಹೊಸ ಕೇಸ್

|
Google Oneindia Kannada News

ದೆಹಲಿ, ಮೇ 27: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು 792 ಹೊಸ ಕೊರೊನಾ ವೈರಸ್ ಕೇಸ್ ದಾಖಲಾಗಿದೆ. ಈ ಮೂಲಕ ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15 ಸಾವಿರ ಗಡಿದಾಟಿದೆ.

Recommended Video

ಫ್ಲೈಟ್ ಹತ್ತಿ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿಯ ಮಡಿಲು ಸೇರಿದ 5 ವರ್ಷದ ಪೋರ | 5 year old reunited with Mom

ದೆಹಲಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15,257ಕ್ಕೆ ಏರಿಕೆಯಾಗಿದೆ. 7690 ಪ್ರಕರಣಗಳು ಸಕ್ರಿಯವಾಗಿದ್ದು, 7264 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ದೆಹಲಿಯಲ್ಲಿ 303 ಜನರು ಮೃತಪಟ್ಟಿದ್ದಾರೆ.

Delhi Records 792 New Cases And Kerala Reports 40 New Covid19 Cases Today

Fact Check: 'ಮನ್ ಕೀ ಬಾತ್'ನಲ್ಲಿ ಲಾಕ್‌ಡೌನ್‌ 5.0 ಘೋಷಣೆ ನಿಜಾನ?Fact Check: 'ಮನ್ ಕೀ ಬಾತ್'ನಲ್ಲಿ ಲಾಕ್‌ಡೌನ್‌ 5.0 ಘೋಷಣೆ ನಿಜಾನ?

ಕೇರಳದಲ್ಲಿಂದು 40 ಜನರಿಗೆ ಕೊವಿಡ್ ಸೋಂಕು ಪತ್ತೆಯಾಗಿದೆ. ಇದರಲ್ಲಿ 9 ಮಂದಿ ವಿದೇಶದಿಂದ ಮರಳಿದವರು. ಮಹಾರಾಷ್ಟ್ರದಿಂದ 16 ಮಂದಿ, ತಮಿಳುನಾಡಿನಿಂದ 5 ಮಂದಿ ಮತ್ತು ದೆಹಲಿಯಿಂದ 3 ಜನರು ರಾಜ್ಯಕ್ಕೆ ಹಿಂತಿರುಗಿದ್ದಾರೆ.

ಈವರೆಗೂ ವಿವಿಧ ದೇಶಗಳಲ್ಲಿ ಸೇರಿ 173 ಜನ ಕೇರಳದವರು ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ.

ಕೇರಳದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1004ಕ್ಕೆ ಏರಿದೆ. ಪ್ರಸ್ತುತ ರಾಜ್ಯದಲ್ಲಿ 445 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಕೇರಳದಲ್ಲಿ 6 ಜನ ಪ್ರಾಣ ಕಳೆದುಕೊಂಡಿದ್ದಾರೆ.

English summary
Coronavirus Update: Delhi records 792 new cases, total crosses 15,000-mark and 40 new COVID19 cases reported in the kerala today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X