ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ದಾಳಿಗೆ ಸಂಚು ರೂಪಿಸಿದ್ದ ಉಗ್ರರಿಂದ ಬೆಚ್ಚಿ ಬೀಳಿಸುವ ಮಾಹಿತಿ

|
Google Oneindia Kannada News

ನವದೆಹಲಿ, ಜನವರಿ 10: ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ದಾಳಿಗೆ ಸಂಚು ರೂಪಿಸಿದ್ದ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ.

ನಾಲ್ವರು ಆರೋಪಿಗಳು ತಮಿಳುನಾಡು ಮೂಲದವರು ಎನ್ನುವ ಮಾಹಿತಿ ಲಭ್ಯವಾಗಿದೆ. ಗಣರಾಜ್ಯೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಇಸ್ಲಾಮಿಕ್ ಸ್ಟೇಟ್ ಉಗ್ರವಾದಿ ಸಂಘಟನೆಯಿಂದ ಸ್ಫೂರ್ತಿ ಪಡೆದಿದ್ದ ನಾಲ್ವರು ಶಂಕಿತ ಭಯೋತ್ಪಾದಕರನ್ನು ಗುಜರಾತ್‌ನಲ್ಲಿ ಬಂಧಿಸಲಾಗಿದೆ.

ಈ ಶಂಕಿತ ಉಗ್ರರು ಗಣರಾಜ್ಯೋತ್ಸವದ ದಿನ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನುವ ಆತಂಕಕಾರಿ ವಿಚಾರ ಬಹಿರಂಗಗೊಂಡಿದೆ.

ದೆಹಲಿಯ ವಜೀರಾಬಾದ್ ಪ್ರದೇಶದಲ್ಲಿ ಖಾಜಾ ಮೊಯಿದೀನ್ , ಸಮದ್ ಹಾಗೂ ನವಾಜ್ ಇದ್ದ ವಿಷಯ ಅರಿತ ದಿಲ್ಲಿ ಪೊಲೀಸ್ ವಿಶೇಷ ಘಟಕವು ದಾಳಿ ನಡೆಸಿತ್ತು..

ದೆಹಲಿ, ಉತ್ತರ ಪ್ರದೇಶದಲ್ಲಿ ದಾಳಿಗೆ ಸಂಚು ನಡೆಸಿದ್ದರು

ದೆಹಲಿ, ಉತ್ತರ ಪ್ರದೇಶದಲ್ಲಿ ದಾಳಿಗೆ ಸಂಚು ನಡೆಸಿದ್ದರು

ಮೂವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಇನ್ನೊಬ್ಬ ಗುಜರಾತ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ. ದೆಹಲಿಯಲ್ಲಿ ಬಂಧಿತರಾದ ರಾಷ್ಟ್ರ ರಾಜಧಾನಿ ವಲಯ ಅಥವಾ ಉತ್ತರ ಪ್ರದೇಶದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.

ಶಂಕಿತ ಉಗ್ರರ ಬಗ್ಗೆ ಮಾಹಿತಿ

ಶಂಕಿತ ಉಗ್ರರ ಬಗ್ಗೆ ಮಾಹಿತಿ

ಖಾಜಾ ಮೊಯಿದ್ದೀನ್, ಸಬ್ದುಲ್ ಸಮದ್, ಸಯ್ಯದ್ ಅಲಿ ನವಾಜ್ , ಇನ್ನು ವಡೋದರಾದಲ್ಲಿ ಜಾಫರ್ ಅಲಿ ಎಂಬಾತನನ್ನು ಬಂಧಿಸಲಾಗಿದೆ.

ಮೊಯಿದ್ದೀನ್‌ಗೆ ಐಸಿಸ್ ಜೊತೆ ನಂಟು

ಮೊಯಿದ್ದೀನ್‌ಗೆ ಐಸಿಸ್ ಜೊತೆ ನಂಟು

ಬಂಧಿತರ ಪೈಕಿ ಮೊಯಿದ್ದೀನ್ ಎಂಬಾತನಿಗೆ ಐಸಿಸ್ ಜೊತೆ ನಂಟಿರುವುದು ತಿಳಿದುಬಂದಿದೆ. ಹಲವೆಡೆ ಸಭೆ ನಡೆಸಿ ಐಸಿಸ್ ಸೇರಲು ಯುವಕರ ಬ್ರೇನ್ ವಾಶ್ ಮಾಡುತ್ತಿದ್ದ. ನಕಲಿ ಕಾಗದಪತ್ರ ಬಳಸಿ ನೇಪಾಳದಲ್ಲಿ ಅಡಗುತಾಣ ಸ್ಥಾಪನೆ ಮಾಡಿದ್ದ.

ದೆಹಲಿಗೆ ವಿದೇಶದಿಂದ ಶಸ್ತ್ರಾಸ್ತ್ರ ಆಮದು

ದೆಹಲಿಗೆ ವಿದೇಶದಿಂದ ಶಸ್ತ್ರಾಸ್ತ್ರ ಆಮದು

ದೆಹಲಿಗೆ ವಿದೇಶದಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದ್ದ, ಈ ಬಗ್ಗೆ ಪೊಲೀಸರಿಗೆ ಸುಳಿವು ದೊರೆಯುತ್ತಿದ್ದಂತೆ ಎನ್‌ಕೌಂಟರ್‌ ನಡೆಸಿ ಅವರನ್ನು ಬಂಧಿಸಿದ್ದಾರೆ. ಇದೇ ವೇಳೆ ಇದೇ ಗ್ಯಾಂಗ್‌ನ ಮತ್ತೊಬ್ಬನನ್ನೂ ಗುಜರಾತ್‌ನಲ್ಲಿ ಸೆರೆ ಹಿಡಿದಿದ್ದಾರೆ.

English summary
The Delhi Police Special cell arrested three terror suspects ahead of Republic day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X