ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಮಿಯಾ ಮಿಲಿಯಾ ಲೈಬ್ರರಿಯಲ್ಲಿ ದೆಹಲಿ ಪೊಲೀಸರ ದಾಂದಲೆ: ವಿಡಿಯೋ ಬಹಿರಂಗ

|
Google Oneindia Kannada News

ನವದೆಹಲಿ, ಫೆಬ್ರವರಿ 16: ಡಿಸೆಂಬರ್ 15 ರಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿದ ದೌರ್ಜನ್ಯದ ಸಿಸಿಟಿವಿಯ ಹೊಸ ದೃಶ್ಯಾವಳಿಗಳು ಹೊರಬಿದ್ದಿವೆ.

ಈ ಹೊಸ ದೃಶ್ಯ ಡಿಸೆಂಬರ್ 15 ರಿಂದ ಪೂರ್ಣ ಉದ್ದದ ತುಣುಕಾಗಿದ್ದು, ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಹಳೆ ಗ್ರಂಥಾಲಯದಲ್ಲಿ ಏನಾಗಿತ್ತು ಎಂಬುದನ್ನು ಸೆರೆ ಹಿಡಿದಿದೆ.

ದೆಹಲಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಫೈರಿಂಗ್: ವಿದ್ಯಾರ್ಥಿಗೆ ಗಾಯದೆಹಲಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಫೈರಿಂಗ್: ವಿದ್ಯಾರ್ಥಿಗೆ ಗಾಯ

ದೆಹಲಿ ಪೊಲೀಸರು ಗಲಭೆ ಸಮಯದಲ್ಲಿ ಲಾಠಿಗಳೊಂದಿಗೆ ಪ್ರವೇಶಿಸಿ, ಓದುತ್ತಿದ್ದ ವಿದ್ಯಾರ್ಥಿಗಳನ್ನು ಥಳಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

Delhi Police Crackdown In Jamia Milia Library

ವಿದ್ಯಾರ್ಥಿಗಳು ಹಾಲ್ ನಲ್ಲಿ ಓದುತ್ತಿರುವಾಗ ಬಿರುಗಾಳಿಯಂತೆ ಬಂದ ಪೊಲೀಸರು, ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರಲ್ಲದೇ ಗ್ರಂಥಾಲಯಕ್ಕೂ ಹಾನಿ ಮಾಡಿದ್ದಾರೆ. ಅಲ್ಲಿಂದ ಓಡಿ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿರುವುದನ್ನು ದೃಶ್ಯಗಳು ಹೇಳುತ್ತಿವೆ.

ದೆಹಲಿ ಪೊಲೀಸರ ಕ್ರೌರ್ಯದ ಸಿಸಿಟಿವಿ ತುಣುಕನ್ನು ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳು ಹಾಗೂ ವಾರ್ಸಿಟಿಯ ಹಳೆಯ ವಿದ್ಯಾರ್ಥಿಗಳನ್ನೊಳಗೊಂಡ ಜಾಮಿಯಾ ಸಮನ್ವಯ ಸಮಿತಿ(ಜೆಸಿಸಿ) ಬಿಡುಗಡೆ ಮಾಡಿದೆ.

ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ: ಪೊಲೀಸರ ವಿರುದ್ಧವೇ ಅನುಮಾನದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ: ಪೊಲೀಸರ ವಿರುದ್ಧವೇ ಅನುಮಾನ

""ಸಿಸಿಟಿವಿ ದೃಶ್ಯಾವಳಿಗಳು ಪೊಲೀಸ್ ಪಡೆಗಳ ಕ್ರೂರ ಕೃತ್ಯವನ್ನು ಹೇಳುತ್ತವೆ ಮತ್ತು ಗ್ರಂಥಾಲಯದ ಹಳೆ ರೀಡಿಂಗ್ ರೂಂನಲ್ಲಿ ಪರೀಕ್ಷೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ರಾಜ್ಯ ಪ್ರಾಯೋಜಿತ ಭಯೋತ್ಪಾದಕರು ಕ್ರೂರ ಆಟವನ್ನು ನಡೆಸಿದ್ದಾರೆ'' ಎಂದು ಜಾಮಿಯಾ ಸಮನ್ವಯ ಸಮಿತಿಯ ಹೇಳಿಕೆ ನೀಡಿದೆ.

ಈ ಪ್ರಕರಣವನ್ನು ಈಗಾಗಲೇ ಅಪರಾಧ ವಿಭಾಗಕ್ಕೆ ವರ್ಗಾಹಿಸಲಾಗಿದ್ದು, ಹೊಸ ದೃಶ್ಯಗಳ ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

2019 ರ ಡಿಸೆಂಬರ್ 15 ರಂದು ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಬಳಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಹಿಂಸಾತ್ಮಕವಾಗಿತ್ತು. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಿ ಸಾರ್ವಜನಿಕ ಬಸ್ಸುಗಳು ಹಾಗೂ ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದ್ದರು.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, "" ಗ್ರಂಥಾಲಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ಹೇಗೆ ನಿರ್ದಾಕ್ಷಿಣ್ಯವಾಗಿ ಹೊಡೆಯುತ್ತಿದ್ದರೆಂದು ನೋಡಿ. ಒಬ್ಬ ಹುಡುಗ ತನ್ನ ಪುಸ್ತಕವನ್ನು ತೋರಿಸಿದರೂ, ಪೊಲೀಸರು ಲಾಠಿಯಿಂದ ಹೊಡೆದಿದ್ದಾರೆ. ಗೃಹ ಸಚಿವರು ಮತ್ತು ದೆಹಲಿ ಪೊಲೀಸ್ ಅಧಿಕಾರಿಗಳು ತಾವು ಹೊಡೆದಿಲ್ಲ ಎಂದು ಸುಳ್ಳು ಹೇಳಿದ್ದಾರೆ'' ಎಂದು ಟ್ವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಈ ದೃಶ್ಯ ನೋಡಿದ ನಂತರ, ಜಾಮಿಯಾದಲ್ಲಿನ ಹಿಂಸಾಚಾರದ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಸರ್ಕಾರದ ಉದ್ದೇಶವು ದೇಶಕ್ಕೆ ಸಂಪೂರ್ಣವಾಗಿ ತೆರೆದುಕೊಳ್ಳುತ್ತದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

English summary
The new footage is a full-length CCTV footage from December 15 and captures what happened at Jamia's Old Reading Hall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X