ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನಯಾನಕ್ಕೆ ನಿಷೇಧ; ಕುನಾಲ್ ಕಾಮ್ರಾ ನೆರವಿಗೆ ಬಂದ ಹೈಕೋರ್ಟ್‌

|
Google Oneindia Kannada News

ನವದೆಹಲಿ, ಫೆಬ್ರವರಿ 27: ವಿಮಾನ ಪ್ರಯಾಣ ಸಂದರ್ಭದಲ್ಲಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಜೊತೆ ಆಕ್ಷೇಪಾರ್ಹ ವರ್ತನೆ ತೋರಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಕಾಮಿಡಿಯನ್ (Stand-up Comedian) ಕುನಾಲ್ ಕಾಮ್ರಾ ವಿರುದ್ಧದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ.

ಕುನಾಲ್ ಕಾಮ್ರಾ ವಿಮಾನಯಾನ ನಿಷೇಧವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಆರು ತಿಂಗಳಿನ ಬದಲು ಮೂರು ತಿಂಗಳಿಗೆ ಕಡಿತಗೊಳಿಸಬೇಕು ಎಂದು ದೆಹಲಿ ಹೈಕೋರ್ಟ್ ಆದೇಶ ನೀಡಿದೆ.

ಅರ್ನಬ್ ವಿಡಿಯೋ ಮಾಡಿದ ಕುನಾಲ್‌ಗೆ ಇದೆಂಥ ಶಿಕ್ಷೆ!ಅರ್ನಬ್ ವಿಡಿಯೋ ಮಾಡಿದ ಕುನಾಲ್‌ಗೆ ಇದೆಂಥ ಶಿಕ್ಷೆ!

ಕುನಾಲ್ ಕಾಮ್ರಾ ಸಲ್ಲಿಸಿರುವ ಅರ್ಜಿಯ ಬಗ್ಗೆ ಎರಡು ತಿಂಗಳ ಒಳಗಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಕ್ರಮ ಕೈಗೊಂಡು ವರದಿ ನೀಡಬೇಕು ಎಂದು ಆದೇಶ ನೀಡಿದೆ.

ಹೈಕೋರ್ಟ್‌ಗೆ ಕಾಮ್ರಾ ಅರ್ಜಿ

ಹೈಕೋರ್ಟ್‌ಗೆ ಕಾಮ್ರಾ ಅರ್ಜಿ

ಏರ್ ಇಂಡಿಗೋ, ಕುನಾಲ್ ಕಾಮ್ರಾ ಅವರು ಸಹ ಪ್ರಯಾಣಿಕರೊಂದಿಗೆ ಆಕ್ಷೇಪಾರ್ಹವಾಗಿ ನಡೆದುಕೊಂಡಿದ್ದಾರೆ ಎಂದು ಆರು ತಿಂಗಳು ವಿಮಾನ ಪ್ರಯಾಣದ ಮೇಲೆ ನಿರ್ಬಂಧ ಹೇರಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಕಾಮ್ರಾ ಅರ್ಜಿ ಸಲ್ಲಿಸಿದ್ದರು.

ಡಿಜಿಸಿಎನ ಆಂತರಿಕ ನಿಯಮಾವಳಿಗಳೇನು

ಡಿಜಿಸಿಎನ ಆಂತರಿಕ ನಿಯಮಾವಳಿಗಳೇನು

ಬುಧವಾರ ಅರ್ಜಿ ವಿಚಾರಣೆ ನಡೆಸಿದ್ದ, ನ್ಯಾಯಮೂರ್ತಿ ನವೀನ್ ಚಾವ್ಲಾ, ನಿರ್ಬಂಧ ಹೇರುವುದು ವಿಮಾನಯಾನ ಸಂಸ್ಥೆಗಳ ಆಂತರಿಕ ವಿಚಾರ. ಆದರೆ, ನಾಗರಿಕ ವಿಮಾನಯಾನ ನಿರ್ದೇಶನಾಲಯ ಏಕೆ ಇತರ ವಿಮಾನಯಾನಗಳಿಗೆ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿತು. ಈ ಬಗ್ಗೆ ಡಿಜಿಸಿಎನ ಆಂತರಿಕ ನಿಯಮಾವಳಿಗಳೇನು ಎಂಬುದನ್ನು ಕೋರ್ಟ್‌ಗೆ ಸಲ್ಲಿಸಿ ಎಂದು ಬುಧವಾರ ದೆಹಲಿ ಹೈಕೋರ್ಟ್‌ ವಿಚಾರಣೆಯನ್ನು ಮುಂದೂಡಿತ್ತು.

ವಿಡಿಯೋ ಮಾಡಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು

ವಿಡಿಯೋ ಮಾಡಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು

ಇತ್ತೀಚೆಗೆ ಕುನಾಲ್ ಕಾಮ್ರಾ ಏರ್ ಇಂಡಿಗೋದಲ್ಲಿ ದೆಹಲಿಯಿಂದ ಮುಂಬೈಗೆ ಪ್ರಯಾಣಿಸುವಾಗ ತಮ್ಮ ಪಕ್ಕದ ಆಸನದಲ್ಲಿ ಕುಳಿತಿದ್ದ ಟಿವಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರನ್ನು ವಿರೋಧಿಸಿ ಮಾತನಾಡುವ ವಿಡಿಯೋ ಮಾಡಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಪ್ರಯಾಣಿಕರೊಂದಿಗೆ ಆಕ್ಷೇಪಾರ್ಹವಾಗಿ ನಡೆದುಕೊಂಡಿದ್ದಾರೆ ಎಂದು ಏರ್ ಇಂಡಿಗೋ ಆರು ತಿಂಗಳು ನಿರ್ಬಂಧ ಹೇರಿತ್ತು. ಇದರ ಬೆನ್ನಲ್ಲೇ ಗೋ ಏರ್ ಹಾಗೂ ಸ್ಪೈಸ್ ಜೆಟ್ ಕೂಡ ಕಾಮ್ರಾ ವಿಮಾನ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಿತ್ತು.

ಡಿಜಿಸಿಎ ನಿರ್ದೇಶಿಸಿದ್ದು ಇದೇ ಮೊದಲು

ಡಿಜಿಸಿಎ ನಿರ್ದೇಶಿಸಿದ್ದು ಇದೇ ಮೊದಲು

ಈ ಬಗ್ಗೆ ಸುದ್ದಿ ಪ್ರತಿಕ್ರಿಯಿಸಿರುವ ಕುನಾಲ್ ಕಾಮ್ರಾ ಅವರ ವಕೀಲರು, 'ನಾಗರಿಕ ವಿಮಾನಯಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಯಾಣಿಕರೊಬ್ಬರ ದೂರನ್ನು ಆದರಿಸದೇ ಪ್ರಯಾಣದ ಮೇಲೆ ನಿರ್ಬಂಧ ಕೈಗೊಳ್ಳಲು ಡಿಜಿಸಿಎ ನಿರ್ದೇಶಿಸಿದ್ದು ಇದೇ ಮೊದಲು. ಈ ಬಗ್ಗೆ ನಮ್ಮ ಅರ್ಜಿದಾರರ ಪರವಾಗಿ ಕೋರ್ಟ್‌ನಲ್ಲಿ ನ್ಯಾಯ ಸಿಗಲಿದೆ' ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.

English summary
Delhi High Court Told To DGCA Over Kunal Kamra Plane Journey Ban. DGCA decide Kunal Kamra’s plea against flight ban within 2 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X