ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಭಯಾ ಅತ್ಯಾಚಾರಿಗೆ ತಿಹಾರ್ ಜೈಲಿನಲ್ಲಿ ಗಲ್ಲುಶಿಕ್ಷೆ ಅಸಾಧ್ಯ!

|
Google Oneindia Kannada News

ದೆಹಲಿ, ಡಿಸೆಂಬರ್.03: ದೆಹಲಿಯಲ್ಲಿ ನಿರ್ಭಯಾ ಮೇಲೆ ಕ್ರೌರ್ಯ ಮರೆದ ಅಪರಾಧಿಗಳಿಗೆ ಗಲ್ಲುಶಿಕ್ಷೆ ಅಸಾಧ್ಯವೇ ಎಂಬ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ. ಸ್ವತಃ ಸುಪ್ರೀಂಕೋರ್ಟ್ ಆದೇಶಿಸಿದ್ದರೂ ಅಪರಾಧಿಗಳಿಗೆ ಸದ್ಯಕ್ಕಂತೂ ಗಲ್ಲುಶಿಕ್ಷೆ ವಿಧಿಸಲು ಆಗುವುದಿಲ್ಲವಂತೆ.

ಸ್ವತಃ ತಿಹಾರ್ ಜೈಲು ಅಧಿಕಾರಿಗಳಿಗೆ ಈ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಈಗಾಗಲೇ ಅಪರಾಧಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ದೆಹಲಿಯ ಲೆಫ್ಟಿನೆಂಟ್ ಗೌರ್ವನರ್ ಹಾಗೂ ಕೇಂದ್ರ ಗೃಹ ಸಚಿವಾಲಯ ತಿರಸ್ಕರಿಸಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬಳಿ ಕ್ಷಮಾದಾನ ಅರ್ಜಿಯನ್ನು ರವಾನಿಸಲಾಗಿದೆ.

ರಾಷ್ಟ್ರಪತಿಗಳು ಯಾವುದೇ ಕ್ಷಣದಲ್ಲೂ ಆರೋಪಿ ವಿನಯ್ ಶರ್ಮಾ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಬಹುದು. ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ಕೂಡಾ ಸೂಚನೆ ನೀಡಬಹುದು. ಹೀಗಾಗಿ ತಿಹಾರ್ ಜೈಲಿನ ಅಧಿಕಾರಿಗಳೇ ಗೊಂದಲಕ್ಕೆ ಒಳಗಾಗಿದ್ದಾರೆ.

ಆರೋಪಿಗಳಿಗೆ ತಿಹಾರ್ ಜೈಲಿನಲ್ಲಿ ಗಲ್ಲು ಅಸಾಧ್ಯ

ಆರೋಪಿಗಳಿಗೆ ತಿಹಾರ್ ಜೈಲಿನಲ್ಲಿ ಗಲ್ಲು ಅಸಾಧ್ಯ

ದೆಹಲಿ ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಆದೇಶಿಸಿದ್ದರೂ, ಮರಣದಂಡನೆ ವಿಧಿಸಲು ಸಾಧ್ಯವಿಲ್ಲ ಎಂದು ಸ್ವತಃ ತಿಹಾರ್ ಜೈಲಿನ ಹಿರಿಯ ಅಧಿಕಾರಿಗಳೇ ಹೇಳುತ್ತಿದ್ದಾರೆ. ಏಕೆಂದರೆ ಮರಣ ದಂಡನೆ ವಿಧಿಸಲು ಬೇಕಾದ ಮೂಲಭೂತ ಸೌಲಭ್ಯವೇ ತಿಹಾರ್ ಜೈಲಿನಲ್ಲಿ ಇಲ್ಲ. ಹೀಗಾಗಿ ಮುಂದೇನು ಮಾಡುವುದು ಎಂಬುದೇ ಜೈಲಾಧಿಕಾರಿಗಳಿಗೆ ಚಿಂತೆಯಾಗಿ ಕಾಡುತ್ತಿದೆ.

ನಿರ್ಭಯಾ ಅತ್ಯಾಚಾರಿಗೆ ಕ್ಷಮಾಧಾನ ಬೇಡ: ದೆಹಲಿ ಸರ್ಕಾರನಿರ್ಭಯಾ ಅತ್ಯಾಚಾರಿಗೆ ಕ್ಷಮಾಧಾನ ಬೇಡ: ದೆಹಲಿ ಸರ್ಕಾರ

ಹ್ಯಾಂಗರ್ ಮ್ಯಾನ್ ಇಲ್ಲದ ತಿಹಾರ್ ಜೈಲು

ಹ್ಯಾಂಗರ್ ಮ್ಯಾನ್ ಇಲ್ಲದ ತಿಹಾರ್ ಜೈಲು

ಹೌದು, ಏಷ್ಯಾದ ಅತಿದೊಡ್ಡ ಕೇಂದ್ರ ಕಾರಾಗೃಹವಾಗಿರುವ ತಿಹಾರ್ ಜೈಲಿನಲ್ಲಿ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಆಗುವುದಿಲ್ಲ. ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯನ್ನು ಗಲ್ಲಿಗೆ ಏರಿಸಲು ಅಗತ್ಯವಾಗಿ ಬೇಕಾಗಿರುವ ಹ್ಯಾಂಗ್ ಮ್ಯಾನ್ ಗಳೇ ಜೈಲಿನಲ್ಲಿ ಇಲ್ಲ. ಹ್ಯಾಂಗ್ ಮ್ಯಾನ್ ಗಳಿಲ್ಲದೇ ಗಲ್ಲುಶಿಕ್ಷೆ ವಿಧಿಸುವುದು ಅಸಾಧ್ಯೆ ಎನ್ನುತ್ತಾರೆ ತಿಹಾರ್ ಜೈಲಿನ ಹಿರಿಯ ಅಧಿಕಾರಿಗಳು. ಸಂಸತ್ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರುವನ್ನು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಿದ್ದೇ ಕೊನೆ. ಅಲ್ಲಿಂದ ಇಲ್ಲಿವರೆಗೂ ಈ ಜೈಲಿನಲ್ಲಿ ಯಾವುದೇ ಅಪರಾಧಿಗೆ ಗಲ್ಲುಶಿಕ್ಷೆ ವಿಧಿಸಿಲ್ಲ.

ಹ್ಯಾಂಗ್ ಮ್ಯಾನ್ ಗಾಗಿ ತಿಹಾರ್ ಜೈಲಾಧಿಕಾರಿಗಳ ಹುಡುಕಾಟ

ಹ್ಯಾಂಗ್ ಮ್ಯಾನ್ ಗಾಗಿ ತಿಹಾರ್ ಜೈಲಾಧಿಕಾರಿಗಳ ಹುಡುಕಾಟ

ಈಗಾಗಲೇ ತಿಹಾರ್ ಜೈಲಿನಲ್ಲಿ ಹ್ಯಾಂಗ್ ಮ್ಯಾನ್ ಗಳು ಇಲ್ಲದಾಗಿ ಬಹಳಷ್ಟು ಕಾಲವಾಗಿದೆ. ಸರ್ಕಾರದಿಂದ ಹ್ಯಾಂಗ್ ಮ್ಯಾನ್ ಗಳನ್ನು ನೇಮಕ ಮಾಡಿಕೊಂಡಿಲ್ಲ. ಒಪ್ಪಂದದ ಮೇಲೆ ಹ್ಯಾಂಗ್ ಮ್ಯಾನ್ ಗಳನ್ನು ಸೇವೆಗೆ ಸೇರಿಸಿಕೊಂಡೂ ಇಲ್ಲ. ಹೀಗಾಗಿ ದೇಶದ ಬೇರೆ ಜೈಲುಗಳಲ್ಲಿ ಹ್ಯಾಂಗ್ ಮ್ಯಾನ್ ಗಳಿದ್ದಾರೆಯೇ ಎಂದು ತಿಹಾರ್ ಜೈಲಿನ ಅಧಿಕಾರಿಗಳೇ ಅನಧಿಕೃತವಾಗಿ ವಿಚಾರಸಿಸುತ್ತಿದ್ದಾರೆ. ಜೊತೆಗೆ ಈ ಹಿಂದೆ ಜೈಲಿನಲ್ಲಿ ಹ್ಯಾಂಗ್ ಮ್ಯಾನ್ ಗಳಾಗಿದ್ದವರು ಯಾರು ಎಂಬುದನ್ನು ಉತ್ತರ ಪ್ರದೇಶದ ಕೆಲವು ಗ್ರಾಮಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

ಹ್ಯಾಂಗ್ ಮ್ಯಾನ್ ಗಳನ್ನು ನೇಮಿಸುವುದು ಅಸಾಧ್ಯ

ಹ್ಯಾಂಗ್ ಮ್ಯಾನ್ ಗಳನ್ನು ನೇಮಿಸುವುದು ಅಸಾಧ್ಯ

ಸದ್ಯದ ಪರಿಸ್ಥಿತಿಯಲ್ಲಿ ಹ್ಯಾಂಗ್ ಮ್ಯಾನ್ ಗಳನ್ನು ನೇಮಿಸಿಕೊಳ್ಳುವುದು ಸಾಧ್ಯವಿಲ್ಲ. ಒಪ್ಪಂದದ ಮೇರೆಗೆ ಹ್ಯಾಂಗ್ ಮ್ಯಾನ್ ಗಳನ್ನು ತರುವುದೂ ಸಾಧ್ಯವಾಗುವುದಿಲ್ಲ. ಭಾರತದಲ್ಲಿ ಮರಣದಂಡನೆ ಶಿಕ್ಷೆ ವಿಧಿಸುವುದು ಅಪರೂಪದಲ್ಲೇ ಬಲು ಅಪರೂಪ. ಹೀಗಾಗಿ ಶಾಶ್ವತವಾಗಿ ಹ್ಯಾಂಗ್ ಮ್ಯಾನ್ ಗಳನ್ನು ನೇಮಿಸಿಕೊಳ್ಳುವ ಅಗತ್ಯವಿಲ್ಲ. ಈ ಕೆಲಸಕ್ಕಾಗಿ ಶಾಶ್ವತ ಉದ್ಯೋಗಿಯನ್ನು ಆರಿಸುವುದೂ ಸಹ ಅಷ್ಟೊಂದು ಸುಲಭದ ಕೆಲಸವಲ್ಲ ಎನ್ನುತ್ತಾರೆ ತಿಹಾರ್ ಜೈಲಿನ ಹಿರಿಯ ಅಧಿಕಾರಿ.

ರಾಮನಾಥ್ ಕೋವಿಂದ್ ಆದೇಶದ ಮೇಲೆ ಕಣ್ಣು

ರಾಮನಾಥ್ ಕೋವಿಂದ್ ಆದೇಶದ ಮೇಲೆ ಕಣ್ಣು

ಇನ್ನು, ಸುಪ್ರೀಂಕೋರ್ಟ್ ವಿಧಿಸಿರುವ ಮರಣದಂಡನೆ ಆದೇಶದಿಂದ ಮುಕ್ತಿ ನೀಡಿಬೇಕು. ತನಗೆ ಕ್ಷಮದಾನ ನೀಡಬೇಕೆಂದು ಆರೋಪಿ ವಿನಯ್ ಶರ್ಮಾ ಅರ್ಜಿ ಸಲ್ಲಿಸಿದ್ದನು. ದೆಹಲಿಯ ಲೆಫ್ಟಿನೆಂಟ್ ಗೌರ್ವನರ್ ಹಾಗೂ ಕೇಂದ್ರ ಗೃಹ ಸಚಿವಾಲಯ ಈ ಅರ್ಜಿಯನ್ನು ತಿರಸ್ಕರಿಸಿದ್ದು, ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕ್ಷಮಾದಾನ ಅರ್ಜಿಯ ಕುರಿತು ಯಾವು ನಿರ್ಧಾರ ತೆಗದೆುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಲಾಗುತ್ತಿದೆ. ಒಂದು ವೇಳೆ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದರೆ ಅಪರಾಧಿ ವಿನಯ್ ಶರ್ಮಾಗೆ ಗಲ್ಲುಶಿಕ್ಷೆ ವಿಧಿಸಬೇಕಾಗುತ್ತದೆ.

ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಹಿನ್ನೆಲೆ

ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಹಿನ್ನೆಲೆ

2012ರ ಡಿಸೆಂಬರ್ ನಲ್ಲಿ ದೆಹಲಿಯ ವಸಂತ್ ವಿಹಾರ್ ಬಳಿ ಸಂಚರಿಸುತ್ತಿದ್ದ ಬಸ್ ನಲ್ಲೇ ನಿರ್ಭಯಾ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಈ ಸಂಬಂಧ ವಿನಯ್ ಶರ್ಮಾ, ಮುಖೇಶ್, ಪವನ್ ಅಕ್ಷಯ್, ರಾಮ್ ಸಿಂಗ್ ಹಾಗೂ ಒಬ್ಬ ಅಪ್ರಾಪ್ತ ಆರೋಪಿ ಸೇರಿ ಆರು ಮಂದಿಯನ್ನು ಬಂಧಿಸಲಾಗಿತ್ತು.

English summary
Delhi Nirbhaya Rape Case: Tihar Jain Has No Hangman To Execution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X