ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎನ್ಎಕ್ಸ್ ಮೀಡಿಯಾ ಹಗರಣ: ಚಿದಂಬರಂಗೆ ನೆಮ್ಮದಿಯ ಸುದ್ದಿ

|
Google Oneindia Kannada News

ನವದೆಹಲಿ, ಮೇ 18: ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿಗೆ ಶುಭ ಸುದ್ದಿ ಸಿಕ್ಕಿದೆ. ಈ ಪ್ರಕರಣದ ವಿಚಾರಣೆಗೆ ದೆಹಲಿ ಹೈಕೋರ್ಟ್‌ ಮಂಗಳವಾರದಂದು ತಡೆ ನೀಡಿದೆ.

ಆರೋಪಿಗಳಿಗೆ ಎಲ್ಲಾ ದಾಖಲೆಗಳನ್ನು ಪೂರೈಸುವಂತೆ ಸಿಬಿಐ ವಿಶೇಷ ನ್ಯಾಯಾಧೀಶರು ನಿರ್ದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸುರೇಶ್‌ ಕುಮಾರ್‌ ಕೈಟ್‌ ಅವರಿದ್ದ ಏಕಸದಸ್ಯ ಪೀಠವು ತಡೆಯಾಜ್ಞೆ ನೀಡಿದೆ.

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಆರೋಪಿಗಳಾಗಿರುವ ಎಲ್ಲರಿಗೂ ನೋಟಿಸ್‌ ಜಾರಿಗೊಳಿಸಿದ್ದು, ಉತ್ತರಿಸುವಂತೆ ನ್ಯಾಯಾಲಯ ಆದೇಶಿಸಿದೆ. ಸಿಆರ್‌ಪಿಸಿ ಸೆಕ್ಷನ್‌ 207 ಜಾರಿಯಲ್ಲಿರುವ ಸಂದರ್ಭದಲ್ಲಿ ವಿಚಾರಣಾಧೀನ ನ್ಯಾಯಾಲಯವು ತಪ್ಪಾಗಿ ಎಲ್ಲಾ ದಾಖಲೆಗಳನ್ನು ಆರೋಪಿಗಳಿಗೆ ಪೂರೈಸುವಂತೆ ಸೂಚಿಸಿದೆ ಎಂದು ಸಿಬಿಐ ಪರ ವಕೀಲ ಅನುಪಮ್‌ ಎಸ್‌ ಶರ್ಮಾ ವಾದಿಸಿದರು. ವಿಚಾರಣೆಯ ಸಂದರ್ಭದಲ್ಲಿ ನ್ಯಾಯಯುತ ವಿಚಾರಣೆಯ ಉದ್ದೇಶಗಳಿಗಾಗಿ ಯಾವುದೇ ಹಂತದಲ್ಲಿ ಯಾವುದೇ ದಾಖಲೆಯನ್ನುಆರೋಪಿ ದಾಖಲಿಸಬಹುದು ಎಂದು ನ್ಯಾಯಾಲಯವು ಹೇಳಿತು.

Delhi High Court stays trial in INX Media case

ಏನಿದು ಪ್ರಕರಣ?:
ಯುಪಿಎ 1 ಅಧಿಕಾರದಲ್ಲಿದ್ದಾಗ ವಿತ್ತ ಸಚಿವರಾಗಿದ್ದ ಪಿ ಚಿದಂಬರಂ ಅವರು 2007ರಲ್ಲಿ ಐಎನ್ಎಕ್ಸ್ ಮೀಡಿಯಾ ಸಂಸ್ಥೆಗೆ ಸುಮಾರು 305 ಕೋಟಿ ರುಗಳನ್ನು ವಿದೇಶದಿಂದ ಹೂಡಿಕೆ ರೂಪದಲ್ಲಿ ಪಡೆಯಲು ಅನುಮತಿ ದೊರಕಿಸಿಕೊಟ್ಟಿದ್ದರು.

INX media case: ಪಿ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿಗೆ ಸಮನ್ಸ್INX media case: ಪಿ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿಗೆ ಸಮನ್ಸ್

2019ರಲ್ಲಿ ಆಗಸ್ಟ್ 21ರಂದು ಹೈಡ್ರಾಮಾ ನಡುವೆ ಪಿ ಚಿದಂಬರಂ ಅವರನ್ನು ದೆಹಲಿ ನಿವಾಸದಲ್ಲಿ ಸಿಬಿಐ ಬಂಧಿಸಿತ್ತು. ನಂತರ ತಿಹಾರ್ ಜೈಲಿನಲ್ಲಿದ್ದರು. ಮನಿಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು 2019ರ ಅಕ್ಟೋಬರ್ ತಿಂಗಳಲ್ಲಿ ಬಂಧಿಸಿತ್ತು. ಚಿದಂಬರಂ, ಕಾರ್ತಿ ಅಲ್ಲದೆ, ಕಾರ್ತಿ ಅವರ ಸಿಎ ಎಸ್ಎಸ್ ಭಾಸ್ಕರ್ ರಾಮನ್ ಅವರನ್ನು ಕೂಡಾ ಚಾರ್ಜ್ ಶೀಟ್ ನಲ್ಲಿ ಹೆಸರಿಸಿ ಜಾರಿ ನಿರ್ದೇಶನಾಲಯವು ಕೋರ್ಟಿಗೆ ವರದಿ ನೀಡಿತ್ತು. ಆದರೆ, ನಂತರ ಸಿಬಿಐ, ಜಾರಿ ನಿರ್ದೇಶನಾಲಯ ಪ್ರಕರಣ ಎರಡರಲ್ಲೂ ಷರತ್ತುಬದ್ಧ ಜಾಮೀನು ಪಡೆದುಕೊಂಡಿದ್ದಾರೆ.

ವಿದೇಶದಿಂದ ನೇರವಾಗಿ ಬಂಡವಾಳ ಹೂಡಿಕೆ ಅನುಮತಿ ಪಡೆದ ಐಎನ್ ಎಕ್ಸ್ ಮೀಡಿಯಾಕ್ಕೆ ಶೇ 26ರಷ್ಟು ಹೂಡಿಕೆಯನ್ನು ಐಎನ್ ಎಕ್ಸ್ ನ್ಯೂಸ್ ನಲ್ಲಿ ತೊಡಗಿಸಿಕೊಳ್ಳಲು ಮುಂದಾಗುತ್ತದೆ. ಆದಾಯ ತೆರಿಗೆ ಇಲಾಖೆ ಗಮನಕ್ಕೆ ಬಂದು ಹೂಡಿಕೆ ಕಷ್ಟವಾಗುತ್ತದೆ. ನಂತರ ಕಾರ್ತಿ ಎಂಟ್ರಿಯಾಗಿ 4.6 ಕೋಟಿ ರು ಹೂಡಿಕೆಗೆ FIPB ಅನುಮತಿ ಪಡೆದು 300 ಕೋಟಿ ವಿದೇಶಿ ಹೂಡಿಕೆ ಪಡೆಯಲಾಗಿದೆ ಎಂಬುದು ಆರೋಪ. ಈ ಡೀಲ್ ಪೂರ್ಣಗೊಳಿಸಲು ಮಧ್ಯವರ್ತಿ ಸಂಸ್ಥೆ, ಕಿಕ್ ಬ್ಯಾಕ್ ಪಡೆಯಲು ಬೇನಾಮಿ ಸಂಸ್ಥೆಯನ್ನು ಕಾರ್ತಿ ಸೂಚಿಸಿದ್ದರು ಎಂಬ ಆರೋಪವಿದೆ.

English summary
In a big relief for senior congress leader P Chidambaram, Delhi High Court on Tuesday stayed further trial court proceedings in INX media case being probed by the Central Bureau of Investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X