ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಂಡತಿ ದೇಶ ಬಿಡುವುದನ್ನು ತಡೆಯಲು ಪತಿ ಹೀಗೆ ಮಾಡೋದಾ

|
Google Oneindia Kannada News

ನವದೆಹಲಿ, ಆಗಸ್ಟ್ 17: ಹೆಂಡತಿ ದೇಶಬಿಡುವುದನ್ನು ಹೇಗಾದರೂ ತಡೆಯಬೇಕು ಎಂಬ ಹಠಕ್ಕೆ ಬಿದ್ದ ಪತಿ ಹೆಂಡತಿ ಬಾಂಬ್ ಸ್ಫೋಟಿಸಲು ದೆಹಲಿ ಏರ್‌ಪೋರ್ಟ್‌ಗೆ ತೆರಳುತ್ತಿದ್ದಾಳೆ ಎಂದು ಸುಳ್ಳುಸುದ್ದಿ ಹಬ್ಬಿಸಿದ್ದ.

ಹೆಂಡತಿ ರಫಿಯಾ ಏರ್‌ಪೋರ್ಟ್‌ಗೆ ಬಾಂಬ್ ಇಡಲು ಹೋಗುತ್ತಿದ್ದಾಳೆ ಎಂದು ಪೊಲೀಸರಿಗೆ ಕರೆ ಮಾಡಿ ಆತ ತಿಳಿಸಿದ್ದ. ಆದರೆ ಪೊಲೀಸರ ತನಿಖೆ ವೇಳೆ ಅದೆಲ್ಲಾ ಸುಳ್ಳು ಹೆಂಡತಿ ದೇಶ ಬಿಡುವುದನ್ನು ತಡೆಯಲು ಆತ ಈ ರೀತಿ ಸುಳ್ಳು ಹೇಳಿದ್ದ ಎಂದು ತಿಳಿದುಬಂದಿದೆ.

ಹುಸಿ ಬಾಂಬ್ ಕರೆ: ಮತ್ತೆ ಆಗಸಕ್ಕೆ ಹಾರಿದ ಏರ್‌ ಇಂಡಿಯಾ ವಿಮಾನಹುಸಿ ಬಾಂಬ್ ಕರೆ: ಮತ್ತೆ ಆಗಸಕ್ಕೆ ಹಾರಿದ ಏರ್‌ ಇಂಡಿಯಾ ವಿಮಾನ

ಈ ಕುರಿತು ಆರೋಪಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Delhi Man Calls Police Saying His Wife Is Bomber

ಚೆನ್ನೈನಲ್ಲಿ ಮ್ಯಾನುಫ್ಯಾಕ್ಚರಿಂಗ್ ಕಂಪನಿಯನ್ನು ಹೊಂದಿರುವ ನಸೀರುದ್ದೀನ್ ರಫಿಯಾ ಎಂಬಾಕೆಯನ್ನು ಮದುವೆಯಾಗಿದ್ದ. ಯಾವಾಗ ಹೆಂಡತಿಯನ್ನು ದೇಶ ಬಿಟ್ಟು ಹೋಗದಂತೆ ತಡೆಯಲು ಸಾಧ್ಯವಾಗಲಿಲ್ಲವೋ ಆಗ ಆಕೆ ಬಾಂಬರ್‌ ಎಂದು ಬಿಂಬಿಸುವ ಸುಳ್ಳು ಕರೆ ಮಾಡುವ ಯೋಜನೆ ರೂಪಿಸಿದ್ದ ಆರೋಪಿಯನ್ನು 29 ವರ್ಷದ ನಸೀರುದ್ದಿನ್ ಎಂದು ಗುರುತಿಸಲಾಗಿದ್ದು, ಬಾವ್ನಾ ಪ್ರದೇಶದಲ್ಲಿ ಬಂಧಿಸಲಾಗಿದೆ.

ಇಂದಿರಾ ಗಾಂಧಿ ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ನಲ್ಲಿ ತಾತ್ಕಾಲಿಕವಾಗಿ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದ್ದರು.

ನಸೀರುದ್ದಿನ್‌ ಹೆಂಡತಿ ರಫಿಯಾ ಅವರು ಮಧ್ಯ ಪ್ರಾಚ್ಯದ ಗಲ್ಫ್‌ ರಾಷ್ಟ್ರಕ್ಕೆ ತೆರಳಿ ಉದ್ಯೋಗ ಮಾಡಲು ನಿರ್ಧರಿಸಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ಆಕೆಯನ್ನು ತಡೆಯಲು ಮುಂದಾದ ಆತ ಪೊಲೀಸರಿಗೆ ಕರೆ ಮಾಡಿ ದುಬೈ ಅಥವಾ ಸೌದಿ ಅರೇಬಿಯಾಕ್ಕೆ ತೆರಳು ವಿಮಾನದಲ್ಲಿ ನನ್ನ ಪತ್ನಿ ಬಾಂಬ್‌ ಸ್ಫೋಟಿಸಲು ಬರುತ್ತಿದ್ದಾಳೆ ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
Delhi Man Calls Police Saying His Wife Is Bomber, Delhi Police has arrested a man who they say made a hoax call on August 8 saying his wife was on her way to set off a bomb at the Delhi airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X