ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಿಂದ ಮೀರತ್‌ಗೆ ಈಗ 45 ನಿಮಿಷದ ಪ್ರಯಾಣ: ಎಕ್ಸ್‌ಪ್ರೆಸ್‌ವೇ ಸಂಚಾರಕ್ಕೆ ಮುಕ್ತ

|
Google Oneindia Kannada News

ನವದೆಹಲಿ, ಏಪ್ರಿಲ್ 1: ಬಹುಕಾಲದಿಂದ ಕಾಯುತ್ತಿದ್ದ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ ಹೆದ್ದಾರಿ ಗುರುವಾರದಿಂದ ಸಂಚಾರಕ್ಕೆ ಮುಕ್ತವಾಗಿದೆ. ಪ್ರಸ್ತುತ ಮೀರತ್ ಮತ್ತು ದೆಹಲಿ ನಡುವಿನ ಓಡಾಟಕ್ಕೆ ಎರಡೂವರೆ ಗಂಟೆಗೂ ಅಧಿಕ ಸಮಯ ತಗುಲುತ್ತಿದೆ. ಆದರೆ ಈ ಎಕ್ಸ್‌ಪ್ರೆಸ್‌ವೇದಿಂದಾಗಿ ಕೇವಲ 45 ನಿಮಿಷಗಳಲ್ಲಿಯೇ ಪ್ರಯಾಣವನ್ನು ಮುಗಿಸಬಹುದು.

ಎರಡು ನಗರಗಳನ್ನು ಸಂಪರ್ಕಿಸುವ ಈ ಮಹತ್ವಾಕಾಂಕ್ಷಿ ಯೋಜನೆ ಪೂರ್ಣಗೊಂಡಿದ್ದು, ಗುರುವಾರದಿಂದ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. 'ದೆಹಲಿಯಿಂದ ಮೀರತ್‌ಗೆ ತೆರಳುವ ಪ್ರಯಾಣದ ಸಮಯವನ್ನು ತಗ್ಗಿಸುವುದಾಗಿ ನೀಡಿದ್ದ ನಮ್ಮ ಭರವಸೆಯನ್ನು ನಾವು ಈಡೇರಿಸಿದ್ದೇವೆ' ಎಂದು ರಸ್ತೆ ಹಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

 Delhi-Meerut Expressway Opens For Public, It Will Reduce The Travel Time To 45 Minutes

ರಾಜ್ಯ ಹೆದ್ದಾರಿ ಅಗಲೀಕರಣ; ಧರೆಗುರುಳಿದ ಶತಮಾನದ ಮರಗಳು ರಾಜ್ಯ ಹೆದ್ದಾರಿ ಅಗಲೀಕರಣ; ಧರೆಗುರುಳಿದ ಶತಮಾನದ ಮರಗಳು

'ದೆಹಲಿ ಮೀರತ್ ಎಕ್ಸ್‌ಪ್ರೆಸ್‌ವೇ ಈಗ ಪೂರ್ಣಗೊಂಡಿದೆ ಮತ್ತು ಸಂಚಾರಕ್ಕೆ ತೆರೆದುಕೊಂಡಿದೆ. ದೆಹಲಿ-ಮೀರತ್ ನಡುವಿನ ಪ್ರಯಾಣದ ವೇಳೆಯನ್ನು 2.5 ಗಂಟೆಯಿಂದ 45 ನಿಮಿಷಕ್ಕೆ ತಗ್ಗಿಸುವ ನಮ್ಮ ಭರವಸೆಯನ್ನು ಈಡೇರಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.

ಮೀರತ್ ಮತ್ತು ದೆಹಲಿ ನಡುವಿನ 96 ಕಿಮೀ ದೂರದ 14 ಲೇನ್‌ನ ಎಕ್ಸ್‌ಪ್ರೆಸ್‌ವೇನಲ್ಲಿ ಪ್ರಯಾಣದ ಸಮಯವು ಕೇವಲ 45 ನಿಮಿಷಕ್ಕೆ ತಗ್ಗಲಿದೆ. ಪ್ರಸ್ತುತ ಮೀರತ್‌ನಿಂದ ದೆಹಲಿ ತಲುಪಲು ಎನ್‌ಎಚ್‌ 58ರ ಮೂಲಕ ಪ್ರಯಾಣಿಸಬೇಕಿದ್ದು, 70 ಕಿಮೀ ದೂರದ ಸಂಚಾರಕ್ಕೆ ಸುಮಾರು ಮೂರು ಗಂಟೆ ಸಮಯ ಬೇಕಾಗುತ್ತಿದೆ.

ಬೆಂಗಳೂರು, ಮಂಗಳೂರು ನಡುವೆ ಚತುಷ್ಪಥ ರಸ್ತೆ,ಹೊಸ ಟೆಂಡರ್ಬೆಂಗಳೂರು, ಮಂಗಳೂರು ನಡುವೆ ಚತುಷ್ಪಥ ರಸ್ತೆ,ಹೊಸ ಟೆಂಡರ್

ಈ ಎಕ್ಸ್‌ಪ್ರೆಸ್ ವೇ ಹೆದ್ದಾರಿಯು ಮುಜಫ್ಫರ್‌ನಗರ, ಸಹರಾನ್ಪುರ, ಹರಿದ್ವಾರ ಮತ್ತು ಡೆಹರಾಡೂನ್‌ನಿಂದ ದೆಹಲಿಗೆ ಇರುವ ಪ್ರಯಾಣದ ಸಮಯವನ್ನು ಕೂಡ ಕಡಿಮೆ ಮಾಡಲಿದೆ.

Recommended Video

ಇವರ ಕೆಟ್ಟ ಆಡಳಿತದ ವಿರುದ್ಧ ನಾವು ಹೋರಾಟ ಮಾಡ್ತೀವಿ ! | DK Shivakumar | Oneindia Kannada

ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ

English summary
Delhi-Meerut Expressway is now opened for traffic from April 1. It will reduce the travel tome between Meetur and delhi to 45 minutes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X