ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಮೆಟ್ರೋ ಸೇವೆ ಪುನಾರಾರಂಭಕ್ಕೆ ಅನುಮತಿ ಕೊಡಿ: ಸಿಎಂ ಅರವಿಂದ್ ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಆಗಸ್ಟ್‌ 24: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಮೆಟ್ರೋ ರೈಲು ಸೇವೆಗಳನ್ನು ಪುನರಾರಂಭಿಸಬೇಕು ಮತ್ತು ಕೇಂದ್ರವು ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯ ಜೀವನಾಡಿಯಾಗಿ ಮಾರ್ಪಟ್ಟಿರುವ ಮೆಟ್ರೊಗೆ ಸುಮಾರು ಆರು ತಿಂಗಳ ನಂತರ ಮತ್ತೆ ಟ್ರ್ಯಾಕ್‌ನಲ್ಲಿ ಚಲಿಸುವ ನಿರೀಕ್ಷೆಯಿದೆ. ಈ ಬಗ್ಗೆ ಭಾನುವಾರ ಎರಡು ಸೂಚನೆಗಳಿವೆ. ಒಂದು ಮುಖ್ಯಮಂತ್ರಿ ಕೇಂದ್ರ ಸರ್ಕಾರದ ಬಳಿ ಅನುಮತಿಯನ್ನು ಕೇಳಿದ್ದು, ಡಿಎಂಆರ್‌ಸಿ ಕೂಡ ಯಾವುದೇ ಸಂದರ್ಭದಲ್ಲಿ ತಾನು ಸಿದ್ದ ಎಂದಿದೆ.

ದೆಹಲಿ: ಕಂಟೈನ್ಮೆಂಟ್ ಝೋನ್ ಬಿಟ್ಟು ಉಳಿದೆಲ್ಲಾ ಕಡೆ ಹೋಟೆಲ್ ತೆರೆಯಲು ಅನುಮತಿದೆಹಲಿ: ಕಂಟೈನ್ಮೆಂಟ್ ಝೋನ್ ಬಿಟ್ಟು ಉಳಿದೆಲ್ಲಾ ಕಡೆ ಹೋಟೆಲ್ ತೆರೆಯಲು ಅನುಮತಿ

ಮೆಟ್ರೊ ಸೇವೆಯನ್ನು ಪುನಃಸ್ಥಾಪಿಸಲು ಅದರ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಡಿಎಂಆರ್‌ಸಿ ಹೇಳಿದೆ. ಆದೇಶ ಬಂದ ಕೂಡಲೇ ಅದು ಕೋವಿಡ್ ಪ್ರೋಟೋಕಾಲ್‌ನೊಂದಿಗೆ ಮೆಟ್ರೋವನ್ನು ಚಲಾಯಿಸುತ್ತದೆ ಎಂದು ಹೇಳಲಾಗಿದೆ.

Delhi Metro Service: It Should Be Resumed On Trial Basis Says CM Arvind Kejriwal

'ಡಿಜಿಟಲ್ ಸಂವಾದ್' ನಲ್ಲಿ ನಗರದ ವ್ಯಾಪಾರಿಗಳು, ಉದ್ಯಮಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಮುಖ್ಯಮಂತ್ರಿಗಳು ನವೆಂಬರ್-ಡಿಸೆಂಬರ್ ವೇಳೆಗೆ ದೆಹಲಿಯ ಮಾರುಕಟ್ಟೆಗಳು ಮತ್ತು ರಸ್ತೆಗಳನ್ನು ಚಾಂದನಿ ಚೌಕ್ ಪುನರಾಭಿವೃದ್ಧಿ ಯೋಜನೆಯ ಮಾದರಿಯಲ್ಲಿ ಸುಂದರಗೊಳಿಸಲಾಗುವುದು ಎಂದು ಹೇಳಿದರು.

ನಗರದ ಸಾಂಕ್ರಾಮಿಕ ಪೀಡಿತ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ತಮ್ಮ ಸರ್ಕಾರ ಕೈಗೊಂಡ ವಿವಿಧ ಕ್ರಮಗಳ ಬಗ್ಗೆ ಅವರು ಮಾತನಾಡಿದರು ಮತ್ತು ಮುಂದಿನ ದಿನಗಳಲ್ಲಿ ಇದು ಉದ್ಯಮ ಕ್ಷೇತ್ರದ ಬಗ್ಗೆ ಕೆಲವು ದೊಡ್ಡ ಪ್ರಕಟಣೆಗಳನ್ನು ಮಾಡಲಿದೆ ಎಂದು ಹೇಳಿದರು.

English summary
Metro train services in Delhi should be resumed on a trial basis as the COVID-19 situation was improving in the city and hope the Centre would soon take a decision on it, said Delhi Chief Minister Arvind Kejriwal on August 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X