ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಪೊಲೀಸರಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಬಿ. ವಿ. ಶ್ರೀನಿವಾಸ್ ವಿಚಾರಣೆ

|
Google Oneindia Kannada News

ನವದೆಹಲಿ, ಮೇ 14; ಕೋವಿಡ್ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯ ಮಾಡುತ್ತಿರುವ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ. ವಿ. ಶ್ರೀನಿವಾಸ್‌ರನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪರಿಹಾರ ಸಾಮಾಗ್ರಿಗಳ ವಿಚಾರದಲ್ಲಿ ಈ ವಿಚಾರಣೆ ನಡೆದಿದೆ.

"ನಾವು ಯಾವುದೇ ತಪ್ಪು ಮಾಡಿಲ್ಲ. ನಮ್ಮ ಚಿಕ್ಕ ಸಹಾಯ ಒಬ್ಬರ ಜೀವ ಉಳಿಸಲಿದೆ. ಪಿಎಲ್‌ಎಲ್‌ಗಳಿಗೆ ನಾವು ಹೆದರುವುದಿಲ್ಲ. ನಮ್ಮ ಸೇವೆಯನ್ನು ನಾವು ನಿಲ್ಲಿಸುವುದಿಲ್ಲ" ಎಂದು ಬಿ. ವಿ. ಶ್ರೀನಿವಾಸ್ ಹೇಳಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಜನರ ಸಹಾಯಕ್ಕೆ ನಿಂತ ಬಿ.ವಿ ಶ್ರೀನಿವಾಸ್ ಮತ್ತು ತಂಡಕೋವಿಡ್ ಸಂದರ್ಭದಲ್ಲಿ ಜನರ ಸಹಾಯಕ್ಕೆ ನಿಂತ ಬಿ.ವಿ ಶ್ರೀನಿವಾಸ್ ಮತ್ತು ತಂಡ

ಬಿ. ವಿ. ಶ್ರೀನಿವಾಸ್ ಮತ್ತು ಅವರ ತಂಡದ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ. ದೀಪಕ್ ಸಿಂಗ್ ಎಂಬುವವರು ಅರ್ಜಿಯನ್ನು ಸಲ್ಲಿಸಿದ್ದಾರೆ. ಕೋವಿಡ್ ಕಾಲದಲ್ಲಿ ಅಕ್ರಮವಾಗಿ ಔಷಧಿ, ಪರಿಹಾರ ಸಾಮಾಗ್ರಿ ವಿತರಣೆ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಕೊರೊನಾ ಲಸಿಕೆ ನೇರ ಖರೀದಿಗೆ 100 ಕೋಟಿ ರೂ. ಘೋಷಿಸಿದ ಕಾಂಗ್ರೆಸ್ಕೊರೊನಾ ಲಸಿಕೆ ನೇರ ಖರೀದಿಗೆ 100 ಕೋಟಿ ರೂ. ಘೋಷಿಸಿದ ಕಾಂಗ್ರೆಸ್

 Delhi Police Questioned Indian Youth Congress Chief Srinivas BV

ಈ ಅರ್ಜಿಯ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಈ ಕುರಿತು ವಿಚಾರಣೆ ನಡೆಸುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿತ್ತು. ಇದರ ಅನ್ವಯ ಶುಕ್ರವಾರ ಪೊಲೀಸರು ಬಿ. ವಿ. ಶ್ರೀನಿವಾಸ್ ವಿಚಾರಣೆ ನಡೆಸಿದರು.

ಬೆದರಿಕೆ ಹಾಕುತ್ತಿರುವವರ ಹೆಸರು ತಿಳಿಸಿ: ಪೂನಾವಾಲಾಗೆ ಕಾಂಗ್ರೆಸ್ ಒತ್ತಾಯ ಬೆದರಿಕೆ ಹಾಕುತ್ತಿರುವವರ ಹೆಸರು ತಿಳಿಸಿ: ಪೂನಾವಾಲಾಗೆ ಕಾಂಗ್ರೆಸ್ ಒತ್ತಾಯ

ದೆಹಲಿ ಪೊಲೀಸ್ ಅಪರಾಧ ವಿಭಾಗ ಈ ಕುರಿತು ಮಾಹಿತಿ ನೀಡಿದೆ. "ಯುವ ಕಾಂಗ್ರೆಸ್ ಕಚೇರಿಗೆ ಪೊಲೀಸರು ಹೋಗಿ ಶ್ರೀನಿವಾಸ್ ಹೇಳಿಕೆ ಪಡೆಯಲಾಗಿದೆ" ಎಂದು ಸ್ಪಷ್ಟನೆ ನೀಡಿದೆ.

ಕೆಲವು ದಿನಗಳ ಹಿಂದೆ ಯುವ ಕಾಂಗ್ರೆಸ್ ತಂಡ ನ್ಯೂಜಿಲ್ಯಾಂಡ್ ಮತ್ತು ಫಿಲಿಫೈನ್ಸ್ ರಾಯಭಾರ ಕಚೇರಿಗಳ ಸಿಬ್ಬಂದಿಗಳಿಗೆ ಆಕ್ಸಿಜನ್ ಪೂರೈಕೆ ಮಾಡಿತ್ತು. ರಾಯಭಾರ ಕಚೇರಿಯ ಮನವಿ ಮೇರೆಗೆ ಇದನ್ನು ಪೂರೈಕೆ ಮಾಡಲಾಗಿತ್ತು.

ಕರ್ನಾಟಕದ ಭದ್ರಾವತಿ ಮೂಲದ ಬಿ. ವಿ. ಶ್ರೀನಿವಾಸ್ ದೆಹಲಿಯ ಯುವ ಕಾಂಗ್ರೆಸ್ ಕಚೇರಿಯಲ್ಲಿ ವಾರ್ ರೂಂ ಸ್ಥಾಪನೆ ಮಾಡಿಕೊಂಡು ಕೋವಿಡ್ ಕಾಲದಲ್ಲಿ ಜನರಿಗೆ ನೆರವಾಗುತ್ತಿದ್ದಾರೆ.

ವಿವಿಧ ನಗರಗಳಲ್ಲಿ ಯುವ ಕಾಂಗ್ರೆಸ್ ಶ್ರೀನಿವಾಸ್ ಸೂಚನೆಯಂತೆ ವಾರ್ ರೂಂ ಸ್ಥಾಪನೆ ಮಾಡಿಕೊಂಡು ಸೇವೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಶ್ರೀನಿವಾಸ್ ವಿಚಾರಣೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

English summary
Delhi police crime branch questioned Indian Youth Congress chief Srinivas BV on allegations linked to illegal distribution of medicines used for Covid treatment. A petition filed against Srinivas and his team in Delhi high court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X