ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಟನಾಕಾರನ ಮೇಲೆ ಗುಂಡೇಟು?: ಪೊಲೀಸರ ನಿರಾಕರಣೆ

|
Google Oneindia Kannada News

ನವದೆಹಲಿ, ಡಿಸೆಂಬರ್ 19: ರಾಜಧಾನಿ ನವದೆಹಲಿಯ ಜಾಮಿಯಾ ನಗರದಲ್ಲಿ ಪ್ರತಿಭಟನಾಕಾರನೊಬ್ಬನ ಮೇಲೆ ಪೊಲೀಸ್ ಸಿಬ್ಬಂದಿಯೊಬ್ಬರು ಗುಂಡು ಹಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ವೈರಲ್ ಆಗಿದೆ.

"ಪಾಕಿಸ್ತಾನ ಪ್ರಜೆಗಳಿಗೆ ಕಾಂಗ್ರೆಸ್ ಭಾರತೀಯ ಪೌರತ್ವ ನೀಡುತ್ತಾ'?

ಪ್ರತಿಭಟನಾಕಾರನ ಮೇಲೆ ದೆಹಲಿ ಪೊಲೀಸ್ ಗುಂಡು ಹಾರಿಸುವ ದೃಶ್ಯವನ್ನು ವಿದ್ಯುನ್ಮಾನ ವಾಹಿನಿಯೊಂದು ಪ್ರಸಾರ ಮಾಡಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿದ್ದ ವ್ಯಕ್ತಿಯ ದೇಹದ ಕೆಳಭಾಗಕ್ಕೆ ಗುಂಡು ಹಾರಿಸಿದ್ದು ವಿಡಿಯೋದಲ್ಲಿ ಕಾಣಿಸಿದೆ. ಆ ವ್ಯಕ್ತಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ಹೇಳಲಾಗಿದೆ. ಆ ಪ್ರತಿಭಟನಾಕಾರನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ದೃಶ್ಯವನ್ನೂ ವಾಹಿನಿ ಬಿತ್ತರಿಸಿತ್ತು.

ಎನ್‌ಆರ್‌ಸಿಗೆ ಅರ್ಹರಲ್ಲದವರೆಲ್ಲರೂ ದೇಶದಿಂದ ಹೊರಕ್ಕೆ: ಅಮಿತ್ ಶಾಎನ್‌ಆರ್‌ಸಿಗೆ ಅರ್ಹರಲ್ಲದವರೆಲ್ಲರೂ ದೇಶದಿಂದ ಹೊರಕ್ಕೆ: ಅಮಿತ್ ಶಾ

ಆದರೆ ಈ ವಿಡಿಯೋ ಸತ್ಯವಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ವಿಡಿಯೋದ ಅಧಿಕೃತತೆ ಬಗ್ಗೆ ದೆಹಲಿ ಪೊಲೀಸರಾಗಲೀ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಾಗಲೀ ಖಚಿತಪಡಿಸಿಲ್ಲ.

Delhi Police Denies Firing At Jamia Student Video Viral

'ಕಂಡಲ್ಲಿ ಗುಂಡು': ಪ್ರತಿಭಟನಾಕಾರರಿಗೆ ಸುರೇಶ್ ಅಂಗಡಿ ಎಚ್ಚರಿಕೆ 'ಕಂಡಲ್ಲಿ ಗುಂಡು': ಪ್ರತಿಭಟನಾಕಾರರಿಗೆ ಸುರೇಶ್ ಅಂಗಡಿ ಎಚ್ಚರಿಕೆ

'ದೆಹಲಿ ಪೊಲೀಸರು ಯಾವುದೇ ವಿದ್ಯಾರ್ಥಿ ಅಥವಾ ಪ್ರತಿಭಟನಾಕಾರರ ಮೇಲೆ ಭಾನುವಾರ ಜಾಮಿಯಾ ನಗರದ ಪ್ರದೇಶದಲ್ಲಿ ಗುಂಡು ಹಾರಿಸಿಲ್ಲ. ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸದ ಕಾರಣ ಟಿವಿ ವಾಹಿನಿಯಲ್ಲಿ ತೋರಿಸಲಾದ ವಿಡಿಯೋಕ್ಕೂ ದೆಹಲಿ ಪೊಲೀಸರಿಗೂ ಸಂಬಂಧವಿಲ್ಲ' ಎಂದು ದೆಹಲಿ ಪೊಲೀಸ್ ವಕ್ತಾರ ಅನಿಲ್ ಮಿತ್ತಲ್ ತಿಳಿಸಿದ್ದಾರೆ.

English summary
Delhi police has denies the firing of any protester after a video goes viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X