• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜ.26ರ ರೈತರ ಟ್ರಾಕ್ಟರ್ ಜಾಥಾಕ್ಕೆ ದೆಹಲಿ ಪೊಲೀಸರ ಅನುಮತಿ

|

ನವದೆಹಲಿ, ಜನವರಿ 24: ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಜನವರಿ 26ರಂದು ಟ್ರಾಕ್ಟರ್ ಜಾಥಾ ನಡೆಸಲಿದ್ದಾರೆ. ಜಾಥಾ ನಡೆಸಲು ರೈತರಿಗೆ ದೆಹಲಿ ಪೊಲೀಸರ ಅನುಮತಿಯೂ ಸಿಕ್ಕಿದೆ.

ಟ್ರಾಕ್ಟರ್ ಜಾಥಾಕ್ಕೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ರೈತ ಸಂಘಟನೆಗಳು ಹೇಳಿವೆ. ಯಾವ ಮಾರ್ಗದಲ್ಲಿ ಜಾಥಾ ನಡೆಸಲಿದ್ದಾರೆ ಎಂಬುದನ್ನು ತೀರ್ಮಾನಿಸಿದ ಬಳಿಕ ಅಂತಿಮ ಅನುಮತಿಯನ್ನು ನೀಡಲಾಗುತ್ತದೆ.

ಜ.26 ರಂದು ಬೆಂಗಳೂರಿನಲ್ಲಿ ಬೃಹತ್ ರೈತ ಪರ್ಯಾಯ ಪರೇಡ್

ದೆಹಲಿಯ ಹೊರ ವಲಯದ ರಿಂಗ್ ರೋಡ್‌ನಲ್ಲಿ ಜಾಥಾ ನಡೆಸಬಾರದು ಎಂದು ಪೊಲೀಸರು ಹೇಳಿದ್ದಾರೆ. ಸಿಂಘು ಮತ್ತು ತಿಕ್ರಿ ಗಡಿಯಲ್ಲಿ ಹಾಕಿರುವ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವುದಾಗಿ ಪೊಲೀಸರು ರೈತರಿಗೆ ಹೇಳಿದ್ದಾರೆ.

ರಾಷ್ಟ್ರಪತಿ, ಪ್ರಧಾನಮಂತ್ರಿಗೆ ಪತ್ರ ಬರೆದ ಮಂಡ್ಯದ ರೈತ: ಕಾರಣವೇನು?

ಪ್ರತಿಭಟನೆ ನಡೆಸುತ್ತಿರುವ ರೈತರು ಐದು ಮಾರ್ಗಗಳನ್ನು ಉಪಯೋಗಿಸಬಹುದಾಗಿದೆ. ಪೊಲೀಸರ ಜೊತೆ ನಡೆದ ಸಭೆಯಲ್ಲಿ ಹಾಜರಾಗಿದ್ದ ರೈತರು 60 ಕಿ. ಮೀ. ಗಳ ದೂರ ಜಾಥಾ ನಡೆಸುವುದಾಗಿ ಹೇಳಿದ್ದಾರೆ. ಇದರಲ್ಲಿ ಅರ್ಧ ದಾರಿ ದೆಹಲಿ ನಗರದೊಳಗಿನ ರಸ್ತೆ ಸೇರಿದೆ.

ರೈತರು ಪೂಜಿಸುವ ಟ್ರಾಕ್ಟರ್ ಗೆ ಬೆಂಕಿ ಹಚ್ಚಿದ್ದೇಕೆ ಕಾಂಗ್ರೆಸ್ಸಿಗರು?: ಮೋದಿ

ಗುಪ್ತಚರ ಇಲಾಖೆ ಮಾಹಿತಿಯಂತೆ 70 ಸಾವಿರದಿಂದ 1 ಲಕ್ಷ ಟ್ರಾಕ್ಟರ್‌ಗಳ ಮೂಲಕ ರೈತರು ಜಾಥಾ ನಡೆಸಲಿದ್ದಾರೆ ಎಂಬ ಮಾಹಿತಿ ಇದೆ. ಇದರಿಂದಾಗಿ ಗಣರಾಜ್ಯೋತ್ಸವ ಪರೇಡ್‌ಗೆ ಯಾವುದೇ ಅಡ್ಡಿಯಾಗದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಲಿದ್ದಾರೆ.

ರೈತರು ಹೊರ ವರ್ತುಲ ರಸ್ತೆಯನ್ನು ಬಳಕೆ ಮಾಡಿದರೆ ಗಣರಾಜ್ಯೋತ್ಸವ ಪರೇಡ್‌ಗೆ ತೊಂದರೆಯಾಗಲಿದೆ. ಆದ್ದರಿಂದ, ಪೊಲೀಸರು 5 ಮಾರ್ಗವನ್ನು ಬಳಕೆ ಮಾಡಲು ರೈತರಿಗೆ ಒಪ್ಪಿಗೆ ಕೊಟ್ಟಿದ್ದಾರೆ.

ರೈತರು ನಡೆಸುವ ಟ್ರಾಕ್ಟರ್ ಜಾಥಾಕ್ಕೆ ತಡೆ ನೀಡಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಆದರೆ, ಕೋರ್ಟ್ ಯಾವುದೇ ಆದೇಶ ನೀಡಲು ನಿರಾಕರಿಸಿತ್ತು.

English summary
Delhi police approved for the farmer unions tractor parade on Republic Day. Farmers would hold the parade on a 60 km stretch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X