ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ ಬುಕ್ ಪ್ರಿಯಕರನೊಂದಿಗೆ ಹುಟ್ಟಿದ್ದು ಒಲವು, ಪತಿಗೆ ಕೊಟ್ಟಿದ್ದು ಸಾವು!

|
Google Oneindia Kannada News

ನವದೆಹಲಿ, ಮೇ 27: ರಿಯಲ್ ಎಸ್ಟೇಟ್ ಉದ್ಯೋಗ ಮಾಡುತ್ತಿದ್ದ ಪತಿ, ಮುದ್ದಾದ ಇಬ್ಬರು ಗಂಡು ಮಕ್ಕಳು, ಒಂದು ಹೆಣ್ಣು ಮಗಳು. ಅದೊಂದು ಸುಂದರ ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಸೋಷಿಯಲ್ ಮೀಡಿಯಾ ಎಂಬ ಮಾಯಾಜಾಲ ಮಡದಿ ಮನಸು ಕೆಡಿಸಿತು. ಆನ್‌ಲೈನ್ ಅಂಗಳದಲ್ಲಿ ನಲಿದಾಡಿದ ಪತ್ನಿಗೆ ಹೊಸದೊಂದು ನಂಟು ಅಂಟಿಕೊಂಡಿತು.

ಫೇಸ್‌ಬುಕ್‌ನಲ್ಲಿ ಸಿಕ್ಕ ಗೆಳೆಯನ ಮೇಲೆ ಪ್ರೀತಿ ಚಿಗುರುತ್ತಿದ್ದಂತೆ ಮನೆಯಲ್ಲಿದ್ದ ಗಂಡನ ಮೇಲೆ ಅತೃಪ್ತಿ ಹೆಚ್ಚಿತು. ಪ್ರಿಯಕರನಿಗೆ ಹಾಯ್ ಹಾಯ್ ಎನ್ನಲು ಬಯಸಿದ ಮಹಿಳೆ ಮನಸ್ಸಿನಲ್ಲಿ ಗಂಡನಿಗೆ ಗುಡ್ ಬೈ ಹೇಳುವ ಹುನ್ನಾರ ಮೂಡಿತು. ಗಂಡನ ಹತ್ಯೆಗೆ ಸ್ಕೆಚ್ ರೆಡಿ ಆಯಿತು.

ಹಳೆ ಲವ್ವರ್ ಮಸಲತ್ತು; ಸ್ಫೋಟವಾಯ್ತು ಮದುವೆ ಮನೆಯಲ್ಲಿ ನೀಡಿದ ಆ ಗಿಫ್ಟು!ಹಳೆ ಲವ್ವರ್ ಮಸಲತ್ತು; ಸ್ಫೋಟವಾಯ್ತು ಮದುವೆ ಮನೆಯಲ್ಲಿ ನೀಡಿದ ಆ ಗಿಫ್ಟು!

40ರ ಹರೆಯದರಲ್ಲಿ ಗಂಡನನ್ನು ಬಿಟ್ಟು ಪ್ರೇಮಿಯ ದುಂಬಾಲು ಬಿದ್ದ ಮಹಿಳೆಯ ಕೈಯಲ್ಲೇ ಪತಿರಾಯ ಹೆಣವಾಗಿದ್ದು ಹೇಗೆ?, ಆಂಟಿಯ ಪ್ರೀತಿ ಅಂಟಿಕೊಂಡ ಪ್ರಿಯಕರ ಖಾಕಿ ಬಲೆಗೆ ಬಿದ್ದಿದ್ದು ಹೇಗೆ?, ಸುಂದರ ಸಂಸಾರದಿಂದ ಗಂಡನ ಅಂತ್ಯಸಂಸ್ಕಾರದವರೆಗೆ ದೆಹಲಿಯಲ್ಲಿ ನಡೆದ ಸತ್ಯ ಘಟನೆಯ ರಣರೋಚಕ ಕ್ರೈಂ ಕಹಾನಿಗಾಗಿ ಮುಂದೆ ಓದಿ.

ಫೇಸ್ ಬುಕ್ ನಲ್ಲಿ ಸಿಕ್ಕ ಆಂಟಿಗಾಗಿ ಆಕೆ ಗಂಡನ ಕೊಲೆ

ಫೇಸ್ ಬುಕ್ ನಲ್ಲಿ ಸಿಕ್ಕ ಆಂಟಿಗಾಗಿ ಆಕೆ ಗಂಡನ ಕೊಲೆ

ಅದು ದೆಹಲಿಯ ದರ್ಯಾಗಂಜ್ ಪ್ರದೇಶದಲ್ಲಿ ಕಳೆದ ಮೇ 17ರ ರಾತ್ರಿ 10 ಗಂಟೆಗೆ ನಡೆದ ಘಟನೆ. ಖಾಲ್ಸಾ ಶಾಲೆಯ ಗೇಟ್ ನಂಬರ್ 3ರ ಬಳಿ ಮೂತ್ರ ವಿಸರ್ಜನೆಗೆ ತೆರಳಿದ್ದ ಮೊಯಿನುದ್ದೀನ್ ಖುರೇಷಿ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಬಿಳಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಉತ್ತರ ಪ್ರದೇಶ ಮೂಲದವರು ಎಂದು ಪೊಲೀಸರು ಸುಳಿವು ಹಿಡಿದರು. ಅಲ್ಲಿಂದ ಆರೋಪಿಗಳ ಬಲೆಗೆ ಕಾರ್ಯಾಚರಣೆ ಶುರುವಾಯಿತು.

ಯುವಕ-ಯುವತಿಯರೇ ಎಚ್ಚರ: ಮದುವೆ ಆಗದಿದ್ದರೆ 'ಹೃದಯ'ಕ್ಕೆ ಆಪತ್ತು!ಯುವಕ-ಯುವತಿಯರೇ ಎಚ್ಚರ: ಮದುವೆ ಆಗದಿದ್ದರೆ 'ಹೃದಯ'ಕ್ಕೆ ಆಪತ್ತು!

ಖಾಸಾ ಪ್ರೇಮಿಗಳು ಖಾಕಿ ಬಲೆಗೆ ಸಿಲುಕಿದ್ದು ಹೇಗೆ?

ಖಾಸಾ ಪ್ರೇಮಿಗಳು ಖಾಕಿ ಬಲೆಗೆ ಸಿಲುಕಿದ್ದು ಹೇಗೆ?

ದರ್ಯಾಗಂಜ್‌ನ ತಾರಾ ಹೋಟೆಲ್ ಬಳಿ ಮೋಟಾರ್‌ಸೈಕಲ್ ಅನ್ನು ಬಿಟ್ಟು ಹೋಗಿದ್ದನ್ನು ಪರಿಶೀಲಿಸಿದ ಪೊಲೀಸರಿಗೆ ಅದು, ಮೀರತ್‌ನಿಂದ ಕಳ್ಳತನ ಮಾಡಿರುವುದು ಪತ್ತೆ ಆಯಿತು. ನಂತರ ಹೆಚ್ಚಿನ ಪುರಾವೆಗಳೊಂದಿಗೆ ಸಂತ್ರಸ್ತೆಯ ಪತ್ನಿ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದರು ಎಂದು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ವೇತಾ ಚೌಹಾಣ್ ಹೇಳಿದ್ದಾರೆ.

ದರ್ಯಾಗಂಜ್‌ನ ನಿವಾಸಿ ಹಾಗೂ ಮೃತ ಮೊಯಿನುದ್ದೀನ್ ಖುರೇಷಿ ಪತ್ನಿ ಆಗಿರುವ ಆರೋಪಿ ಜೀಬಾ ಖುರೇಷಿ, ಮತ್ತು ಈಕೆಯ ಪ್ರಿಯಕರ ಉತ್ತರ ಪ್ರದೇಶದ ಮೀರತ್ ನಿವಾಸಿ ಶೊಯಬ್ ಹಾಗೂ ಸುಪಾರಿ ಕಿಲ್ಲರ್ ಆಗಿರುವ ಉತ್ತರ ಪ್ರದೇಶ ಗಜಿಯಾಬಾದ್ ನಿವಾಸಿ ವಿನಿತ್ ಗೋಸ್ವಾಮಿ ಅನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಹೊರತಾಗಿ ಆರೋಪಿಗಳ ನಡುವೆ ನಡೆದ ಪ್ರೀತಿ-ಪ್ರೇಮ-ಪ್ರಯಣದೊಂದಿಗೆ ಕೊಲೆಗೆ ಹಾಕಿದ ಸ್ಕೆಚ್ ಇನ್ನೂ ರೋಚಕವಾಗಿದೆ.

29ರ ಯುವಕನೊಂದಿಗೆ ನಂಟು ಬೆಸೆದ 40ರ ಆಂಟಿ

29ರ ಯುವಕನೊಂದಿಗೆ ನಂಟು ಬೆಸೆದ 40ರ ಆಂಟಿ

ಗಂಡ ಮೊಯಿನುದ್ದೀನ್ ಖುರೇಷಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಇಬ್ಬರು ಗಂಡು ಮಕ್ಕಳು ಒಂದು ಹೆಣ್ಣು ಮಗು. ಅದಾಗ್ಯೂ, 40ರ ಜೀಬಾಗೆ ಸಂಸಾರದಲ್ಲಿ ಸಂತೋಷ ಕಾಣಲಿಲ್ಲ. ಗಂಡನನ್ನು ಬಿಟ್ಟು ಬೇರೆಯವರ ತೋಳು ಬಯಸಿದ ಆಂಟಿಗೆ ಸಿಕ್ಕಿದ್ದೇ 29 ವರ್ಷದ ಶೋಯಿಬ್. ಫೇಸ್ ಬುಕ್ ನಲ್ಲಿ ಪರಿಚಯವಾದ ಶೋಯಿಬ್ ಜೊತೆಗೆ ಜೀಬಾ ಸ್ನೇಹ ಗಾಢವಾಯಿತು. ಸ್ನೇಹ ಪ್ರೀತಿ ಆಯಿತು. ಅತ್ತ ಮದುವೆಯಾಗಿದ್ದರೂ ಆರೋಪಿ ಶೋಯಿಬ್ ಗೆ ಆಂಟಿಯ ಮೇಲಿನ ಮೋಹ ಹೆಚ್ಚಾಯಿತು. ಆಗ ರೆಡಿಯಾಗಿದ್ದೇ ಮೊಯಿನುದ್ದೀನ್ ಹತ್ಯೆಗೆ ಸ್ಕೆಚ್.

ಆಂಟಿಯನ್ನು ಪಡೆಯಲು ಅಂಕಲ್ ಗೆ ಮುಹೂರ್ತ

ಆಂಟಿಯನ್ನು ಪಡೆಯಲು ಅಂಕಲ್ ಗೆ ಮುಹೂರ್ತ

ನನ್ನ ಮದುವೆಯಾಗಬೇಕು ಅಂದ್ರೆ ನನ್ನ ಗಂಡನನ್ನು ಹತ್ಯೆ ಮಾಡಬೇಕು ಎಂದು ಸ್ವತಃ ಜೀಬಾ ಖುರೇಷಿಯೇ ಡಿಮ್ಯಾಂಡ್ ಮಾಡಿದ್ದಳು. ಇದಕ್ಕೆ ಒಪ್ಪಿಕೊಂಡ ಪ್ರಿಯಕರ ಶೋಯಿಬ್ ಅದಕ್ಕಾಗಿಯೇ ಸುಪಾರಿ ಕಿಲ್ಲರ್ ಒಬ್ಬನನ್ನು ಬುಕ್ ಮಾಡಿದೆ. ಐದು ತಿಂಗಳ ಹಿಂದೆಯೇ ಉತ್ತರ ಪ್ರದೇಶದ ವಿನಿತ್ ಗೋಸ್ವಾಮಿಗೆ ಡೀಲ್ ಒಪ್ಪಿಸಿದ್ದನು. ಮೊಯಿನುದ್ದೀನ್ ಹತ್ಯೆಗಾಗಿ ಆರೋಪಿ ಗೋಸ್ವಾಮಿಗೆ 6 ಲಕ್ಷ ರೂಪಾಯಿ ಹಣವನ್ನೂ ನೀಡಲಾಗಿತ್ತು.

ಗಂಡನ ಹಾವಭಾವ ಮತ್ತು ನಿತ್ಯ ಚಟುವಟಿಕೆಗಳ ಬಗ್ಗೆ ಪತ್ನಿಯೇ ಸುಳಿವು ನೀಡುತ್ತಿದ್ದಳು. ಆ ಸುಳಿವುಗಳನ್ನೇ ಆಧರಿಸಿ ನಾಲ್ಕರಿಂದ ಐದು ಬಾರಿ ಹಾಕಿದ ಸ್ಕೆಚ್ ಸ್ವಲ್ಪದರಲ್ಲೇ ಮಿಸ್ ಆಗಿತ್ತು. ಆದರೆ ಕಳೆದ ಮೇ 17ರಂದು ಹಾಕಿದ ಸ್ಕೆಚ್ ಮಿಸ್ ಆಗಲೇ ಇಲ್ಲ. ಹತ್ಯೆಗಾಗಿಯೇ ಮೀರತ್ ನಲ್ಲಿ ಕದ್ದಿದ್ದ ಮೋಟಾರ್ ಬೈಕ್ ಖರೀದಿಸಿದ ಆರೋಪಿಗಳು ಕಂಟ್ರಿ ಪಿಸ್ತೂಲ್ ಬಳಸಿ ಹತ್ಯೆ ನಡೆಸಿದ್ದಾರೆ," ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ ಹತ್ಯೆಗೆ ಬಳಸಿದ ಮೋಟಾರ್ ಬೈಕ್, ಕಂಟ್ರಿ ಪಿಸ್ತೂಲ್ ಮತ್ತು 3 ಲಕ್ಷ ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

English summary
A 40-year-old woman was arrested along with her lover for killing her husband in central Delhi's Daryaganj area. Police arrest accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X