ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ ಉಲ್ಲಂಘಿಸಿದ್ದಕ್ಕೆ ತಂದೆ ಮೇಲೆ ಮಗನಿಂದ ಕೇಸ್

|
Google Oneindia Kannada News

ದೆಹಲಿ, ಏಪ್ರಿಲ್ 3: ಜಗತ್ತಿನಾದ್ಯಂತ ಕೊರೊನಾ ಭೀತಿ ಹೆಚ್ಚಿದೆ. 10 ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 54 ಸಾವಿರ ಜನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಕೊರೊನಾವನ್ನು ಹೇಗಾದರು ಮಾಡಿ ನಿಯಂತ್ರಿಸಬೇಕು ಎಂಬ ಕಾರಣಕ್ಕಾಗಿ ಏಪ್ರಿಲ್ 14ರವರೆಗೂ ದೇಶದಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ.

Recommended Video

ಮೂಕ ಪ್ರಾಣಿಗಳಿಗೆ ನೇರವಾದ ಕನ್ನಡದ ಯುವಕರು | Oneindia Kannada

ಲಾಕ್‌ಡೌನ್‌ ಉಲ್ಲಂಘನೆ ಮಾಡಿದ್ರೆ ಕಠಿಣ ಕ್ರಮ ಜರುಗಿಸಿ ಎಂದು ಪೊಲೀಸ್ ಇಲಾಖೆ ಆದೇಶಿಸಿದೆ. ಆದರೂ ಕಾನೂನು ಉಲ್ಲಂಘಿಸಿ ಅನಗತ್ಯವಾಗಿ ಬೀದಿಗೆ ಬರುವವರ ಸಂಖ್ಯೆ ಮಾತ್ರ ಕಮ್ಮಿ ಆಗಿಲ್ಲ.

ಉತ್ತರ ಕನ್ನಡ ಜಿಲ್ಲೆ ಜನರು ರಿಲ್ಯಾಕ್ಸ್; ಹತೋಟಿಗೆ ಬಂದ ಕೊರೊನಾ ಮಾರಿಉತ್ತರ ಕನ್ನಡ ಜಿಲ್ಲೆ ಜನರು ರಿಲ್ಯಾಕ್ಸ್; ಹತೋಟಿಗೆ ಬಂದ ಕೊರೊನಾ ಮಾರಿ

ಲಾಕ್‌ಡೌನ್‌ ಉಲ್ಲಂಘಸಿ ಪದೇ ಪದೇ ಮನೆಯಿಂದ ಹೊರಗೆ ಹೋಗುತ್ತಿದ್ದ ತಂದೆಯ ವಿರುದ್ಧ ಮಗನ ಪೊಲೀಸ್ ದೂರು ನೀಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

Son Filed Complaint Against His Father

59 ವರ್ಷದ ವ್ಯಕ್ತಿಯ ಪ್ರತಿ ದಿನ ಬೆಳಿಗ್ಗೆ ಮನೆಯಿಂದ ಹೊರಗೆ ಹೋಗುತ್ತಾರೆ. ಕೊರೊನಾ ಹರಡುವಿಕೆ ವಿರುದ್ಧ ಲಾಕ್‌ಡೌನ್‌ ಎಷ್ಟು ಪರಿಣಾಮಕಾರಿಯಾಗಿದೆ ಎಂದು ಬುದ್ದಿವಾದ ಹೇಳಿದರೂ ತಂದೆ ಕೇಳಲಿಲ್ಲ. ಹಾಗಾಗಿ, ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

30 ವರ್ಷದ ಮಗನ ದೂರಿನ ಅನ್ವಯ ಪೊಲೀಸರು ಆ ವ್ಯಕ್ತಿಯ ವಿರುದ್ಧ ಲಾಕ್‌ಡೌನ್‌ ಉಲ್ಲಂಘನೆ ಅಡಿ ಕೇಸ್ ದಾಖಲಿಸಿ ಎಫ್ ಐ ಆರ್ ಹಾಕಿದ್ದಾರೆ.

ಅವಳಿ ಮಕ್ಕಳಿಗೆ 'ಕೊರೊನಾ', 'ಕೋವಿಡ್' ಎಂದು ಹೆಸರಿಟ್ಟ ತಂದೆ ತಾಯಿಅವಳಿ ಮಕ್ಕಳಿಗೆ 'ಕೊರೊನಾ', 'ಕೋವಿಡ್' ಎಂದು ಹೆಸರಿಟ್ಟ ತಂದೆ ತಾಯಿ

ಸದ್ಯ, ದೆಹಲಿಯಲ್ಲಿ 293 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ 2500ಕ್ಕೂ ಹೆಚ್ಚು ಕೊರೊನಾ ಕೇಸ್‌ ವರದಿಯಾಗಿದ್ದು ಸುಮಾರು 70 ಜನರು ಸಾವನ್ನಪ್ಪಿರುವ ಮಾಹಿತಿ ಇದೆ.

English summary
Son has filed a complaint against his father for violating the lockdown order. Delhi police register FIR against a 59-year-old person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X