ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಗಾಗಿ ''ಕೇಜ್ರಿವಾಲ್ ಕಾ ಗ್ಯಾರಂಟಿ ಕಾರ್ಡ್" ಬಿಡುಗಡೆ

|
Google Oneindia Kannada News

ನವದೆಹಲಿ, ಜನವರಿ 19: ದೆಹಲಿ ಚುನಾವಣೆ 2020ಗಾಗಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಆಮ್ ಆದ್ಮಿ ಪಕ್ಷ ಈಗ ಜನತೆಗೆ ಗ್ಯಾರಂಟಿ ಕಾರ್ಡ್ ಪ್ರಕಟಿಸಿದೆ. ಆಮ್ ಆದ್ಮಿ ಪಕ್ಷವು ಭಾನುವಾರದಂದು ಕೇಜ್ರಿವಾಲ್ ಅವರ ಗ್ಯಾರಂಟಿ ಕಾರ್ಡ್ ಪ್ರಕಟಿಸಿದ್ದು, ಚುನಾವಣಾ ಪ್ರಣಾಳಿಕೆಯ ಆಶ್ವಾಸನೆಯ ಪಟ್ಟಿ ಇದರಲ್ಲಿದೆ.

ಕೇಜ್ರಿವಾಲ್ ಕಾ ಗ್ಯಾರಂಟಿ ಕಾರ್ಡ್ ನಂತೆ ಜನತೆಗೆ ದಿನದ 24ಗಂಟೆಗಳ ಕಾಲ ವಿದ್ಯುಚ್ಛಕ್ತಿ ಪೂರೈಕೆ ಸಿಗಲಿದೆ, ಶುದ್ಧ ಕುಡಿಯುವ ನೀರು ಸೇರಿದಂತೆ 10 ಪ್ರಮುಖ ಭರವಸೆಗಳನ್ನು ನೀಡಲಾಗಿದೆ.

Delhi polls: Kejriwal releases AAPs guarantee card, promises quality education, free bus

ಆದರೆ, ಕೇಜ್ರಿವಾಲ್ ಕಾ ಗ್ಯಾರಂಟಿ ಕಾರ್ಡ್ ಗೂ ಚುನಾವಣಾ ಪ್ರಣಾಳಿಕೆಗೂ ವ್ಯತ್ಯಾಸವಿದ್ದು, ಎರಡು ಬೇರೆ ಎಂದು ಎಎಪಿ ಪ್ರಕಟಿಸಿದೆ. ದಿನದಲ್ಲಿ 24 ಗಂಟೆಗಳ ಕಾಲ 200 ಯೂನಿಟ್ ಉಚಿತ ವಿದ್ಯುತ್ ಪೂರೈಕೆ ಅನಿಯಮಿತವಾಗಿ ಎಲ್ಲರಿಗೂ ಲಭ್ಯವಾಗಲಿದೆ. ಹೆಚ್ಚೆಚ್ಚು ಭೂಗತ ಕೇಬಲ್ ಬಳಕೆ ಮಾಡಲು ಸರ್ಕಾರ ಮುಂದಾಗಿದೆ.

ಚಾಂದಿನಿ ಚೌಕ್ ನಿಂದ ಅಲ್ಕಾ ಲಂಬಾ, 54 ಕೈ ಅಭ್ಯರ್ಥಿಗಳ ಪಟ್ಟಿ ಪ್ರಕಟಚಾಂದಿನಿ ಚೌಕ್ ನಿಂದ ಅಲ್ಕಾ ಲಂಬಾ, 54 ಕೈ ಅಭ್ಯರ್ಥಿಗಳ ಪಟ್ಟಿ ಪ್ರಕಟ

24 ಗಂಟೆಗಳ ಕಾಲ ಶುದ್ಧ ನೀರನ್ನು ಪೈಪ್ ಮೂಲಕ ಕುಡಿಯುವ ನೀರನ್ನು ಮನೆ ಮನೆಗೂ ಮುಂದಿನ ಐದು ವರ್ಷಗಳಲ್ಲಿ ಪೂರೈಸುವ ಭರವಸೆ ನೀಡಲಾಗಿದೆ. ಈ ಯೋಜನೆ ಪೈಕಿ 20, 000 ಲೀಟರ್ ಉಚಿತವಾಗಿ ನೀಡಲಾಗುತ್ತದೆ. ನೀರು ಬಳಕೆ, ಉಪಯೋಗ, ಸುರಕ್ಷತೆ ವಿಧಾನ ಅನುಸರಿಸುವ ಮಹಿಳೆಯರಿಗೆ ಗ್ಯಾರಂಟಿ ಕಾರ್ಡ್ ಮೂಲಕ ಹೆಚ್ಚಿನ ಅಂಕಗಳನ್ನು ನೀಡುವ ಯೋಜನೆಯೂ ಹೊಂದಿದೆ.

ರಸ್ತೆ, ಜಲ ಪೂರೈಕೆ, ಸಿಸಿಟಿವಿ ಹಾಗೂ ಮೊಹಲ್ಲಾ ಕ್ಲಿನಿಕ್ಸ್ ಗಳನ್ನು ಅನಧಿಕೃತ ಕಾಲೋನಿಗಳಲ್ಲಿ ನೀಡಲು ಯೋಜನೆ ರೂಪಿಸಲಾಗಿದೆ. ನಗರದ ವಾಯುಮಾಲಿನ್ಯ ನಿಯಂತ್ರಣ, ಸ್ಲಂನಲ್ಲಿ ವಾಸಿಸುತ್ತಿರುವವರಿಗೆ ಜಹಾ ಝುಗ್ಗಿ ವಾಹಿ ಮಕಾನ್ ಅಡಿಯಲ್ಲಿ ಪಕ್ಕಾ ಮನೆಗಳನ್ನು ನಿರ್ಮಿಸಲಾಗುವುದು, ಖಾಸಗಿ ಶಾಲೆಗಳು ಶುಲ್ಕ ಏರಿಕೆ ಮಾಡುವುದರ ಮೇಲೆ ನಿಯಂತ್ರಣ ಮುಂತಾದ ಅಂಶಗಳನ್ನು ಈ ಗ್ಯಾರಂಟಿ ಕಾರ್ಡ್ ಹೊಂದಿದೆ.

ಏಪ್ರಿಲ್ 2018ರಲ್ಲಿ ದೆಹಲಿ ಸರ್ಕಾರವು ಅಧಿಸೂಚನೆ ಪ್ರಕಟಿಸಿ, ಸರ್ಕಾರಿ ಸ್ವಾಮ್ಯದ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಅನುದಾನರಹಿತ ಶಾಲೆಗಳು ಟ್ಯೂಷನ್ ಶುಲ್ಕ ಹೆಚ್ಚಳ ಮಾಡಬೇಕೆಂದರೆ ಶಿಕ್ಷಣ ಇಲಾಖೆ ನಿರ್ದೇಶಕರ ಅನುಮತಿ ಅಗತ್ಯ ಎಂದು ಸೂಚಿಸಲಾಗಿತ್ತು.

ಹೆಚ್ಚುವರಿಯಾಗಿ ಶುಲ್ಕ ವಸೂಲಿ ಮಾಡಿದ 575 ಖಾಸಗಿ ಶಾಲೆಗಳು ಮೊತ್ತವನ್ನು ರೀಫಂಡ್ ಮಾಡುವಂತೆ ಸರ್ಕಾರ ಸೂಚಿಸಿತ್ತು.

English summary
Aam Aadmi Party on Sunday released 'Kejriwal ka Guarantee Card' for the upcoming Delhi Assembly elections 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X