ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಉಗ್ರರ ದಾಳಿ ಸುಳಿವು, ಹೈ ಅಲರ್ಟ್ ಘೋಷಣೆ

|
Google Oneindia Kannada News

ನವದೆಹಲಿ, ಜೂನ್ 22: ದೆಹಲಿಯಲ್ಲಿ ಉಗ್ರರ ದಾಳಿ ನಡೆಯುವ ಸುಳಿವು ದೊರೆತಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.

ನಾಲ್ವರು ಉಗ್ರರು ದಾಳಿ ನಡೆಸುವ ಸಂಚಿನೊಂದಿಗೆ ದೆಹಲಿಗೆ ಕಾಲಿಟ್ಟಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಅಪರಾಧ ವಿಭಾಗ, ವಿಶೇಷ ದಳ ಸೇರಿದಂತೆ 15 ಪೊಲೀಸ್ ವಿಭಾಗಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ಪಾಕಿಸ್ತಾನವನ್ನು ಕಾಪಾಡಲು ಹಳೆ ಉಗ್ರ ಸಂಘಟನೆಯ ಹೊಸ ಅವತಾರಪಾಕಿಸ್ತಾನವನ್ನು ಕಾಪಾಡಲು ಹಳೆ ಉಗ್ರ ಸಂಘಟನೆಯ ಹೊಸ ಅವತಾರ

ಪೂರ್ವ ಲಡಾಖ್‌ನಲ್ಲಿ ಚೀನಾ ಹಾಗೂ ಭಾರತ ಮುಖಾಮುಖಿಯಾಗಿದೆ, ಇದರ ಮಧ್ಯೆಯೇ ಈ ಸುಳಿವು ಕೂಡ ದೊರೆತಿರುವುದರಿಂದ ಭದ್ರತಾ ಏಜೆನ್ಸಿಗಳು ಮತ್ತಷ್ಟು ಎಚ್ಚರಿಕೆವಹಿಸಿವೆ.

Delhi On High Alert Following Terror Threat

ದೆಹಲಿಯ ಗಡಿ ಭಾಗಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ. ಮಾರುಕಟ್ಟೆ, ಹೆಚ್ಚು ರೋಗಿಗಳಿರುವ ಆಸ್ಪತ್ರೆ ಸೇರಿದಂತೆ ಹಲವೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಉಗ್ರರು ಬಸ್, ಟ್ಯಾಕ್ಸಿ, ಕಾರು ಯಾವುದರಲ್ಲಿ ಬೇಕಾದರೂ ಬರಬಹುದು, ರಾಜ್ಯದ ಎಲ್ಲಾ ಅತಿಥಿಗೃಹಗಳು, ಹೋಟೆಲ್‌ಗಳ ಮಲೆ ಕಣ್ಗಾವಲಿರಿಸಲಾಗಿದೆ. ಕಾಶ್ಮೀರದ ನೋಂದಣಿ ಇರುವ ವಾಹನಗಳನ್ನು ಮೊದಲು ತಪಾಸಣೆ ಮಾಡಲಾಗುತ್ತಿದೆ. ರೈಲ್ವೆ ನಿಲ್ದಾಣದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ಒಂದೆಡೆ ಲಡಾಖ್ ಗಡಿಯಲ್ಲಿ ಭಾರತ-ಚೀನಾ ನಡುವೆ ಸಂಘರ್ಷ ಏರ್ಪಟ್ಟಿದೆ. ಇದೇ ಸಂದರ್ಭದಲ್ಲಿ ಕಾಶ್ಮೀರದ ಪ್ರದೇಶಗಳಲ್ಲಿ ಉಗ್ರರು ಒಳನುಸುಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗಷ್ಟೇ ಕಾಶ್ಮೀರದ ಮಸೀದಿಯಲ್ಲಿ ಅಡಗಿದ್ದ ಉಗ್ರರನ್ನು ಭಾರತೀಯ ಸೇನೆ ಸದೆಬಡಿದಿತ್ತು.

English summary
The Delhi Police has been put on high alert after receiving information of a terrorist attack targetting the national capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X