ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ತಳ್ಳುವ ತರಕಾರಿ ಗಾಡಿ ಮೇಲೆ ಖಾಕಿ ದರ್ಪ: ಅಮಾನತು

|
Google Oneindia Kannada News

ನವದೆಹಲಿ, ಮಾರ್ಚ್ 27: ಕೊರೊನಾ ವೈರಸ್‌ನಿಂದ ಬಚಾವಾಗಲು 21 ದಿನ ಮನೆಯಲ್ಲೇ ಇರಿ ಎನ್ನುವ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ನೀಡಿದ್ದಾರೆ.

ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತಿದ್ದವನ ಮೇಲೆ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ದರ್ಪ ತೋರಿದ್ದಾರೆ. 21 ದಿನಗಳ ಕಾಲ ದೇಶದಲ್ಲಿ ಲಾಕ್‌ಡೌನ್‌ ಇದೆ ನೀನು ಯಾಕೆ ಹೊರಗಡೆ ಬಂದಿದ್ದೀಯ ಎಂದು ಗದರಿಸುತ್ತಾ ತಳ್ಳುವ ಗಾಡಿಯನ್ನು ಒದ್ದಿದ್ದಾರೆ. ತರಕಾರಿಗಳೆಲ್ಲಾ ಕೆಳಗೆ ಬಿದ್ದು ಚೆಲ್ಲಾಪಿಲ್ಲಿಯಾಗಿದ್ದು ಇದನ್ನೊಬ್ಬರು ವಿಡಿಯೋ ಮಾಡಿಕೊಂಡಿದ್ದರು.

ಕೊರೊನಾ ದೆಸೆಯಿಂದ ಈ ರಾಜ್ಯದಲ್ಲಿ ಪಾನ್ ಮಸಾಲ ನಿಷೇಧ!ಕೊರೊನಾ ದೆಸೆಯಿಂದ ಈ ರಾಜ್ಯದಲ್ಲಿ ಪಾನ್ ಮಸಾಲ ನಿಷೇಧ!

ಇದೀಗ ಆ ಪೊಲೀಸ್‌ನನ್ನು ಅಮಾನತು ಮಾಡಲಾಗಿದೆ. ಮೊದಲನೆಯದಾಗಿ ಆತ ಪೊಲೀಸ್ ಸಮವಸ್ತ್ರ ಧರಿಸಿರಲಿಲ್ಲ. ಎರಡನೆಯದಾಗಿ ತಳ್ಳುವ ಗಾಡಿಯಲ್ಲಿದ್ದ ತರಕಾರಿಗಳನ್ನು ಕೆಳಗೆ ಬೀಳಿಸಿದ್ದು ತಪ್ಪು, ಅಂತಹ ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಲು ಅವಕಾಶವಿದೆ ಎನ್ನಲಾಗಿದೆ.

Police Constable Suspended In Delhi

ಪೊಲೀಸ್ ಕಾನ್‌ಸ್ಟೆಬಲ್ ರಾಜ್‌ಬೀರ್ ಎನ್ನುವವರನ್ನು ಅಮಾನತು ಮಾಡಲಾಗಿದೆ. ರಂಜಿತ್ ನಗರದಲ್ಲಿ ಈ ಘಟನೆ ನಡೆದಿತ್ತು.ಲಾಕ್‌ಡೌನ್ ಇದ್ದರೂ ಜನರು ಬೀದಿಗಿಳಿಯುತ್ತಿದ್ದಾರೆ. ಪೊಲೀಸರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ.

ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ದಯವಿಟ್ಟು ರಸ್ತೆಗೆ ಬರಬೇಡಿ ನಿಮ್ಮ ಹಾಗೆಯೇ ನಮಗೂ ಕುಟುಂಬವಿದೆ ಎಂದು ಕಣ್ಣೀರಿಟ್ಟು ಕೇಳಿಕೊಳ್ಳುತ್ತಿದ್ದಾರೆ.

ಸುಮ್ಮನೆ ರಸ್ತೆಗಿಳಿಯುವವರನ್ನು ಹಿಡಿದು ಪೊಲೀಸರು ನಾನಾ ತರಹದ ಶಿಕ್ಷೆಯನ್ನೂ ನೀಡುತ್ತಿದ್ದಾರೆ. ರಸ್ತೆ ಮೇಲೆ ಮಲಗಿಸುತ್ತಿದ್ದಾರೆ, ಕಪ್ಪೆಯ ರೀತಿ ಹಾರುವ ಶಿಕ್ಷೆ, ಬಸ್ಕಿ ಹೊಡೆಸುವುದು ಇನ್ನೂ ಅನೇಕ ಶಿಕ್ಷೆ ನೀಡಲಾಗುತ್ತಿದೆ.

English summary
Man caught on camera turned out to be a police constable in plainclothes, apparently bullying vegetable sellers for "violating" lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X