ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ಕಂಟೈನ್ಮೆಂಟ್ ಝೋನ್ ಬಿಟ್ಟು ಉಳಿದೆಲ್ಲಾ ಕಡೆ ಹೋಟೆಲ್ ತೆರೆಯಲು ಅನುಮತಿ

|
Google Oneindia Kannada News

ನವದೆಹಲಿ, ಆಗಸ್ಟ್ 21: ಕಂಟೈನ್ಮೆಂಟ್ ಝೋನ್‌ ಅಲ್ಲದ ಪ್ರದೇಶಗಳಲ್ಲಿರುವ ಹೋಟೆಲ್‌ಗಳನ್ನು ತೆರೆಯಲು ದೆಹಲಿ ಸರ್ಕಾರ ಅನುಮತಿ ನೀಡಿದೆ. ಲಾಕ್‌ಡೌನ್ ನಿಯಮ ಸಡಿಲಿಕೆಯಲ್ಲಿ ಒಂದೊಂದಾಗಿ ಅನುಮತಿ ದೊರೆಯಲಿದೆ.

Recommended Video

Sumalatha ಸೊಂಟಕ್ಕೆ ಕೈ ಹಾಕಿದ Yediyurappa | Onendia Kannada

ಸರ್ಕಾರದ ನಿಯಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಹ್ಯಾಂಡ್ ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ಯಾನ್ ಸೇರಿದಂತೆ ಹಲವು ನಿಯಮಗಳು ಅಡಕವಾಗಿದೆ.

ಭಾರತದಲ್ಲಿ 29 ಲಕ್ಷದ ಗಡಿ ದಾಟಿತು ಕೊವಿಡ್-19 ಪ್ರಕರಣಗಳ ಸಂಖ್ಯೆ!ಭಾರತದಲ್ಲಿ 29 ಲಕ್ಷದ ಗಡಿ ದಾಟಿತು ಕೊವಿಡ್-19 ಪ್ರಕರಣಗಳ ಸಂಖ್ಯೆ!

ಟ್ರಯಲ್ ಬೇಸಿಸ್ ಮೂಲಕ ವಾರದ ಮಾರುಕಟ್ಟೆಯನ್ನೂ ತೆರೆಯಲು ಅನುಮತಿ ನೀಡಿದೆ. ಒಂದೊಂದು ಝೋನ್‌ನಲ್ಲಿ ಆಗಸ್ಟ್ 24 ಹಾಗೂ 30ರಂದು ಮಾರುಕಟ್ಟೆಯನ್ನು ತೆರೆಯಬಹುದಾಗಿದೆ.

Delhi Hotels In Non-Containment Zones Re-Open, Weekly Markets

ಕೊರೊನಾ ಸಡಿಲಿಕೆ ನಿಯಮ 3ರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೋಟೆಲ್ ತೆರೆಯುವುದು, ವಾರದ ಮಾರುಕಟ್ಟೆ ಕುರಿತು ಸೂಚನೆ ನೀಡಿದ್ದಾರೆ.

ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಉತ್ತರ ಪ್ರದೇಶ ಹಾಗೂ ಕರ್ನಾಟಕದಲ್ಲಿ ಹೆಚ್ಚಾಗುತ್ತಿದ್ದರೂ ಮಾರುಕಟ್ಟೆಯನ್ನು ತೆರೆಯಲು ಅನುಮತಿ ಇದೆ. ಹೀಗಾಗಿ ದೆಹಲಿಯಲ್ಲೂ ಮಾರುಕಟ್ಟೆ ಹಾಗೂ ಹೋಟೆಲ್ ತೆರೆಯಲಾಗುವುದು ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಇಲ್ಲಿಯವರೆಗೆ 1.7 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. 12 ಸಾವಿರ ಸಕ್ರಿಯ ಪ್ರಕರಣಗಳಿವೆ. ದೆಹಲಿಯಲ್ಲಿ ಕೊರೊನಾ ಪರಿಸ್ಥಿತಿ ಈ ಗ ಸುಧಾರಿಸಿದೆ. ಇದೀಗ ಆರ್ಥಿಕತೆಯ ಮೇಲೆ ಹೆಚ್ಚು ಗಮನಕೊಡುವ ಸಮಯ ಬಂದಿದೆ. ದೆಹಲಿಯ ಹೋಟೆಲ್‌ಗಳು ಶೇ.8ರಷ್ಟನ್ನು ಜಿಡಿಪಿಗೆ ನೀಡುತ್ತವೆ. ದೆಹಲಿಯಲ್ಲಿ ರೆಸ್ಟೋರೆಂಟ್‌ಗಳನ್ನು ತರೆಯಲು ಜೂನ್ 8 ರಂದು ಅನುಮತಿ ದೊರೆತಿತ್ತು.

English summary
Hotels in non-containment zones of Delhi have been allowed to re-open as part of the phased lifting of restrictions imposed during the coronavirus lockdown, a notification from the national capital's disaster management authority said Friday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X