ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಭೂಮಿ ಕಂಪಿಸಿದ ಅನುಭವಕ್ಕೆ ಕಾರಣವಾದ ಇದೊಂದು ಘಟನೆ!

|
Google Oneindia Kannada News

ನವದೆಹಲಿ, ಮೇ 11: ಮಂಗಳವಾರ ರಾತ್ರಿ ದೆಹಲಿ-ಮೀರತ್ ಕಾರಿಡಾರ್‌ನ 50 ಟನ್ ಸಿಮೆಂಟೆಡ್ ವಿಭಾಗವು ಕ್ರೇನ್ ತಂತಿ ತುಂಡಾಗಿ ರಸ್ತೆಯ ಮೇಲೆ ಬಿದ್ದಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಈ ಘಟನೆಯಿಂದ ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಪ್ರಾಥಮಿಕ ವರದಿಯ ಪ್ರಕಾರ ದೆಹಲಿ ಅಗ್ನಿಶಾಮಕ ದಳ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ದೆಹಲಿ-ಮೀರತ್ ಕಾರಿಡಾರ್‌ನ 50 ಟನ್ ಸಿಮೆಂಟೆಡ್ ವಿಭಾಗದ ಹಠಾತ್ ಕುಸಿತದಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

ದೆಹಲಿ: ಹಳದಿ ಮಾರ್ಗದ ಈ ನಿಲ್ದಾಣಗಳಲ್ಲಿ ಡಿ.30ರಂದು ಮೆಟ್ರೋ ಸೇವೆ ಸ್ಥಗಿತದೆಹಲಿ: ಹಳದಿ ಮಾರ್ಗದ ಈ ನಿಲ್ದಾಣಗಳಲ್ಲಿ ಡಿ.30ರಂದು ಮೆಟ್ರೋ ಸೇವೆ ಸ್ಥಗಿತ

50 ಟನ್ ತೂಕದ ಭಾರೀ ಸಿಮೆಂಟೆಡ್ ವಿಭಾಗದ ಹಠಾತ್ ಕುಸಿತದಿಂದ ಸ್ಥಳದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಸ್ಥಳೀಯರು ಕೂಡ ಭೂಕಂಪನ ಸಂಭವಿಸುತ್ತಿದೆಯೇ? ಎಂದು ಭಾವಿಸಿದ್ದರು. ಆದರೆ ತದನಂತರದಲ್ಲಿ ಈ ಸಿಮೆಂಟೆಡ್ ವಿಭಾಗದ ಕುಸಿತದಿಂದ ಭೂಮಿ ಕಂಪಿಸಿದಂತಾಗಿದೆ ಎಂಬುದು ತಿಳಿದು ಬಂದಿದೆ.

Delhi-Meerut Corridor: 50-Tonne Cement Segment Falls On Road After Crane Wire Breaks

ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ: ದೆಹಲಿ-ಮೀರತ್ ಕಾರಿಡಾರ್‌ನ 50 ಟನ್ ಸಿಮೆಂಟೆಡ್ ವಿಭಾಗವು ಗೊತ್ತುಪಡಿಸಿದ ಮೀಸಲು ಪ್ರದೇಶದೊಳಗೆ ಬಿದ್ದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಎರಡು ಸೇತುವೆಗಳನ್ನು ಸಂಪರ್ಕಿಸಲು ಈ ವಿಭಾಗವನ್ನು ನಿರ್ಮಿಸಲಾಗಿತ್ತು.

English summary
Delhi-Meerut corridor: 50 tonne cement segment falls on road after crane wire breaks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X